ಗೆಲುವಿನ ಮಾಲೆ ಯಾರ ಹೆಗಲಿಗೆ- ಗುಟ್ಟಿನ ಮತದಾನ ಬೆರಳ ಶಾಹಿಯಿಂದ ಬಹಿರಂಗ
ಶಿವಮೊಗ್ಗ,ಮೇ.12:
ತೀವ್ರ ಕುತೂಹಲ ಮೂಡಿಸಿರುವ ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಅಡೆ ತಡೆ ಇಲ್ಲದೇ ಶಾಂತಿಯುತವಾಗಿ ಮತದಾನ ನಡೆದಿದ್ದು, ಮೇ.13ರ ನಾಳಿನ ಶನಿವಾರ ಫಲಿತಾಂಶ ಹೊರಬೀಳಲು ಕ್ಷಣಗಣನೆ ಆರಂಭವಾಗಿದ್ದು, ಲೆಕ್ಕಾಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳ ಎದೆ ಢವ ಢವ ಎನ್ನುತ್ತಿದೆ.
ಇನ್ನು 24 ಗಂಟೆಗಳ ಕಾಲ ಕಾಯಬೇಕಿರುವ ಚುನಾವಣಾ ಫಲಿತಾಂಶದ ಅವಧಿಯಲ್ಲಿ ಅಭ್ಯರ್ಥಿಗಳು ಹಾಗೂ ಅವರ ಕುಟುಂಬ ಮತ್ತು ಸಹವರ್ತಿಗಳು ಪರಸ್ಪರ ಚರ್ಚೆ ನಡೆಸುತ್ತಿದೆ. ಅವರು ಮನಸ್ಸನ್ನು ಗಟ್ಟಿ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೂ ಕಂಡು ಕಾಣದ ತಳಮಳ ಅವರ ಮನದಲ್ಲಿ ಹುದುಗಿರುವುದು ಕಂಡುಬರುತ್ತವೆ.
ಕಳೆದ ಬಾರಿಗೆ ಹೊಲಿಸಿಕೊಂಡರೇ ಮತದಾನದ ಪ್ರಮಾಣ ಕಡಿಮೆಯಾಗಿದ್ದು, ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮೇ 13ರಂದು ಶನಿವಾರ ಬೆಳಿಗ್ಗೆ 8ಗಂಟೆಯಿಂದ ಪ್ರಾರಂಭವಾಗಲಿದ್ದು, ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಚುನಾವಣೆಯಲ್ಲಿ ಅವರು ಗೆಲ್ಲುತ್ತಾರೆ ಇವರು ಗೆಲ್ಲುತ್ತಾರೆ ಎಂದು ಐಪಿಎಲ್ ಮಾದರಿಯ ಬೆಟ್ಟಿಂಗ್ ವ್ಯವಹಾರ ನಡೆಯುತ್ತಿದ್ದು ಶಿವಮೊಗ್ಗ ನಗರದಲ್ಲಿ ಬಿಜೆಪಿಯ ಚನ್ನಬಸಪ್ಪ ಹಾಗೂ ಕಾಂಗ್ರೆಸ್ನ ಎಚ್.ಸಿ.ಯೋಗೇಶ್ ನಡುವೆ ಸಾಕಷ್ಟು ಬೆಟ್ಟಿಂಗ್ ನಡೆಯುತ್ತಿದೆ. ವಿಶೇಷವೆಂದರೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ವಿಜಯೇಂದ್ರ ಪರವಾಗಿ ಕಟ್ಟಿದ ಬೆಟ್ಟಿಂಗ್ ನ ಎರಡರಷ್ಟು ಹಣ ಸಿಗುತ್ತದೆ ಎಂಬ ಕಾರಣಕ್ಕೆ ನಾಗರಾಜ್ ಗೌಡರ ಪರವಾಗಿಯೂ ಸಹ ಹಣ ಕಟ್ಟುವವರ ಸಂಖ್ಯೆ ಕಂಡುಬರುತ್ತಿದೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಭದ್ರಾವತಿ ಸಾಮಾನ್ಯವಾಗಿ ಚುನಾವಣೆಯ ಕ್ಷೇತ್ರ ಎನ್ನಲಾಗಿದ್ದು, ಅಲ್ಲಿ ಆ ಪ್ರಮಾಣದ ವ್ಯವಹಾರ ದೊಡ್ಡದಾಗಿ ನಡೆಯುತ್ತಿಲ್ಲವಂತೆ.
ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದಾ ಪೂರ್ಯಾ ನಾಯಕ್ ಹಾಗೂ ಅಶೋಕ್ ನಾಯಕ್ ಹೆಸರಿನ ನಡುವೆ ಬಹಳಷ್ಟು ಕಡೆ ಈ ಬೆಟ್ಟಿಂಗ್ ನಡೆಯುತ್ತಿದೆ ಎನ್ನಲಾಗಿದ್ದು,ಇಲ್ಲಿ ಶಾರದಾ ಅವರು ಅಶೋಕ್ ನಾಯಕ್ ಅವರಿಗಿಂತ ಪರವಾದ ನಿಲುವಿನ ಜೂಜಿನ ಆಟ ಹೆಚ್ಚಾಗಿ ನಡೆಯುತ್ತಿದೆಯಂತೆ.
ತೀರ್ಥಹಳ್ಳಿಯಲ್ಲಿ ಕಿಮ್ಮನೆ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ನಡುವೆ ಬೆಟ್ಟಿಂಗ್ ನಡೆಯುತ್ತಿದ್ದು ಕಿಮ್ಮನೆ ಈ ಬಾರಿ ಈ ದಂಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.
ಸೊರಬದಲ್ಲಿ ಮಧು ಬಂಗಾರಪ್ಪ ಕುಮಾರ್ ಬಂಗಾರಪ್ಪ ಅವರಿಗಿಂತ ಮುಂಚೂಣಿಯ ಸ್ಥಾನ ಪಡೆದಿದ್ದು, ಸಾಗರದಲ್ಲೂ ಸಹ ಗೋಪಾಲಕೃಷ್ಣ ಬೇಳೂರು ಅವರು ಹಾಲಪ್ಪ ಅವರನ್ನು ಹಿಂದಿಕ್ಕಿದ್ದಾರೆ.
ಅಂತೇಯೇ ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ನಾಳೆ ಆರಂಭವಾಗಲಿದ್ದು ಮಧ್ಯಾಹ್ನ 11ರೊಳಗೆ ನಿಚ್ಚಳ ಬಹುಮತ ದೊರಕಲಿದೆ.
ನಗರದಲ್ಲಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ (ಚೆನ್ನಿ), ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್, ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೀಶ್ ನಡುವೆ ತೀವ್ರ ಪೈಪೋಟಿ ನಡೆಯಲಾಗುವುದು ಎಂದು ಜನರ ಪಿಸು ಮಾತುಗಳು ಕೇಳಿ ಬರುತ್ತಿವೆ, ಬಸ್, ರೈಲು ನಿಲ್ದಾಣ, ಆಟೋ ಪ್ರಯಾಣ, ಹೊಟೇಲ್, ತಂಪು ಪಾನೀಯ ಅಂಗಡಿ, ಬಟ್ಟೆ ಅಂಗಡಿ, ತರಕಾರಿ ಮಾರುಕಟ್ಟೆ ಹೀಗೆ ಎಲ್ಲೆಂದರಲ್ಲಿ ನಡೆಯುತ್ತಿದ್ದ ಚರ್ಚೆ ಈಗ ಹೆಚ್ಚಿನ ಸ್ವರೂಪದಲ್ಲಿ ಕಂಡು ಬರುತ್ತಿದೆ. ಚರ್ಚೆ ಹಂತದಲ್ಲಿ ಪರಸ್ಪರರು ತಮ್ಮದೇ ಅಂದಾಜಿನಲ್ಲಿ ವಿಶ್ಲೇಷಣೆ ಮಾಡುತ್ತ ಗೆಲ್ಲುವುದು ತಮ್ಮದೇ ಅಭ್ಯರ್ಥಿ ಎಂಬಂತೆ ಬಾಜಿ ಕಟ್ಟುತ್ತಿದ್ದಾರೆ.
ಮತ ಎಣಿಕೆ ಆವರಣದ ಸುತ್ತ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಅಂಚೆ ಮತಪತ್ರಗಳ ಎಣಿಕೆ ಮತ್ತು ಕಂಟ್ರೋಲ್ ಯುನಿಟ್ ಮೂಲಕ ಮತ ಎಣಿಕೆಯನ್ನು ಬೆಳಿಗ್ಗೆ 8 ಗಂಟೆಗೆ ಆರಂಭಿಸಲಾಗುವುದು. ಪ್ರತಿ ಮತ ಎಣಿಕೆ ಟೇಬಲ್‌ಗೆ ಒಬ್ಬ ಮೇಲ್ವಿಚಾರಕ, ಒಬ್ಬ ಸಹಾಯಕ ಮತ್ತು ಒಬ್ಬ ಮೈಕ್ರೋ ಅಬ್ಸರ್ವರ್ ನೇಮಕ ಮಾಡಿ ತರಬೇತಿ ನೀಡಲಾಗಿದೆ. ಇವಿಎಂ ಮತ ಎಣಿಕೆ ಪೂರ್ಣಗೊಂಡ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದು ವಿವಿಪ್ಯಾಟ್‌ಗಳನ್ನು ಆಯ್ಕೆ ಮಾಡಿ ಎಣಿಕೆ ಮಾಡಲಾಗುವುದು. ಮತ ಎಣಿಕೆ ಹಾಲ್‌ನಲ್ಲಿ ಮೊಬೈಲ್ ಮತ್ತಿತರ ಎಲೆಕ್ಟಾನಿಕ್ ವಸ್ತುಗಳನ್ನು ನಿರ್ಬಂಧಿಸಲಾಗಿದೆ.