ಶಿವಮೊಗ್ಗ,ಮೇ.6:
ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ಜಿಲ್ಲೆಯ ಆಯನೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಸುಗಮ ಸಂಚಾರದ ಹಿತ ದೃಷ್ಟಿಯಿಂದ ದಿನಾಂಕ: 07-05-2023 ರ ನಾಳೆ ಈ ಕೆಳಕಂಡಂತೆ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಲು ಕೋರಿದೆ.
1) ಸಾಗರದಿಂದ ಶಿವಮೊಗ್ಗ ಕಡೆಗೆ ಬರುವ ಲಘು ವಾಹನಗಳು:
ಆನಂದಪುರ ಎಡೆಹಳ್ಳಿ ಸರ್ಕಲ್ – ಚೊರಡಿ – ಕುಂಸಿ – ಕುಂಸಿ ರೈಲ್ವೆ ಗೇಟಿನ ಹತ್ತಿರ ಎಡಕ್ಕೆ ತಿರುಗಿ ಹಾರ್ನಳ್ಳಿ – ಬೈರನಕೊಪ್ಪ -ಹಿಟ್ಟೂರು ಕ್ರಾಸ್ ಬಲಕ್ಕೆ ತಿರುಗಿ ಶಿವಮೊಗ್ಗಕ್ಕೆ ಬಂದು ಸೇರುವುದು.
2) ಸಾಗರದಿಂದ ಶಿವಮೊಗ್ಗದ ಕಡೆಗೆ ಬರುವ ಭಾರಿ ಮತ್ತು ಸರಕು ವಾಹನಗಳು:-
ಆನಂಪುರ – ಶಿಕಾರಿಪುರ – ಹೊನ್ನಾಳಿ ಮೂಲಕ ಶಿವಮೊಗ್ಗಕ್ಕೆ ಬಂದು ಸೇರುವುದು.
3) ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಲಘು ವಾಹನಗಳು:-
ಶಿವಮೊಗ್ಗದಿಂದ ಸೋಮಿನಕೊಪ್ಪ – ಗೆಜ್ಜೇನಹಳ್ಳಿ – ಮುದುವಾಲ – ಹಾರ್ನಳ್ಳಿ – ಕುಂಸಿ ರೈಲ್ವೆ ಗೇಟಿನ ಹತ್ತಿರ ಬಲಕ್ಕೆ ತಿರುಗಿ ಸಾಗರಕ್ಕೆ ಹೋಗುವುದು.
4) ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಭಾರಿ ಮತ್ತು ಸರಕು ವಾಹನಗಳು:-
ಶಿವಮೊಗ್ಗದಿಂದ ಹೊನ್ನಾಳಿ – ಶಿಕಾರಿಪುರ – ಆನಂದಪುರ ಮೂಲಕ ಸಾಗರಕ್ಕೆ ಹೋಗುವುದು
5) ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುವ ಭಾರಿ ಮತ್ತು ಲಘು ವಾಹನಗಳು:-
ಶಿವಮೊಗ್ಗದಿಂದ ಹೊನ್ನಾಳಿ ಮೂಲಕ ಶಿಕಾರಿಪುರಕ್ಕೆ ಹೋಗುವುದು.
ನರೇಂದ್ರ ಮೋದಿ ಪ್ರಧಾನಿ ಮಂತ್ರಿಗಳು ಭಾರತ ಸರ್ಕಾರ ರವರು ಶಿವಮೊಗ್ಗ ಜಿಲ್ಲೆಗೆ ಆಗಮಿಸಿ *ಆಯನೂರಿನಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಈ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಮತ್ತು ಪರ್ಸ್ ಗಳನ್ನು ಹೊರತು ಪಡಿಸಿ, ನೀರಿನ ಬಾಟಲಿ, ಬ್ಯಾಗ್, ಪೇಪರ್(ಚೀಟಿ), ಪೆನ್, ಕಪ್ಪು ಬಣ್ಣದ ಬಟ್ಟೆ / ಶರ್ಟ್ / ಕರವಸ್ತ್ರ, ಪ್ಲೇ ಕಾರ್ಡ್, ಬೆಂಕಿ ಪೊಟ್ಟಣ / ಲೈಟರ್, ಯಾವುದೇ ಸ್ಪೋಟಕ, ಅಪಾಯಕಾರಿ ವಸ್ತುಗಳು ಹಾಗೂ ಇತರೆ ಯಾವುದೇ ವಸ್ತುಗಳನ್ನು ತರುವಂತಿರುವುದಿಲ್ಲ
6) ಶಿಕಾರಿಪುರ ದಿಂದ ಶಿವಮೊಗ್ಗಕ್ಕೆ ಬರುವ ಭಾರಿ ಮತ್ತು ಲಘು ವಾಹನಗಳು:-
ಶಿಕಾರಿಪುರ ದಿಂದ ಹೊನ್ನಾಳಿ ಮೂಲಕ ಶಿವಮೊಗ್ಗಕ್ಕೆ ಬಂದು ಸೇರುವುದು.
7) ಶಿವಮೊಗ್ಗದಿಂದ ರಿಪ್ಪನ್ ಪೇಟೆ ಹಾಗೂ ಹೊಸನಗರ ಕಡೆಗೆ ಹೋಗುವ ಭಾರಿ ಮತ್ತು ಲಘು ವಾಹನಗಳು:-
ಶಿವಮೊಗ್ಗದಿಂದ ಮಂಡಗದ್ದೆ – ಕೋಣಂದೂರು – ರಿಪ್ಪನಪೇಟೆ ಮೂಲಕ ಹೊಸನಗರಕ್ಕೆ ಹೋಗುವುದು.
8) ರಿಪ್ಪನಪೇಟೆ ಹೊಸನಗರದಿಂದ ಶಿವಮೊಗ್ಗಕ್ಕೆ ಬರುವ ಭಾರಿ ಮತ್ತು ಲಘು ವಾಹನಗಳು:-
ಕೋಣಂದೂರು – ಸಿ. ಕೆ. ರಸ್ತೆ – ಮಂಡಗದ್ದೆ – ಮಾಳೂರು ಮೂಲಕ ಶಿವಮೊಗ್ಗಕ್ಕೆ ಬಂದು ಸೇರುವುದು.
.