Site icon TUNGATARANGA

ಶಿವಮೊಗ್ಗ | ಎಸ್ಸೆಸ್ಸಲ್ಸಿ ಪರೀಕ್ಷೆ : ಜಿಲ್ಲೆಯ ಟಾಪರ್ ಗಳ ಪಟ್ಟಿ ? | ಪರಿಣಾಮ ಬೀರದ ಶಿಕ್ಷಣ ಇಲಾಖೆಯ ಫಲಿತಾಂಶ ಸುಧಾರಣಾ ಕಾರ್ಯಕ್ರಮಗಳು, ಶಿಕ್ಷಣ ಇಲಾಖೆ ಎಂತ ಮಾಡ್ತು….? ನೂರಾರು ಪ್ರಶ್ನೆ

ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆಯನ್ನು 10 ರೊಳಗಿನ ಸ್ಥಾನದಲ್ಲಿ ಕಾಣಲು ಶಿಕ್ಷಣ ಇಲಾಖೆಯ ನಾನಾ ಪ್ರಯತ್ನದ ನಡುವೆಯೂ ಶಿವಮೊಗ್ಗ ಜಿಲ್ಲೆಯ ಫಲಿತಾಂಶ ಇಳಿಕೆ ಕಂಡಿದ್ದು. 10 ರೊಳಗಿನ ಬದಲು 30ರೊಳಗಿನ ಸ್ಥಾನಕ್ಕೆ ಕುಸಿದಿದೆ.

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ 26 ಮಂದಿ ಟಾಪರ್‌ಗಳನ್ನು ಹೊಂದಿದ್ದು, ಜಿವಾರು ಸ್ಥಾನದ ಲೆಕ್ಕಚಾರದಲ್ಲಿ 29ನೇ ಸ್ಥಾನಕ್ಕೆ ಕುಸಿದಿದೆ. 2021 ಸಾಲಿನಲ್ಲಿ ಜಿಲ್ಲಾವಾರು ಪಟ್ಟಿಯಲ್ಲಿ ಶಿವಮೊಗ್ಗ 19ನೇ ಸ್ಥಾನದಲ್ಲಿತ್ತು. ಕಳೆದ ಬಾರಿ 23ನೇ ಸ್ಥಾನಕ್ಕೆ ಕುಸಿದಿತ್ತು. ಈಗ ಮತ್ತೆ 3 ಸ್ಥಾನ ಇಳಿಕೆಯಾಗಿದ್ದು, ಶೇ.84 ಫಲಿತಾಂಶದೊಂದಿಗೆ 29ನೇ ಸ್ಥಾನಕ್ಕೆ ಕುಸಿದಿದೆ.

ಜಿಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ನಾಲ್ಕೆದು ವರ್ಷಗಳಿಂದ ಡಿಡಿಪಿಐ ನೇತೃತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿತ್ತು. ಜಿಲ್ಲೆಯನ್ನು ೧೦ರೊಳಗಿನ ಸ್ಥಾನದಲ್ಲಿ ಕಾಣಬೇಕೆಂಬ ಗುರಿಯೊಂದಿಗೆ ಆಯಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು ಫಲಿತಾಂಶ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಹುರಿದುಂಬಿಸಲಾಗಿತ್ತು. ಆದರೆ, ಈ ಬಾರಿ ಶಿಕ್ಷಣ ಇಲಾಖೆಯ ಹಾಗೂ ಶಾಲಾ ಮುಖ್ಯಸ್ಥರ ಪ್ರಯತ್ನ ಪರಿಣಾಮ ಬೀರಿಲ್ಲ.

ಜಿಲ್ಲೆಗೆ ಅಮಿತ್ ಟಾಪರ್:
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಚಿಟ್ಟೆಬೈಲು ಪ್ರಜ್ಞಾಭಾರತಿ ಪೌಢಶಾಲೆಯ ವಿಧ್ಯಾರ್ಥಿ ಅಮಿತ್ 625 ಕ್ಕೆ 624 ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ. ಶಿವಮೊಗ್ಗದ ಸಾಂದೀಪನಿ ಆಂಗ್ಲ ಮಾದ್ಯಮ ಶಾಲೆಯ ಆರ್. ಪ್ರಣಮ್ಯ 623, ಸೆಂಟ್ ಡೋಮಿನಿಕ್ಸ್ ಶಾಲೆ ಎಸ್.ನಿಖಿತ 623 ಅಂಕಗಳಿಸುವ ಮೂಲಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಅಂತೆಯೇ ಪ್ರಸ್ತುತ ವಿಕಾಸ, ಶ್ರೀ ರಾಮಕೃಷ್ಣ ವಿದ್ಯನಿಕೇತನ, ಆದಿಚುಂಚನಗಿರಿ ಶಾಲೆಗಳ ಮಕ್ಕಳು ಸಹ ಸಾಕಷ್ಟು ಅಂಕ ಗಳಿಸಿದ್ದಾರೆ. ನಾಳೆ ಸಮಗ್ರ ಮಾಹಿತಿ tungataranga.com ನಲ್ಲಿ ಇರುತ್ತೆ

Exit mobile version