ಜಿಲ್ಲೆಯಲ್ಲಿ ಅತಿ ಹೆಚ್ಚು ಮತಗಳ ಅಂತವನ್ನು ಗಿಟ್ಟಿಸಿಕೊಂಡ ಸೊರಬ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ.
12ನೇ ಸುತ್ತಿನ ಮತ ಎಣಿಕೆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಸಹೋದರ ಕುಮಾರ ಬಂಗಾರಪ್ಪ ಅವರಿಗಿಂತ 31822 ಮತಗಳನ್ನು ಹೆಚ್ಚಾಗಿ ಪಡೆದಿದ್ದು, ಇದು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪಡೆದಿರುವ ದೊಡ್ಡ ಅಂತರ.
ಭದ್ರಾವತಿ ವಿಧಾನಸಭಾ ಕ್ಷೇತ್ರದ 9ನೇ ಸುತ್ತಿನ ನಂತರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಕೆ.ಸಂಗಮೇಶ್ ಅವರು 5808 ಮತಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಅವರು 13 ನೇ ಸುತ್ತಿನ ನಂತರ 59970 ಮತ ಪಡೆದಿದ್ದು, ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್ ಅವರು ೫೨೪೧೦ ಮತಳನ್ನು ಪಡೆದಿದ್ದಾರೆ. 7 ಸಾವಿರ ಮತಗಳ ಅಂತರನ್ನು ಕಾಯ್ದುಕೊಂಡಿದ್ದಾರೆ.
ಶಿಕಾರಿಪುರ ಬಿಜೆಪಿ ಅಭ್ಯರ್ಥಿ ವಿಜಯೇಂದ್ರ ಅವರು 8ನೇ ಸುತ್ತಿನ ಮುಕ್ತಾಯದಲ್ಲಿ 39376 ಮತ ಪಡೆದಿದ್ದು, ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ಅವರು 30453 ಮತಗಳನ್ನು ಪಡೆದಿದ್ದಾರೆ. 5923 ಮತಗಳ ಅಂತರ ವಿಜಯೇಂದ್ರ ಪಾಲಾಗಿದೆ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ 13 ನೇ ಸುತ್ತಿನ ನಂತರ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿ ಯೋಗೀಶ್ ಅವರಿಗಿಂತ 24372 ಮತಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ 9ನೇ ಸುತ್ತಿನ ಮುಕ್ತಾಯದ ನಂತರ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ‍್ಯಾನಾಯ್ಕ್ ಅವರು ಬಿಜೆಪಿ ಅಭ್ಯರ್ಥಿ ಅಶೋಕ್ ನಾಯ್ಕ್ ಅವರಿಗಿಂತ 8409 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ.
ಸಾಗರ ವಿಧಾನ ಸಭಾ ಕ್ಷೇತ್ರದ 10 ನೇ ಸುತ್ತಿನ ಮತ ಎಣಿಕೆ ನಂತರ ಕಾಂಗ್ರೆಸ್ ಬೇಳೂರು ಗೋಪಾಲಕೃಷ್ಣ ಅವರು ಬಿಜೆಪಿಯ ಹಾಲಪ್ಪ ಅವರಿಗಿಂತ 9214 ಮತಗಳ ಅಂತರ ಪಡೆದಿಕೊಂಡಿದ್ದಾರೆ..