2022-23 ನೆಯ ಸಾಲಿನ ಎಸ್’ಎಸ್’ಎಲ್’ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶೇ.೯೬.೮೦ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಚಿತ್ರದುರ್ಗ ಮೊದಲ ಸ್ಥಾನ ಪಡೆದುಕೊಂಡಿದ್ದು, ಶಿವಮೊಗ್ಗ ೨೯ನೇ ಸ್ಥಾನ, ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ.
ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಖ್ಯಸ್ಥರು ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದು, ಎಂದಿನಂತೆ ಈ ಬಾರಿಯೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಹೀಗಿದೆ ಫಲಿತಾಂಶದ ಹೈಲೆಟ್ಸ್: ಈ ಬಾರಿ ಶೇ.೮೩.೮೯ ರಷ್ಟು ಫಲಿತಾಂಶ ದಾಖಲು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ.೧೨ರಷ್ಟು ಫಲಿ ತಾಂಶ ಏರಿಕೆಯಾಗಿದ್ದು, ೭,೦೦,೬೧೯ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಶೇ.೯೬.೮೦ರಷ್ಟು ಫಲಿತಾಂ ಶದ
ಮೂಲಕ ಚಿತ್ರದುರ್ಗ ಪ್ರಥಮ, ಶೇ.೯೬.೭೪ ರಷ್ಟು ಫಲಿತಾಂಶದ ಮೂಲಕ ಮಂಡ್ಯ ದ್ವಿತೀಯ, ಹಾಸನ ಮೂರನೆಯ ಸ್ಥಾನವನ್ನು ಪಡೆದುಕೊಂಡಿದ್ದು, ಶಿವಮೊಗ್ಗಕ್ಕೆ ೨೯ನೇ ಸ್ಥಾನ ಪಡೆದುಕೊಂಡಿದೆ.