Site icon TUNGATARANGA

ಶಿವಮೊಗ್ಗ, ಮೇ.07: ಶಿವಮೊಗ್ಗ ಜಿಲ್ಲೆಗೆ ನರೇಂದ್ರ ಮೋದಿ ಮತ್ತೊಮ್ಮೆ ನಮಗೆ ಆಶೀರ್ವದಿಸಲು ಬಂದಿದ್ದು ನಮ್ಮ ಸೌಭಾಗ್ಯ. ಅವರ ಆಗಮನದ, ಅಭಿವೃದ್ದಿಯ ಋಣ ತೀರಿಸುವುದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶಿವಮೊಗ್ಗ ತಾಲೂಕು ಆಯನೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನವಕರ್ನಾಟಕ ಸಮಾವೇಶದಲ್ಲಿ ಅವರು ಮಾತನಾಡಿ, ನನ್ನ ಹುಟ್ಟುಹಬ್ಬದ ದಿನ ವಿಮಾನನಿಲ್ದಾಣ ಉದ್ಘಾಟಿಸಿದರೆ. ಅವತ್ತು ಕೂಡ ನೀವೆಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಿ ನನಗೆ ಆಶೀರ್ವಾದ ಮಾಡಿದ್ದೀರಿ. ಇದು ಮೋದಿಗೆ ನೆನಪಿದೆ ಅಂತ ಭಾವಿಸುತ್ತೇನೆ. ಈ ಬಾರಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 7 ಕ್ಷೇತ್ರವನ್ನು ಗೆಲ್ಲಿಸುವ ಮೂಲಕ ಮೋದಿಯ ಈ ಋಣವನ್ನು ತೀರಿಸುತ್ತೇವೆ ಎಂದು ತಿಳಿಸಿದರು.
ನರೇಂದ್ರ ಮೋದಿ ನೇತೃತ್ವದಲ್ಲಿ ರಾಜ್ಯ ಬಹಳಷ್ಟು ಅಭಿವೃದ್ಧಿ ಆಗಿದೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಜನರ ನಾಡಿಮಿಡಿತ ಅರಿತಿರುವೆ. ಬಿಜೆಪಿಗೆ130 ರಿಂದ 140 ಸೀಟು ಬರಲಿದೆ. ಬಹುಮತದೊಂದಿಗೆ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ರಚನೆ ಮಾಡುತ್ತೇವೆ. ಶಿವಮೊಗ್ಗದಲ್ಲೂ ನಮ್ಮ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇದನ್ನು ಪರಿಗಣಿಸಿ ಜಿಲ್ಲೆಯಲ್ಲಿ ಜನ ಬಿಜೆಪಿಗೆ ಹೆಚ್ಚಿನ ಶಕ್ತಿ ತುಂಬುತ್ತಾರೆ ಎಂಬ ನಂಬಿಕೆ ಇದೆ ಎಂದರು.


ಶಿವಾಜಿ ಪೇಟ ತೊಡಿಸಿ ಮೋದಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿವಾಜಿ ಪೇಟ, ಕಂಚಿನ ಭಜರಂಗಿ ವಿಗ್ರಹ, ಗಂಧದಲ್ಲಿ ಬರೆದಿರುವ ನರೇಂದ್ರ ಮೋದಿ ಅವರ ನಾಮಪಲಕ, ಗಂಧದ ಹಾರ ಹಾಕಿ ಸನ್ಮಾನ ಮಾಡಲಾಯಿತು. ಬಳಿಕ ಭಾಷಣಕ್ಕೆ ಆಗಮಿಸಿದ ನರೇಂದ್ರ ಮೋದಿ ಕನ್ನಡದಲ್ಲಿ ಭಾಷಣ ಆರಂಭಿಸಿ, ಮಲೆನಾಡಿನ ಮಡಿಲು, ಸೌಂದರ್ಯದ ನಾಡಿ ಶಿವಮೊಗ್ಗ ಜನಕ್ಕೆ ನಮಸ್ಕಾರ ಎಂದಾಗ ಕಾರ್ಯಕರ್ತರಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಬಳಿಕ ಹಿಂದಿಯಲ್ಲಿ ಭಾಷಣ ಶುರು ಮಾಡಿದಾಗ ಈ ವೇಳೆ ಮೋದಿ ಭಾಷಣವನ್ನು ಕನ್ನಡದಲ್ಲಿ ತರ್ಜುಮೆ ಮಾಡುವುದಕ್ಕೆ ವಿರೋಸಿದ ಕಾರ್ಯಕರ್ತರು ತರ್ಜುಮೆ ಬೇಡ ಮೋದಿ ಮಾತ್ರ ಮಾತನಾಡಲಿ ಎಂದು ಒತ್ತಾಯಿಸಿದರು. ಇದನ್ನು ಗಮನಿಸಿದ ನರೇಂದ್ರ ಮೋದಿ ಕಾರ್ಯಕರ್ತರಿಗೆ ಕೈ ಮುಗಿದು, ನನಗೆ ಇಷ್ಟೊಂದು ಪ್ರೀತಿ ತೋರಿಸಿದ್ದಕ್ಕೆ ಧನ್ಯವಾದ. ನಿಮ್ಮ ಈ ಪ್ರೀತಿಯನ್ನು ಮರೆಯಲ್ಲ ಎಂದರು.


ಮೋದಿ ಭಾವಚಿತ್ರವುಳ್ಳ ಸೀರೆಯುಟ್ಟು ಗಮನಸೆಳೆದ ಮಹಿಳೆ

ಕಾರ್ಯಕ್ರಮದಲ್ಲಿ ಮೋದಿ ಭಾವಚಿತ್ರ ಇರುವ ಸೀರೆಯನ್ನುಟ್ಟು ಮಹಿಳೆಯೊಬ್ಬರು ಗಮನ ಸೆಳೆದರು. ಸಮಾವೇಶಕ್ಕೆ ನರೇಂದ್ರ ಮೋದಿ ಭಾವಚಿತ್ರವಿರುವ ಸೀರೆಯುಟ್ಟು ಬಂದಿದ್ದ ಮಹಿಳೆ ಸುಷ್ಮಾ ಸುರೇಶ್ ಶೆಣೈ ಸಂಭ್ರಮಿಸಿದರು. ಗುಜರಾತ್‌ನಲ್ಲಿ ತನ್ನ ಸಹೋದರಿ ಮೂಲಕ ಸೀರೆ ಖರೀದಿಸಿರುವ ಸುಷ್ಮಾ ಸುರೇಶ್ ಶೆಣೈ, ಶಿವಮೊಗ್ಗ ನಗರದವರು. ನನಗೆ ಈ ಸೀರೆಯುಟ್ಟು ಬಂದಿದ್ದಕ್ಕೆ ಖುಷಿಯಾಗುತ್ತಿದೆ. ಎಲ್ಲರೂ ನನಗೆ ಕೇಳುತ್ತಿzರೆ. ಅಲ್ಲದೇ, ನನ್ನ ಸಹೋದರಿ ಈ ಸೀರೆ ತಂದು ಕೊಟ್ಟಿzರೆ. ಇದರ ಬೆಲೆ ಹೇಳುವುದಕ್ಕೆ ಆಗಲ್ಲ. ಈ ಸೀರೆಗೆ ಬೆಲೆ ಕಟ್ಟಲು ಆಗಲ್ಲ. ಈ ಕಾರ್ಯಕ್ರಮಕ್ಕೆ ಈ ಸೀರೆ ಹಾಕಿಕೊಂಡು ಬಂದಿದ್ದು ಬಹಳ ಖುಷಿಯಾಗುತ್ತಿದೆ ಎಂದು ಸುಷ್ಮಾ ಸುರೇಶ್ ಶೆಣೈ ಪ್ರತಿಕ್ರಿಯೆ ನೀಡಿದರು.


ಸಮಾವೇಶದಲ್ಲಿ ರಾರಾಜಿಸಿದ ಭಜರಂಗಿ ಹಾಡು

ಬೆಳಗ್ಗೆ ೧೧.೩೦ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮದಲ್ಲಿ ಒಂದುವರೆ ಗಂಟೆ ತಡವಾಗಿ ಆರಂಭವಾಯಿತು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರನ್ನು ಸಹನಾ ಚೇತನ ತಂಡದವರು ಗಾಯನ ಮೂಲಕ ರಂಜಿಸಿದರು. ಗಾಯಕ ಪೃಥ್ವಿ ತಂಡದವರು ಹಾಡಿದ ಭಜರಂಗಿ ಹಾಡಿಗೆ ಕಾರ್ಯಕರ್ತರು ಬಿಜೆಪಿ ಬಾವುಟ ಕೈಯಲ್ಲಿ ಹಿಡಿದು ಕುಣಿದು ಕುಪ್ಪಳಿಸಿದರು. ಮೋದಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಪ್ರಧಾನಿ ಮೋದಿ ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳು, ಬ್ಯಾರಿಗೇಟ್ ತಳ್ಳಿ, ಮುಂದೆ ನುಗ್ಗಿ ಪ್ಲಾಸ್ಟಿಕ್ ಚೇರ್‌ಗಳನ್ನು ಕೈಯಲ್ಲಿ ಹಿಡಿದು ನುಗ್ಗಿದ ಕಾರ್ಯಕರ್ತರು. ವೇದಿಕೆ ಮುಂಭಾಗ ಬರಲು ಯತ್ನಿಸಿದರು. ಪೊಲೀಸರು ಅವರನ್ನು ತಡೆದರು.


Exit mobile version