ಶಿವಮೊಗ್ಗ: ರಾಜ್ಯ ವಿಧಾನಸಭೆ ಚುನಾವಣೆ ಮತದಾನದ ವೇಳೆ ಮತಗಟ್ಟೆ ಒಳಗಡೆ ಕೆಲ ಯುವಕರು ಫೋಟೊ ಕ್ಲಿಕಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಗೂ ಶೇರ್ ಮಾಡಿರುವ ಸ್ಕ್ರೀನ್ ಶಾಟ್ ಫೋಟೊಗಳು ವೈರಲ್ ಆಗಿವೆ.
ಸೊರಬ ತಾಲೂಕಿನ ಕುಪ್ಪಗಡ್ಡೆ ಹೋಬಳಿ ಗೆಂಡ್ಲದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮತದಾನದ ವೇಳೆ ಮತಗಟ್ಟೆಯಲ್ಲಿ ಓರ್ವ ಯುವಕ ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ತಮ್ಮ ವಾಟ್ಸಪ್ ಸ್ಟೇಟಸ್ ಮೂಲಕ ತಿಳಿಸಿದ್ದಾನೆ. ಶಿವಮೊಗ್ಗದ ಇನ್ನೂ ಕೆಲ ಯುವಕರು ವಾಟ್ಸಪ್ ಸ್ಟೇಟಸ್‌ಗೆ ಹಾಕಿಕೊಂಡಿರುವ ಕೆಲ ಸ್ಕ್ರೀನ್ ಶಾಟ್ ತುಂಗಾ ತರಂಗ ಪತ್ರಿಕೆಗೆ ದೊರೆಕಿವೆ.‘
ನಮ್ಮ ಮತ ನಮ್ಮ ಬಾಸ್’ಗೆ ಓಟು ಎಂದು ಕಾಂಗ್ರೆಸ್ ಅಭ್ಯರ್ಥಿ ಪರ ಮತ ನೀಡಿದ ಫೋಟೋ ವೈರಲ್ ಆಗಿದೆ ಹಾಗೂ ಕಲಮ ಚಿಹ್ನೆಯನ್ನು ಬಳಸಿ ಬಿಜೆಪಿ ಅಭ್ಯರ್ಥಿಗೆ ನೀಡಿರುವ ಫೋಟೊಗಳು ವೈರಲ್ ಆಗಿವೆ.‘
ಮೊಬೈಲ್ ಕೊಂಡೊಯ್ಯಲು ಬಿಟ್ಟವರು ಯಾರು?
ಇನ್ನು, ಮತಗಟ್ಟೆಯ ಒಳ ಭಾಗದಲ್ಲಿ ಮೊಬೈಲ್ ಪೋಟೋ ತೆಗೆಯುವುದು ನಿಷೇಧವಿದ್ದರೂ ಪೋಟೋ ತೆಗೆದದ್ದು ಹೇಗೆ. ಅಲ್ಲಿನ ಅಧಿಕಾರಿಗಳೇನು ಗೆಣಸು ತಿನ್ನುತ್ತಿದ್ದರಾ?
ಅಲ್ಲದೇ, ಮತದಾನದ ವೇಳೆ ಈ ಫೋಟೋ ಕ್ಲಿಕ್ಕಿಸಲು ಪರ್ಮಿಷನ್ ಕೊಟ್ಟಿದ್ದು ಯಾರು? ಮತಗಟ್ಟೆ ಒಳಗೆ ಮೊಬೈಲ್ ಕೊಂಡೊಯ್ದು ಫೋಟೋ ತೆಗೆಯುವಾಗ ಅಲ್ಲಿದ್ದ ಅಧಿಕಾರಿ ಹಾಗೂ ಭದ್ರತಾ ಸಿಬ್ಬಂದಿಗಳು ಏನು ಮಾಡುತ್ತಿದ್ದರು? ಇದಕ್ಕೆ ಯಾರು ಹೊಣೆ? ಇದು ಅವರ ಕರ್ತವ್ಯದ ನಿರ್ಲಕ್ಷವಲ್ಲವೇ ಎಂಬ ಪ್ರಶ್ನೆಗಳು ಉದ್ಬವವಾಗಿದ್ದು, ಇವಕ್ಕೆಲ್ಲಾ ಚುನಾವಣಾಧಿಕಾರಿಗಳು ಉತ್ತರ ನೀಡಬೇಕಿದೆ.