ಜಿಲ್ಲೆಯಲ್ಲಿ ಶೇ.79.14 ಮತದಾನ
ಶಿವಮೊಗ್ಗ, ಮೇ 11:
ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮೇ 10 ರಂದು ನಡೆದ ಮತದಾನದಲ್ಲಿ ಜಿಲ್ಲೆಯಲ್ಲಿ ಶೇ.79.14 ಮತದಾನ ಆಗಿದೆ.
ಜಿಲ್ಲೆಯ 1472515 ಮತದಾರರ ಪೈಕಿ 1165306 ಮತದಾರರು ಮತದಾನ ಮಾಡಿದ್ದಾರೆ. 728819 ಪುರುಷ ಮತದಾರರ ಪೈಕಿ 585132 ಮತದಾರರು, 743664 ಮಹಿಳಾ ಮತದಾರರ ಪೈಕಿ 580165 ಮತದಾರರು ಹಾಗೂ 32 ಇತರೆ ಮತದಾರರಲ್ಲಿ 05 ಜನರು ಮತದಾನ ಮಾಡಿದ್ದು, ಪುರುಷ ಶೇ.80.28, ಮಹಿಳೆ ಶೇ.78.01 ಮತ್ತು ಇತರೆ ಶೇ.28.13 ಮತದಾನ ಆಗಿದೆ.
ಶಿವಮೊಗ್ಗ ಗ್ರಾಮಾಂತರ -111 ರಲ್ಲಿ 105557 ಪುರುಷ ಮತದಾರರಲ್ಲಿ 91038 ಮತದಾರರು(ಶೇ.86.25) ಮತ್ತು 106820 ಮಹಿಳಾ ಮತದಾರರಲ್ಲಿ 88663 ಮಹಿಳೆಯರು(ಶೇ.83) ಇತರೆ 01 ಸೇರಿ ಒಟ್ಟು 179702 ಜನರು(ಶೇ.84.61) ಮತದಾನ ಮಾಡಿದ್ದಾರೆ.
ಭದ್ರಾವತಿ-112 ರಲ್ಲಿ 103198 ಪುರುಷ ಮತದಾರರಲ್ಲಿ 75715(ಶೇ.73.37) ಮತ್ತು 108962 ಮಹಿಳಾ ಮತದಾರರಲ್ಲಿ 78184(ಶೇ.71.75) ಇತರೆ 01 ಸೇರಿ ಒಟ್ಟು 153900 ಮತದಾರರು(ಶೇ.72.54) ಮತದಾನ ಮಾಡಿದ್ದಾರೆ.
ಶಿವಮೊಗ್ಗ-113 ರಲ್ಲಿ 127441 ಪುರುಷ ಮತದಾರರಲ್ಲಿ 88883 (ಶೇ.69.74) ಮತ್ತು 133249 ಮಹಿಳಾ ಮತದಾರರಲ್ಲಿ 89310(ಶೇ.67.02) ಮಹಿಳೆಯರು ಇತರೆ 01 ಸೇರಿ ಒಟ್ಟು 178198 ಮತದಾರರು(ಶೇ68.35) ಮತದಾನ ಮಾಡಿದ್ದಾರೆ.
ತೀರ್ಥಹಳ್ಳಿ-114 ರಲ್ಲಿ 92877 ಪುರುಷ ಮತದಾರರ ಪೈಕಿ 79766(ಶೇ.85.88) ಮತ್ತು 93269 ಮಹಿಳಾ ಮತದಾರರಲ್ಲಿ 80443(ಶೇ.84.44) ಮಹಿಳೆಯರು ಸೇರಿ ಒಟ್ಟು 160209(ಶೇ.85.15) ಮತದಾರರು ಮತದಾನ ಮಾಡಿದ್ದಾರೆ.
ಶಿಕಾರಿಪುರ-115 ರಲ್ಲಿ 99781 ಪುರುಷ ಮತದಾರರಲ್ಲಿ 84059(ಶೇ.84.24) ಮತ್ತು 99024 ಮಹಿಳಾ ಮತದಾರರಲ್ಲಿ 81359(ಶೇ.82.16) ಮಹಿಳೆಯರು ಸೇರಿ ಒಟ್ಟು 165418(ಶೇ.83.20) ಮತದಾರರು ಮತದಾನ ಮಾಡಿದ್ದಾರೆ.
ಸೊರಬ-116 ರಲ್ಲಿ 98438 ಪುರುಷ ಮತದಾರರ ಪೈಕಿ 83040(ಶೇ.84.36) ಮತ್ತು 96744 ಮಹಿಳಾ ಮತದಾರರಲ್ಲಿ 80156(ಶೇ.82.85) ಮಹಿಳೆಯರು, ಇತರೆ 01 ಸೇರಿ ಒಟ್ಟು 163197(ಶೇ.83.61) ಮತದಾರರು ಮತದಾನ ಮಾಡಿದ್ದಾರೆ.
ಸಾಗರ-117 ರಲ್ಲಿ 101527 ಪುರುಷ ಮತರಾರರ ಪೈಕಿ 82631(ಶೇ.81.39) ಮತ್ತು 103596 ಮಹಿಳಾ ಮತದಾರರಲ್ಲಿ 82050(ಶೇ.79.20)ಮಹಿಳೆಯರು ಇತರೆ 01 ಸೇರಿ ಒಟ್ಟು 164682(ಶೇ.80.28) ಮತದಾರರು ಮತದಾನ ಮಾಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ -111 ರಲ್ಲಿ 247 ಮತಗಟ್ಟೆಗಳು, ಭದ್ರಾವತಿ-112 ರಲ್ಲಿ 253, ಶಿವಮೊಗ್ಗ-113 ರಲ್ಲಿ 284 ತೀರ್ಥಹಳ್ಳಿ-114 ರಲ್ಲಿ 258, ಶಿಕಾರಿಪುರ-115 ರಲ್ಲಿ 234, ಸೊರಬ-116 ರಲ್ಲಿ 239, ಸಾಗರ-117 ರಲ್ಲಿ 267 ಮತಗಟ್ಟೆ ಸೇರಿದಂತೆ ಒಟ್ಟು 1782 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ.