Site icon TUNGATARANGA

ವಿಧಾನಸಭಾ ಚುನಾವಣೆಯಲ್ಲಿ ಸೋಲಿಗೆ ಕಾರಣವೇನು ಹರತಾಳು ಹಾಲಪ್ಪ ಏನು ಕಾರಣ ಹೇಳಿದ್ರು ?

ಹೊಸನಗರ: ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಕಾರಣವಾಗಿದೆಯೇ ಹೊರತು ಕಾರ್ಯಕರ್ತರ ನನ್ನ ಪಾತ್ರವೇನು ಇಲ್ಲ ಎಂದು ಹರತಾಳು ಹಾಲಪ್ಪನವರು ಹೇಳಿದರು.

ಹೊಸನಗರದ ಬಿಜೆಪಿ ಕಛೇರಿಯಲ್ಲಿ ಮತದಾರರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿ ಕಾರ್ಡ್ ಎಷ್ಟು ಯಶಸ್ವಿಯಾಗಲಿದೆ ಎಂದು ಕಾದು ನೋಡುವ ಸಂದರ್ಭ ಬಂದಿದೆ. ಬಿಜೆಪಿ ಕಾರ್ಯಕರ್ತರು ಸಂಘಟಿತರಾಗಿ ಜನರ ಸೇವೆ ಮಾಡುವುದನ್ನು ಬಿಟ್ಟು ಸೋಲಿನಿಂದ ಹತಾಶರಾಗಿ ಕುಳಿತುಕೊಳ್ಳುವುದು ಬೇಡ. ಸೋತಿದ್ದೇನೆ ಎಂದು ಊರು ಬಿಡುವ ಮಗ ನಾನಲ್ಲ. ಸೋಲು ಗೆಲುವು ಒಂದು ನಾಣ್ಯದ ಎರಡು ಮುಖಗಳಿದಂತೆ ಸ್ಪರ್ಧೆಯಲ್ಲಿ ಒಬ್ಬರು ಸೋಲಲೇ ಬೇಕು ಇನ್ನೊಬ್ಬರು ಗೆಲ್ಲಲೇ ಬೇಕು ಅದಕ್ಕಾಗಿ ದುಃಖಿಸುತ್ತ ಕುಳಿತರೆ ಹತಾಶೆ ಮನೋಭಾವಗೊಂಡರೆ ಕಾರ್ಯಕರ್ತರಿಗೆ ಧೈರ್ಯ ತುಂಬುವುವರ‍್ಯಾರು? ಅದಕ್ಕಾಗಿ ಚುನಾವಣೆ ಹಬ್ಬ ಮುಗಿದಿದೆ ಇನ್ನೊಂದು ಚುನಾವಣೆಯ ಹಬ್ಬಕ್ಕೆ ಸಜ್ಜಗಬೇಕಾಗಿದೆ.

ಬಿಜೆಪಿ ಕಾರ್ಯಕರ್ತರು ಸಂಘಟನೆಯಲ್ಲಿ ಹೆಸರು ಮಾಡಿರುವವರು ಎಲ್ಲರೂ ಒಗ್ಗಟಿನಿಂದ ಬಂದ ಕಷ್ಟಗಳನ್ನು ಎದುರಿಸೋಣ ಎಂದು ಗೆದ್ದವರು ನಿಮ್ಮನ್ನೂ ಪ್ರಚೋಧಿಸುವ ಸಾಧ್ಯತೆ ಇಲ್ಲದಿಲ್ಲ ಅದಕ್ಕೆ ಬಿಜೆಪಿಯ ಕಾರ್ಯಕರ್ತರು ಉದ್ವೇಗಕ್ಕೆ ಒಳಗಾಗಬಾರದು ಸೋತವರು ಯಾವತ್ತು ಅನಾಥರಾಗಿ ಬಿಡುತ್ತಾರೆ ಗೆದ್ದವರ ಹಿಂದೆ ಹಿಂದೆ ಸಾವಿರಾರು ಜನ ನಿಲ್ಲುತ್ತಾರೆ ಸೋತಿದ್ದೇವೆ ಎಂದ ಮಾತ್ರಕ್ಕೆ ನಮ್ಮ ಸಂಕಲ್ಪದಿಂದ ಹಿಂದೆ ಸರಿಯಬಾರದು ಜನರ ತೀರ್ಪನ್ನು ಗೌರವಿಸೋಣ ಕಾರ್ಯಕರ್ತರ ರಕ್ಷಣೆಯ ವಿಷಯಕ್ಕೆ ಬಂದರೆ ನಾನೇ ಖುದ್ದಾಗಿ ನಿಮ್ಮ ಜೊತೆ ನಿಲ್ಲುತ್ತೇನೆ.

ಕಳೆದ ಹತ್ತು ವರ್ಷಗಳಲ್ಲಿ ಕ್ಷೇತ್ರದಲ್ಲಿ ಯಾವುದೇ ಗಲಾಟೆಗಳು ನಡೆದಿಲ್ಲ ಮುಂದೆಯು ಸಹ ಅಂಥಹ ಗಲಾಟೆಗಳು ಆಗಬಾರದು ನೀವು ಸಹನೇ ಇಂದ ಇದ್ದು ಸರ್ಕಾರದ ಭರವಸೆಗಳನ್ನು ಈಡೇರಿಸುತ್ತಿದ್ದಾರಾ ಎಂಬುದನ್ನು ಮನವರಿಕೆ ಮಾಡಿಕೊಳ್ಳುವುದರ ಜೊತೆಗೆ ಸರ್ಕಾರ ನೀಡುತ್ತಿರುವ ಸವಲತ್ತು ನಮ್ಮ ಕ್ಷೇತ್ರದ ಮನೆಗಳಿಗೆ ತಲುಪಿಸುತ್ತಿದ್ದಾರ, ಇಲ್ಲವಾ ಎಂಬುದನ್ನು ಮನವರಿಕೆ ಮಾಡಿಕೊಳ್ಳುತ್ತಿರಬೇಕು. ಏನೇ ಆದರೂ ನಮ್ಮ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೆನ್ನಿಗೆ ನಾನಿದ್ದು ನಮ್ಮ ಕಾರ್ಯಕರ್ತರಿಗೆ ತೊಂದರೆಯಾದರೆ ಸುಮ್ಮನಿರುವುದಿಲ್ಲ ಎಂದರು.

ಸಾಗರ- ಹೊಸನಗರದ ಬಿಜೆಪಿಯ ಅಭ್ಯರ್ಥಿ ಹರತಾಳು ಹಾಲಪ್ಪನವರು ಸೋತಿರುವುದರಿಂದ ಮತದಾರರಿಗೆ ಅಭಿನಂದನ ಸಭೆಯಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕಣ್ಣೀರು ಹಾಕುತ್ತಿರುವ ದೃಶ್ಯ ಕಂಡು ಬಂದಿದ್ದು ಇವರಿಗೆ ಹರತಾಳು ಹಾಲಪ್ಪನವರು ಸಮಧಾನ ಪಡಿಸಿದ ಪ್ರಸಂಗವೂ ನಡೆಯಿತು.

ಈ ಅಭಿನಂದನಾ ಸಮಾರಂಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡು, ಟೌನ್ ಘಟಕದ ಅಧ್ಯಕ್ಷ ಕೋಣೆಮನೆ ಶಿವಕುಮಾರ್, ಎನ್ ಶ್ರೀಧರ ಉಡುಪ, ವೀರೇಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಬಿಜೆಪಿ ಹಿರಿಯರಾದ ಎನ್.ಆರ್. ದೇವಾನಂದ್, ಉಮೇಶ್ ಕಂಚುಗಾರ್, ಪಟ್ಟಣ ಪಂಚಾಯತಿ ಸದಸ್ಯರಾದ ಗಾಯಿತ್ರಿ ನಾಗರಾಜ್, ಎಂ.ಎನ್. ಸುಧಾಕರ್, ಶ್ರೀಪತಿರಾವ್, ಗುರುರಾಜ್, ಗುಲಾಬಿ ಮುರಿಯಪ್ಪ, ಕೃಷ್ಣವೇಣಿ, ಯಾಸೀರ್, ಮಂಡಾನಿ ಮೋಹನ್, ರಾಜೇಶ್ ಕೀಳಂಬಿ ಶಿವಾನಂದ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Exit mobile version