Site icon TUNGATARANGA

ಶಿವಮೊಗ್ಗದಲ್ಲಿ ಭಾರೀ ಗಾಳಿ ಮೋಡ ಕವಿದ ವಾತಾವರಣ: ರಸ್ತೆ ಮೇಲೆ ಬಿದ್ದ ಕರೆಂಟ್ ಕಂಬ | ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ | ಭದ್ರಾವತಿಯಲ್ಲಿ ಧಾರಾಕಾರ ಮಳೆ

ಶಿವಮೊಗ್ಗ: ಜಿಲ್ಲಾ ಕೇಂದ್ರದಲ್ಲಿ ಸಂಜೆ ಮೋಡ ಮುಸುಕಿದ ವಾತಾವರಣ ಕವಿದಿದ್ದು, ಭಾರೀ ಗಾಳಿ ಬೀಸಿದ ಪರಿಣಾಮ ಬಹಳಷ್ಟು ಕಡೆಗಳಲ್ಲಿ ಅಸ್ತವ್ಯಸ್ತ ಉಂಟಾಗಿದೆ.

ನಗರದಲ್ಲಿ ಭಾರೀ ಗಾಳಿ ಬೀಸಿದ ಪರಿಣಾಮ ರಸ್ತೆ ಮೇಲಿನ ಧೂಳಿನೊಂದಿಗೆ ಒಣಗಿದ ಮರಗಳ ಎಲೆ ಹಾಗೂ ಕಟ್ಟಿಗಳ ಅವಾಂತರ ಸೃಷ್ಠಿಸಿತ್ತು. ಪ್ರಮುಖವಾಗಿ ದ್ವಿಚಕ್ರ ವಾಹನ ಸವಾರರಿಗೆ ಕಿರಿಕಿರಿ ಉಂಟಾಯಿತು.

ಸ್ವಲ್ಪದರಲ್ಲಿ ತಪ್ಪಿದ ಭಾರೀ ಅನಾಹುತ
ಇನ್ನು, ಭಾರೀ ಗಾಳಿಯ ಪರಿಣಾಮ ಮದ್ದೂರು ರಸ್ತೆಯ ಇಂದಿರಾ ನಗರದ ಬಳಿಯಲ್ಲಿ ತೆಂಗಿನ ಮರವೊಂದು ವಿದ್ಯುತ್ ಕಂಬ ಹಾಗೂ ತಂತಿಯ ಮೇಲೆ ಉರುಳಿಬಿದ್ದಿದೆ. ಪರಿಣಾಮವಾಗಿ ವಿದ್ಯುತ್ ಕಂಬ, ತೆಂಗಿನ ಮರ ಹಾಗೂ ವಿದ್ಯುತ್ ತಂತಿ ರಸ್ತೆ ಮೇಲೆ ಬಿದ್ದಿದೆ. ಅದೃಷ್ಠವಷಾತ್ ಈ ಸಂದರ್ಭದಲ್ಲಿ ಇಲ್ಲಿ ಯಾರೂ ಇರದಿದ್ದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.

ಭದ್ರಾವತಿಯಲ್ಲಿ ಧಾರಾಕಾರ ಮಳೆ
ಇನ್ನು, ಸಂಜೆ ವೇಳೆಗೆ ನಗರದಲ್ಲಿ ಧಾರಾಕಾರ ಮಳೆ ಸುರಿದಿದೆ. ಇನ್ನೇನು ಮುತದಾನ ಮುಕ್ತಾಯವಾಗುವ ಸಮಯ ಸನಿಹಕ್ಕೆ ಬಂದ ವೇಳೆಯಲ್ಲಿ ಭಾರೀ ಮೋಡ ಕವಿದ ವಾತಾವರಣದೊಂದಿಗೆ ಮಳೆ ಸುರಿದಿದ್ದು, ಈ ವೇಳೆ ಮತ ಚಲಾಯಿಸಲು ಮತಗಟ್ಟೆಗೆ ತೆರಳುತ್ತಿದ್ದವರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯುಂಟಾಯಿತು.

Exit mobile version