Site icon TUNGATARANGA

ನೊಂದಣಿ ಕಚೇರಿಯಲ್ಲಿ ಇನ್ನು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ|  ಮೇ 15 ರಿಂದ  ಕಾವೇರಿ-2 ತಂತ್ರಾಂಶದ ಮೂಲಕ ನೊಂದಣಿ 

ಶಿವಮೊಗ್ಗ: ನೊಂದಣಿ‌ ಮತ್ತು‌  ಮುದ್ರಾಂಕ ಇಲಾಖೆಯು ಕಾವೇರಿ- 2 ತಂತ್ರಾಂಶವನ್ನು ಈಗಾಗಲೇ ರಾಜ್ಯದ 125  ನೊಂದಣಿ ಕಚೇರಿಗಳಲ್ಲಿ ಅಳವಡಿಸಿದ್ದು,  ಕಾರ್ಯಾರಂಭ ಮಾಡಿದೆ. , ಶಿವಮೊಗ್ಗ ಜಿಲ್ಲೆಯಲ್ಲಿ  ಮೇ 15ರಿಂದ ಇದರ ಅನುಷ್ಠಾನವಾಗಲಿದೆ.

.

ಕಾವೇರಿ- 2 ತಂತ್ರಾಂಶದ ಬಗ್ಗೆ ಪತ್ರಕರ್ತರಿಗೆ ಅರಿವು ಮೂಡಿಸುವ ಸಂಬಂಧ ಕಾರ್ಯಾಗಾರವನ್ನು‌ ಶುಕ್ರವಾರ. ಪ್ರೆಸ್ ಟ್ರಸ್ಟ್ ನಲ್ಲಿ ಇಲಾಖೆ ಹಮ್ಮಿಕೊಂಡಿತ್ತು. 

ಕಾರ್ಯಕ್ರಮದಲ್ಲಿ‌ ಮಾತನಾಡಿದ ಜಿಲ್ಲಾ ನೊಂದಣಾಧಿಕಾರಿ ಬಿ ಎಂ. ಗಿರೀಶ್, ಈ ಯೋಜನೆ ಮೂಲಕ ಸಾರ್ವಜನಿಕರು ತಮ್ಮ ಆಸ್ತಿ ಮತ್ತಿತರ ನೊಂದಣಿ ಯನ್ನು  ನೇರವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಮಾಡಿಕೊಳ್ಳಬಹುದು.  ಇದು ಜನಸ್ನೇಹಿ, ಪಾರದರ್ಶಕ, ಸುಲಲಿತ, , ಸುಗಮ, ವಿಶ್ವಾಸಾರ್ಹ ಮತ್ತು ನಿಗದಿತ ವೇಳೆಯಲ್ಲಿ ಕೆಲಸ ಆಗುವಂತಹುದಾಗಿದೆ ಎಂದರು.

 2003 ರಿಂದ ಕಾವೇರಿ -1 ತಂತ್ರಾಂಶ ಜಾರಿಯಾಗಿದೆ. ಅದಕ್ಕೂ ಮುನ್ನ ಮ್ಯಾನ್ಯುಯಲ್ ಪದ್ದತಿ ಮೊದಲು ಜಾರಿಗೆ ಇತ್ತು.

2023ರಿಂದ ಕಾವೇರಿ-2 ಹೊಸ ತಂತ್ರಾಂಶ 15 ಜಿಲ್ಲೆಯಲ್ಲಿ ಜಾರಿ ಆಗಿದೆ ಎಂದರು. 

 ಇದರಿಂದ ಕಾವೇರಿ-1 ತಂತ್ರಾಂಶದ ಸಮಸ್ಯೆ ಬಗೆಹರಿಯಲಿದೆ. ಸಾರ್ವಜನಿಕರಿಗೆ ನೊಂದಣಿಯಲ್ಲಿ  ಕಾಯುವ ಪ್ರಮೇಯ ಇನ್ನಿರುವುದಿಲ್ಲ. . ನೊಂದಣಿ ಮೊದಲೇ ತಮ್ಮ ದಾಖಲೆ ಅಪ್ ಲೋಡ್ ಮಾಡಬಹುದು.ಈಗಾಗಲೇ ಕಂಪ್ಯೂಟರ್ ಆಪರೇಟರ್ ಗಳಿಗೆ ಹೊಸ ತಂತ್ರಾಂಶದ ಬಗ್ಗೆ ತರಬೇತಿ ನೀಡಲಾಗಿದೆ ಎಂದರು.

ಈ ಸೇವೆಗಳು ನಾಗರಿಕರು ತಮ್ಮ ಸ್ಲಾಟ್‌ಗಳನ್ನು ಬುಕ್ ಮಾಡುವ ಸಮಯದಲ್ಲಿ ಪೂರ್ವ-ನೋಂದಣಿ ವಿವರಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲು ಅನುಕೂಲಗೊಳಿಸುತ್ತವೆ. ನೋಂದಣಿ ದಾಖಲೆಗಳಲ್ಲಿ ಯಾವುದೇ ದೋಷಗಳನ್ನು ತಪ್ಪಿಸಲು ಇದು ನಾಗರಿಕರಿಗೆ ಸಹಾಯ ಮಾಡುತ್ತದೆ. ನೋಂದಣಿ ಸಮಯದಲ್ಲಿ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಬಹುದು. ಇದು ನೋಂದಣಿಗಾಗಿ ನಾಗರಿಕರ ಕಾಯುವ ಸಮಯವನ್ನು ತಪ್ಪಿಸುತ್ತದೆ. ಹೆಚ್ಚುವರಿಯಾಗಿ, ಡಾಕ್ಯುಮೆಂಟ್ ನೋಂದಣಿಗೆ ತೆಗೆದುಕೊಳ್ಳುವ ಸರಾಸರಿ ಸಮಯವು 15 ನಿಮಿಷಗಳಿಂದ 10 ನಿಮಿಷಗಳಿಗೆ ಕಡಿಮೆಯಾಗುತ್ತದೆ ಎಂದರು.

 ಕಾವೇರಿ-2 ತಂತ್ರಾಂಶವನ್ನು ಈಗಾಗಲೇ ಶಿವಮೊಗ್ಗ ಉಪ ನೋಂದಣಿ ಕಚೇರಿಯಲ್ಲಿ  ಕಾವೇರಿ–2 ತಂತ್ರಾಂಶ ವನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಕಾವೇರಿ-2 

ತಂತ್ರಾಂಶವನ್ನು ರಾಜ್ಯದ ಎಲ್ಲಾ 

ನೋಂದಣಾಧಿಕಾರಿಗಳ ಕಚೇರಿ ವ್ಯಾಪ್ತಿಯ ಉಪ ನೋಂದಣಿ ಕಛೇರಿಗಳಲ್ಲಿ ಪ್ರಸ್ತಾಪಿಸಿದಂತೆ ನಿಯಮಾನುಸಾರ ಇದೀಗ ಅನುಷ್ಠಾನಗೊಳಿಸಲಾಗಿದೆ ಎಂದರು.

ಕಾವೇರಿ ಆನ್‌ಲೈನ್ ಸೇವೆಯು ಕರ್ನಾಟಕ ಸರ್ಕಾರದ ಮುಂದ್ರಾಂಕ ಮತ್ತು ನೋಂದಣಿ ಇಲಾಖೆಯ ವೆಬ್ ಆಧಾರಿತ ಅಪ್ಲಿಕೇಶನ್ ಆಗಿದೆ, ಇದು ದಾಖಲೆ ಮತ್ತು ವಿವಾಹ ನೋಂದಣಿಗೆ ಅಗತ್ಯವಿರುವ ನಾಗರಿಕರಿಗೆ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಸ್ಟ್ಯಾಂಪ್ ಡ್ಯೂಟಿ, ಆಸ್ತಿ ಮಾರ್ಗಸೂಚಿಗಳ ಮೌಲ್ಯ, ಡಾಕ್ಯುಮೆಂಟ್ ನೋಂದಣಿ ಮತ್ತು ಮದುವೆ ನೋಂದಣಿಗಾಗಿ ಡೇಟಾ ನಮೂದು ಇತ್ಯಾದಿಗಳ ವಿವರಗಳನ್ನು ತಿಳಿದುಕೊಳ್ಳಲು ಇದು ನಾಗರಿಕರಿಗೆ ಅನುವು ಮಾಡಿಕೊಡುತ್ತದೆ ಎಂದರು.

ಈ ಸೇವೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಒಂದು ಅತಿಥಿ ಬಳಕೆದಾರರಿಗೆ ಮತ್ತು ಇನ್ನೊಂದು ನೋಂದಾಯಿತ ಬಳಕೆದಾರರಿಗೆ . ಕಾವೇರಿ-2  ನಲ್ಲಿ ಎಲ್ಲಾ ಆನ್ಲೈನ್ ಸೇವೆ ದೊರಕಲಿದೆ ಎಂದರು.

ಅತಿಥಿ ಬಳಕೆದಾರರಿಗಾಗಿ ಸೇವೆಗಳು,ನೋಂದಾಯಿತ ಬಳಕೆದಾರರಿಗೆ ಸೇವೆಗಳ ಲಿಸ್ಟ್ ಮಾಡಲಾಗಿದೆ.

ಸ್ಟ್ಯಾಂಪ್ ಡ್ಯೂಟಿ ಲೆಕ್ಕಾಚಾರವನ್ನು,

 ಆಸ್ತಿ ಮಾರ್ಗಸೂಚಿಗಳ ಮೌಲ್ಯವನ್ನು,

ನೇಮಕಾತಿ ಸಮಯಗಳು,

ಉಪ ರಿಜಿಸ್ಟ್ರಾರ್ ಕಚೇರಿಗಳನ್ನು ಪತ್ತೆ ಮಾಡಬಹುದು.

ಡಿಜಿಟಲ್ ಸಹಿಯೊಂಧಿಗೆ ನೊಂದಣಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ  ಇಲಾಖೆಯ ಸಹಾಯಕ ಅಧಿಕಾರಿಗಳಾದ ಚೇತನ್, ಧನರಾಜ್, ಡಿ.ಎಸ್.ರವಿ.ಬಸವರಾಜ್ ಹಾಜರಿದ್ದರು.

ReplyReply allForward
Exit mobile version