Site icon TUNGATARANGA

ಶ್ರೀ ರಾಮಕೃಷ್ಣ ವಿದ್ಯಾನಿಕೇತನಕ್ಕೆ ಅದ್ವಿತೀಯ ಫಲಿತಾಂಶ / 600 ಕ್ಕೂ ಹೆಚ್ಚು ಅಂಕ ಪಡೆದ 22 ಮಕ್ಕಳು

ಇಲ್ಲಿನ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾ ನಿಕೇತನ ಸಂಸ್ಥೆಯ ಮಕ್ಕಳು ಪ್ರತಿ ವರ್ಷದಂತೆ ಈ ವರ್ಷವು ಸಹ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೧೫೦ ಅಂಕ ಪಡೆದಿದ್ದು, ಶೇ.೭೦ರಷ್ಟು ಮಕ್ಕಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.


ಪರೀಕ್ಷೆಯಲ್ಲಿ ಪಾಲ್ಗೊಂಡ ೧೬೦ ಮಕ್ಕಳು ಉತ್ತೀರ್ಣಗೊಂಡಿದ್ದು, ಶೇ.೧೦೦ ರ ಫಲಿತಾಂಶವನ್ನು ದಾಖಲಿಸಿದ್ದಾರೆ. ವಿಶೇಷವೆಂದರೆ ಪರೀಕ್ಷೆಯಲ್ಲಿ ಪಾಲ್ಗೊಂಡ ೨೩ ಮಕ್ಕಳು ೬೦೦ಕ್ಕೂ ಹೆಚ್ಚು ಅಂಕ ಪಡೆದಿದ್ದು, ವಿಷಯವಾರು ಈ ಮಕ್ಕಳು ಶೇ.೧೦೦ರ ಫಲಿತಾಂಶವನ್ನು ನೀಡಿದ್ದಾರೆ.


ದಿಶಾ ಶಣೈ ಹಾಗೂ ರೋಹಿಣಿ ಬಿ ಅವರು ೬೨೦ ಅಂಕ ಪಡೆದಿದ್ದು, ಪೂರ್ವಿ ಎಲ್.ರಾಜ್ ೬೧೯, ಹರ್ಷಿತಾ ಟಿ.ಎಂ ೬೧೮, ನಿಧಿ ಹೊಸ್ಮನೆ ೬೧೬, ದೀಪ್ತಿ ವಿ ಹಾಗೂ ವೆಂಕಟೇಶ್ ಎನ್ ಅವರು ೬೧೫ ಅಂಕಗ ಳಿಸಿದ್ದಾರೆ. ಅಂತೆಯೇ ಅಮೃತ ಡಿ, ತನ್ಮಯಿ ಆರ್ ೬೧೪, ಸನಿಕಾ ಎ.೬೧೩, ಕೃತಾತ್, ಸುಗೋಶ್ ಎನ್. ೬೧೧, ಸೈಯದ್ ಮಹಮ್ಮದ್ ಖಲಂದರ್, ಧನ್ಯ ಕೆ.ಎನ್, ಎ.ಯು ಗೌತಮಿ ೬೧೦,

ಸಿಂಚಿತಾ ವೈ.ಟಿ. ಸಮರ್ಥ್ ಡಿ.ವಿ, ೬೦೮, ದಿಶಾಂತ್ ಆರ್ ಸಬ್ರತ್ ೬೦೫, ತೇಜಸ್ ವಿ ೬೦೩, ಐಶ್ವರ್ಯ ಪಿ ಸಿಂಧೆ, ಪ್ರೇಮ್ ಹೆಚ್.ಪಿ ಗೌಡ ೬೦೨, ಚೇತನ್ ಕುಮಾರ್ ಕೆ.ವಿ. ೬೦೧, ಮೈತ್ರಿ ಆರ್ ೬೦೦ ಅಂಕ ಗಳಿಸಿದ್ದಾರೆ.


ಪರೀಕ್ಷೆಯಲ್ಲಿ ಪಾಲ್ಗೊಂಡ ೯೫ ಮಕ್ಕಳು ಅಂದರೆ ೬೦೦ಕ್ಕೂ ಹೆಚ್ಚು ಅಂಕ ಪಡೆದವರು ಸೇರಿ ಡಿಸ್ಟಿಂಕ್ಷನ್ ಗಳಿಸಿದ್ದಾರೆ. ೪೮ ಅತ್ಯುತ್ತಮ, ೨೨ ಉತ್ತಮ, ಉಳಿದ ಐವರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ಸೂಚಿಸಿ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಶಿಕ್ಷಕ ವೃಂದಕ್ಕೆ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನ ಕಾರ್ಯದರ್ಶಿ ಶೋಭಾವೆಂಕಟರಮಣ ಅವರು ಟ್ರಸ್ಟ್ ಪರವಾಗಿ ಅಭಿನಂದಿಸಿದ್ದಾರೆ.

Exit mobile version