Site icon TUNGATARANGA

ಕರುನಾಡ ಮತದಾನದ ಹಬ್ಬ, ಇದುವೇ ನಮ್ಮ ಸೇವಕರನ್ನು ಆಯ್ಕೆ ಮಾಡಿಕೊಳ್ಳುವ ಕ್ಷಣ/ ರಾಜ್ಯದಲ್ಲೇ ಶಿವಮೊಗ್ಗದಲ್ಲಿ ಗ್ರೇಟ್ ಸ್ಪಂದನೆ/ ಯುವ ಮನಸುಗಳ ಸಡಗರ

ಶಿವಮೊಗ್ಗ, ಮೇ.10:
ಕರುನಾಡ ಜನರಿಗಿಂದು ನಿಜಕ್ಕೂ ಹಬ್ಬ. ಸೂಕ್ತ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡುವ ಸಡಗರ. ಯಾರೋ ಕೆಲವರು ಒಂದಿಷ್ಟು ಜನ ಆಯಾ ಪಕ್ಷ, ಆಯಾ ಯೋಚನೆ ಎಂದು ಯೋಚಿಸುತ್ತಿದ್ದರೆ ಬಹುತೇಕ ಮತದಾರರು ಈ ಹಬ್ಬದೊಳಗೆ ಸಂಭ್ರಮಿಸಿದ್ದಾರೆ.


ಅದರಲ್ಲೂ 18 ವರ್ಷ ದಾಟಿದ ಹಾಗೂ ನೂರು ವರ್ಷ ವಯೋಮಿತಿಯ ಪ್ರತಿ ಮತದಾರ ಈ ಒಂದು ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ವಿಶೇಷವೆಂದರೆ ಇಡೀ ರಾಜ್ಯದಲ್ಲಿ ಬಾರಿ ಈ ಬಾರಿ ಅತಿ ಹೆಚ್ಚು ಮತದಾನವಾಗುತ್ತಿದೆ. ಪಕ್ಷಗಳ ಆಯ್ಕೆ, ರಾಜಕೀಯ ವ್ಯಕ್ತಿಗಳ ನಿರ್ಧಾರ ಏನೇ ಇರಲಿ ಇಡೀ ರಾಜ್ಯದ ಜನ ಸೂಕ್ತ ಹಾಗೂ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂಬ ಯೋಚನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವುದು ವಿಶೇಷ.
80 ವರ್ಷ ದಾಟಿದ ಬಹುತೇಕ ಹಿರಿಯರು ತಾವು ತಮ್ಮ ಮತವನ್ನು ಮನೆಯಲ್ಲೇ ಮತ ಹಾಕುವ ಅವಕಾಶವಿದ್ದರೂ ಸಹ ಕೆಲವರು ಅದನ್ನು ಒಪ್ಪಿಕೊಂಡಿಲ್ಲ. ನಾವು ಸಹ ಮತಗಟ್ಟೆಗೆ ಬರುತ್ತೇವೆ ಅಲ್ಲಿ ಮತ ಚಲಾಯಿಸುತ್ತೇವೆ ಎಂದಿರುವಷ್ಟು ಪ್ರಮಾಣದಷ್ಟೇ ಹಿರಿಯರು ಅಧಿಕಾರಿಗಳ ಮಾತಿಗೆ ಕಟ್ಟಿ ಬದ್ಧವಾಗಿ ಇಲ್ಲಿಗೆ ಬಂದು ಮತ ಚಲಾಯಿಸಲು ಮುಂದಾಗಿದ್ದಾರೆ.


ಇಲ್ಲಿ ಇದನ್ನು ವಿಶೇಷವೆನ್ನಲು ಕಾರಣವೇ ಹೌದು. ಮತದಾರರು ಅದರಲ್ಲೂ ಹಿರಿಯರು ಮತ ಚಲಾವಣೆಗೆ ಬಂದಾಗ ರಾಜ್ಯದೆಲ್ಲಿ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಪ್ರತಿ ಬೂತ್ ಗಳಲ್ಲಿ ವ್ಯವಸ್ಥೆಯನ್ನು ನೋಡಿಕೊಳ್ಳುವ ಅಧಿಕಾರಿಗಳು ಹಾಗೂ ನೌಕರರು ಹಿರಿಯರು ಬಂದರೆ ಅವರಿಗೊಂದು ಅವಕಾಶ ಮಾಡಿಕೊಟ್ಟಿರುವುದು ವಿಶೇಷವೇ ಹೌದು.


ಅವರಿಗೆ ಮೊದಲ ಆದ್ಯತೆಯಾಗಿ ಮತ ಚಲಾಯಿಸಲು ಅನುವು ಮಾಡಿಕೊಟ್ಟಿದ್ದಾರೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ, ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯ ಚುನಾವಣಾ ಅಧಿಕಾರಿ ಹಾಗೂ ಅವರ ಆಡಳಿತ ಯಂತ್ರ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರ ನೇತೃತ್ವದಲ್ಲಿ ಹೊಸ ಮತದಾರರಿಗೆ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಸಾಕಷ್ಟು ಜನರ ಮತದಾನದ ಕಾರ್ಡುಗಳನ್ನು ಸಕಾಲದಲ್ಲಿ ನೀಡಿದ್ದಾರೆ. ಇದು ಈಗಿನ ಯುವ ಮನಸುಗಳಮನೋಭಾವದ ಕುರಿತಾದ ಸ್ಪಂದನೆ.
ಇಂದು ಶಿವಮೊಗ್ಗ ಜಿಲ್ಲೆ ರಾಜ್ಯದಾದ್ಯಂತ ಸೂಕ್ತ ಸಮರ್ಥ ಯುವ ಮತದಾರರು ಸೂಕ್ತ ಸಮರ್ಥ ಅಭ್ಯರ್ಥಿಯ ಆಯ್ಕೆಯಲ್ಲಿ ತಮ್ಮದೇ ಪಾತ್ರವನ್ನು ವಹಿಸಿ ಮತದಾನ ಮಾಡುವ ಮೂಲಕ ತಮ್ಮ ಅಸ್ತಿತ್ವವನ್ನು ಒಂದು ಕಡೆ ಬೆಂಬಿಸಿಕೊಂಡರೆ ಮತ್ತೊಂದು ಕಡೆ ನಾಳೆಯಿಂದ ಭಾರತೀಯ ಪ್ರಜಾಪ್ರಭುತ್ವದ ಹಬ್ಬ ಹೇಗಿರಬೇಕು ಎಂಬ ಆಲೋಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Exit mobile version