Site icon TUNGATARANGA

ಶಿವಮೊಗ್ಗದಲ್ಲಿ 3 ಕೈ, 3 ಬಿಜೆಪಿ, 1 ಜೆಡಿಎಸ್‌ಸೊರಬದಲ್ಲಿ ಮಧುಗೆ ಭರ್ಜರಿ ಲೀಡ್ | ಶಿಕಾರಿಪುರದಲ್ಲಿ ವಿಜಯೇಂದ್ರ | ಶಿವಮೊಗ್ಗದಲ್ಲಿ ಚೆನ್ನಿ ಹಾರಿಸಿದ ಕಮಲ | ಗ್ರಾಮಾಂತರದಲ್ಲಿ ಶಾರದಾಪೂರ‍್ಯಾನಾಯ್ಕ್ ಹವಾ | ಭದ್ರಾವತಿಯಲ್ಲಿ ಸಂಗಮೇಶ್ ಪ್ರಯಾಸದ ಗೆಲುವು | ತೀರ್ಥಹಳ್ಳಿಯಲ್ಲಿ ಮತ್ತೆ ಬಾವುಟ ಹಾರಿಸಿದ ಆರಗ | ಬೇಳೂರು ಕೈ ಹಿಡಿದ ಸಾಗರ

ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಗ್ರ ಪಂಕ್ತಿಯ ಸ್ಥಾನಗಳಿಸಿದ್ದು, ಆಡಳಿತ ನಡೆಸುವ ಎಲ್ಲ ಹಕ್ಕನ್ನು ಹೊಂದುವ ಮೂಲಕ ಆಡಳಿತ ಪಕ್ಷವಾಗಿದ್ದ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಆಡಳಿತ ವಿರೋಧಿ ಅಲೆ ಇಲ್ಲಿ ಕೆಲಸ ಮಾಡಿದೆ.


ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೊರಬ, ಸಾಗರದಲ್ಲಿ ದಾಖಲೆಯ ಗೆಲುವು ಸಾಧಿಸುವ ಮೂಲಕ ಆಡಳಿತ ಪಕ್ಷದ ಶಾಸಕರುಗಳಿಗೆ ಪಾಠ ಕಲಿಸಿದ್ದಾರೆ. ಸೊರಬದಲ್ಲಿ ಮಧು ಬಂಗಾರಪ್ಪ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಅತಿಹೆಚ್ಚು ಅಂತರದ ಬಹುಮತ ಸಾಧಿಸುವ ಮೂಲಕ ಕುಮಾರ್ ಬಂಗಾರಪ್ಪ ಅವರಿಗೆ ಹಾಗೂ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.


ಗೋಪಾಲಕೃಷ್ಣ ಬೇಳೂರು ಅವರು ಸಾಗರದಲ್ಲಿ ಅಂತಹುದೇ ತಿರುಗೇಟು ನೀಡಿದ್ದು, ಸುಮಾರು ೧೭ ಸಾವಿರದ ಮತಗಳ ಅಂತರವನ್ನು ಕಾಯ್ದಿರಿಸಿಕೊಂಡಿದ್ದಾರೆ. ಇನ್ನೂ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿನಿಂದಲೂ ಕಡಿಮೆ ಅಂತರದ ಮುನ್ನಡೆ ನಡೆಸುತ್ತಲೇ ಬಂದಿರುವ ಬಿ.ಕೆ.ಸಂಗಮೇಶ್ ಅವರು ಸುಮಾರು ೫ಸಾವಿರಕ್ಕೂ ಹೆಚ್ಚು ಮತಗಳಿಂದ ವಿಜಯ ಶಾಲಿಯಾಗಿದ್ದಾರೆ. ಬಿಜೆಪಿಯ ಮಂಗೋಟೆ ರುದ್ರೇಶ್ ೨೦ ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದಾರೆ.


ಭಾರಿ ಪೈಪೋಟಿ ಇದೆ ಎಂದು ಹೇಳಲಾಗುತ್ತಿದ್ದ ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದಾ ಪೂರ‍್ಯಾನಾಯಕ್ ಅವರು ಬಿಜೆಪಿ ಅಭ್ಯರ್ಥಿ ಹಿಂದಿನ ಶಾಸಕರಾಗಿದ್ದ ಅಶೋಕ್‌ನಾಯ್ಕ್ ವಿರುದ್ದ ಸುಮಾ ರು ೧೮ ಸಾವಿರಕ್ಕೂ ಹೆಚ್ಚು ಮತಗಳ ಅಂತರವನ್ನು ಕಾಯ್ದುಕೊಂಡು ಭರ್ಜರಿ ಗೆಲುವು ಸಾಧಿಸಿದ್ದಾರೆ.


ಉಳಿದಂತೆ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚೆನ್ನಬಸಪ್ಪ ಅವರು ೨೬ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನಲ್ಲಿ ಯೋಗೇಶ್ ಅವರು ಒಂದು ಹಂತದಲ್ಲಿ ಮೊದಲಿನಿಂ ದಲೂ ಕಟ್ಟಿ ಹಾಕಿದ್ದರು. ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿ ಚೆನ್ನಬಸಪ್ಪ ಅವರಿಗೆ ನಿರೀಕ್ಷೆಗೂ ಮೀರಿ ಮತಗಳನ್ನು ಪಡೆದ್ದಾರೆ. ಇಲ್ಲಿ ಜೆಡಿ ಎಸ್‌ನಿಂದ ಸ್ಪರ್ಧಿಸಿದ್ದ ಆಯನೂರು ಮಂಜುನಾಥ್ ಅವರು ನೆಪ ಮಾತ್ರದ ಚುನಾವಣೆ ಎಂಬಂತೆ ಮತದಾರರ ಮನ ಸೆಳೆಯುವಲ್ಲಿ ವೈಫಲ್ಯ ಸಾಧಿಸಿದ್ದಾರೆ.


ಶಿವಮೊಗ್ಗದಲ್ಲಿ ಮೊದಲನೇ ಹಂತದ ಮತ ಏಣಿಕೆಯಲ್ಲಿ ೨೦೮೧ ಮತಗಳ ಅಂತರವನ್ನು ಕಾಯ್ದು ಕೊಂಡ ಚೆನ್ನಬಸಪ್ಪ ಅವರು ನಡೆದ ೧೮ ಸುತ್ತುಗಳ ಮತ ಏಣಿಕೆಯಲ್ಲೂ ಅಂತರವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಿದ್ದು ವಿಶೇಷ. ೧೬ನೇ ಸುತ್ತಿನಲ್ಲಿ ೮೨೬೨ ಮತಗಳ ಅಂತರ ಕಾಯ್ದುಕೊಂಡಿದ್ದ ಚೆನ್ನಬಸಪ್ಪ ೧೭ ನೇ ಹಂತದ ಏಣಿಕೆಯಲ್ಲಿ ಸುಮಾರು ೩ ಸಾವಿರಷ್ಟೂ ಕಡಿಮೆ ಮತ ಪಡೆದರೂ ಸಹ ೨೪೬೨೫ ಮತಗಳ ಅಂತರವನ್ನು ಉಳಿಸಿಕೊಂಡಿದ್ದರು. ಅಂತಿಮವಾಗಿ ೨೬ ಸಾವಿರ ಅಂತರ ಮತ ಸಿಕ್ಕಿತ್ತು. ೧೮ನೇ ಸುತ್ತಿನಲ್ಲಿ ೨೮೨೯೬ ಮತಗಳ ಅಂತರವನ್ನು ಉಳಿಸಿಕೊಂಡಿದ್ದರು.


ಶಿಕಾರಿಪುರ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಮೊದಲಿನಿಂದಲೂ ಸಾಮಾನ್ಯ ಅಂತರವನ್ನು ಉಳಿಸಿಕೊಂಡಿದ್ದ ವಿಜಯೇಂದ್ರ ಅವರು ಕನಿಷ್ಠ ಮತ ಪಡೆಯುತ್ತಿದ್ದರು. ಅದರೆ ಅವರ ನಿರೀಕ್ಷೆಯ ೫೦ ಸಾವಿರದ ಅಂತರ ಸಿಗಲೇ ಇಲ್ಲ. ಕೊನೆಗೆ ೧೨ ಸಾವಿರ ದಷ್ಟು ಅಂತರವನ್ನು ಉಳಿಸಿಕೊಂಡರು.


ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ವಿಜಯಿ ಆದ ಬಿಜೆಪಿಯ ಆರಗ ಜ್ಞಾನೇಂದ್ರ ಅವರು ಸುಮಾರು ೧೩ಸಾವಿರ ಮತಗಳ ಅಂತರದಿಂದ ಮುನ್ನಡೆಯಲಿದ್ದರು. ಕಿಮ್ಮನೆ ರತ್ನಾಕರ್ ಅವರೊಂದಿಗೆ ಮಂಜುನಾಥ್ ಗೌಡರು ಮಾಡಿದ ಯಾವುದೇ ಪ್ರಯತ್ನಗಳು ಸಫಲವಾದಂತೆ ಕಾಣಲಿಲ್ಲ. ಒಟ್ಟಾರೆ ಮತಗಳ ಏಣಿಕೆ ಹಾಗೂ ಅಂಶಗಳು ಒತ್ತಟ್ಟಿಗಿರಲಿ ಶಿವಮೊಗ್ಗ ಅತಂತ್ರ ವಿಧಾನಸಭಾ ಪಕ್ಷಗಳ ಅಭ್ಯರ್ಥಿಗಳನ್ನು ಹೊಂದಿ ರುವುದು ಸರಿಯಷ್ಟೇ. ಇದರ ಮೂ ಲಕ ಜಿಲ್ಲೆಯ ಕೆಲಸ ನಡೆಯುವುದೇ.

Exit mobile version