Site icon TUNGATARANGA

ಶಿವಮೊಗ್ಗದಲ್ಲಿ ಅಮ್‌ಅದ್ಮಿ ಪಕ್ಷ ಅಧಿಕಾರಕ್ಕೆ ಬಂದ್ರೆ ಏನೆಲ್ಲಾ ಅಭಿವೃದ್ದಿ ಮಾಡುತ್ತಿವಿ ಅಂದ್ರು ಗೊತ್ತಾ ?

ನಗರಕ್ಕೆ ಹೊಂದಿಕೊಂಡಂತೆ ಐಟಿ ಪಾರ್ಕ್ ಸ್ಥಾಪಿಸುವುದು, ಭದ್ರಾವತಿಯ ವಿಐಎಸ್‌ಎಲ್ ಮತ್ತು ಪೇಪರ್ ಮಿಲ್‌ಅನ್ನು ಆಧುನೀಕರಣ ಗೊಳಿಸಿ ಸಾವಿರಾರು ಜನಗಳಿಗೆ ಉದ್ಯೋಗವನ್ನು ಕೊಡುವುದಾಗಿ ಆಮ್ ಆದ್ಮಿ ಪಕ್ಷ ಹೇಳಿದೆ.


ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಉಪಾಧ್ಯಕ್ಷ ಚನ್ನಪ್ಪ ಗೌಡ, ಭಾರತದಲ್ಲಿ ಅತ್ಯಂತ ರಮಣೀಯವಾದ ಜೋಗ್ ಫಾಲ್ಸ್ ಗೆ ರೋಪ್ ವೇ ಮಾಡು ವುದು, ಪ್ರವಾಸಿಗರಿಗೆ ವಸತಿ ಸೌಕರ್ಯ, ಸಾರಿಗೆ ವ್ಯವಸ್ಥೆ ಹಾಗೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಕ್ರಮ ಕೈಗೊಳ್ಳುವುದು, ಜೋಗದ ಸುತ್ತಮುತ್ತಲಿನ ರಮಣೀಯ ಪ್ರದೇಶಗಳಿಗೆ ಟ್ರಕಿಂಗ್ ವ್ಯವಸ್ಥೆ ಮಾಡುವುದು ಹಾಗೂ ಆಯ್ದ ಸ್ಥಳಗಳಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿ ಜಗತ್ತಿನಲ್ಲಿ ಅತ್ಯುತ್ತಮವಾದ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವುದಕ್ಕೆ ಆದ್ಯತೆ ಕೊಡಲಾಗು ವುದು ಎಂದರು.


ನೇಕಾರಿಕೆಗೆ ಅನುಕೂಲವಾಗುವ ರೀತಿ ಸೊರಬದಲ್ಲಿ ಟೆಕ್ಸೆಲ್ ಪಾರ್ಕ್ ಪ್ರತಿಷ್ಠಾಪಿ ಸುವುದು, ಈ ಭಾಗದಲ್ಲಿಯ ಅಡಿಕೆ ಬೆಳೆಗೆ ಪೂರಕವಾಗುವ ಅಡಿಕೆ ಅಭಿವೃದ್ಧಿ ಸಂಶೋಧನೆ ಹಾಗೂ ಸಂಸ್ಕರಣ ಘಟಕ ತೀರ್ಥಳ್ಳಿಯಲ್ಲಿ ಆರಂಭಿಸಲಾಗುವುದು ಎಂದರು.


ಈ ಪ್ರಣಾಳಿಕೆ ಬಿಡುಗಡೆಯ ನಂತರ ಕರ್ನಾಟಕ ರಾಜ್ಯದ ಭವಿಷ್ಯವನ್ನು ಬದಲಿಸುವ ಅವಕಾಶವನ್ನು ಪಕ್ಷವು ರಾಜ್ಯದ ಮತದಾರರು ಗಳಿಗೆ ಈ ಮೂಲಕ ನೀಡುತ್ತಿದೆ. ಮತದಾನದ ದಿನ ಮೇ ೧೦ನೇ ತಾರೀಕಿನಂದು ನಿಮ್ಮ ಇವಿಎಂ ಮಷೀನ್ ನಲ್ಲಿ ನಿಮ್ಮ ಭವಿಷ್ಯವನ್ನು ನಿರ್ಧರಿ ಸುವ ಬಟನ್ ಇರುತ್ತದೆ. ಆ ಭವಿಷ್ಯದ ಬಟನ್ ಆಮ್ ಆದ್ಮಿ ಪಕ್ಷದ ಬಟನ್, ಮತವನ್ನು ನೀಡ ಬೇಕೆಂದು ” ಮತದಾರರಿಗೆ ಕರೆ ನೀಡಿದರು.


ಸಂಘಟನೆಗಳ ಬ್ಯಾನ್ ನೆಪದಲ್ಲಿ ಜಾತಿ- ಧರ್ಮಗಳ ಸಂಘರ್ಷದ ದೃವೀಕರಣ ರಾಜ ಕಾರಣ ಕೇಳಿದಿರುವುದು ನಿಜಕ್ಕೂ ನಾಚಿಕೆಗೇಡು. ನಿಜಕ್ಕೂ ಬ್ಯಾನ್ ಆಗಬೇಕಿರೋದು ಅವ್ಯಾಹತ ಅಕ್ರಮ, ಅನ್ಯಾಯ, ಭ್ರಷ್ಟಾಚಾರ ದಲ್ಲಿ ಮುಳುಗಿ ರುವ ಈ ಮೂರು ಜೆಸಿಬಿ ಪಕ್ಷಗಳು ” ಎಂದು ಚನ್ನಪ್ಪ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ನೇತ್ರಾವತಿ, ಮುಖಂಡ ಸುರೇಶ್ ಕೌತೇಕರ್ ಭಾಗವಹಿಸಿದ್ದರು.

Exit mobile version