ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೇಟ್ ಘೋಷಣೆಯ ನಂತರ ರಾಜಕೀಯ ಮುತ್ಸದ್ದಿ ತೋರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಶಬ್ಬಾಸ್ಗಿರಿ ಪಡೆದಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ನಂತರ ಶಿವಮೊಗ್ಗ
ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಚೆನ್ನಬಸಪ್ಪ ಅವರ ಪರವಾಗಿ ಪ್ರಚಾರ ಮಾಡಿದ್ದು, ಪ್ರಚಾರವಾಗಲೇ ಇಲ್ಲ.
೬೦ ಸಾವಿರ ಮತಗಳ ಅಂತರದಿಂದ ಗೆಲುವು ಎಂದು ಹೇಳುತ್ತಿದ್ದ ಈಶ್ವರಪ್ಪ ಅವರಿಗೆ ಚೆನ್ನಬಸಪ್ಪ ಅವರು ಗೆದ್ದದ್ದು ಗೊತ್ತಾಗಿರಲಿಕ್ಕೇಬೇಕು. ಆದರೆ ಅತ್ತ ಸುಳಿಯಲಿಲ್ಲ. ಮಗ ಕಾಂತೇಶ್ ಸಹ ಕಣ್ಣಿಗೆ ಕಾಣಲಿಲ್ಲ. ಖುಷಿಯಾಗಿದ್ದರೆ ಈಶ್ವರಪ್ಪ
ಕನಿಷ್ಠ ಪಕ್ಷ ಟಿವಿ ಕಣ್ಣಿಗಾದರೂ ಕಾಣುತ್ತಿದ್ದರಲ್ಲವೇ ಎಂಬುದು ಕೆಲವರ ಊವಾಚವಾಗಿದೆ,