ಶಿವಮೊಗ್ಗ, ಮೇ.04: ರಾತ್ರಿ ಮುಸ್ಲೀಂಮರ ಮನೆಯಲ್ಲಿ ನಲ್ಲಿ ಮೂಳೆ ತಿಂದು ಬೆಳಿಗ್ಗೆ ಜಟ್ಕಾ ಕಟ್ ಮಾತನಾಡುತ್ತಿದ್ದರು ಎಂದು ಈಶ್ವರಪ್ಪನವರ ವಿರುದ್ಧ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.
ಅವರು ಬುಧಾವಾರ ಸಂಜೆ ನಡೆದ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಶಿವಮೊಗ್ಗದ ಜನ ಬದಲಾವಣೆ ಬಯಸುತ್ತಿದ್ದಾರೆ 33 ವರ್ಷದ ಏಕತಾನತೆ ಆಡಳಿತವಿತ್ತು ಶಿವಮೊಗ್ಗ ತನ್ನ ತನವನ್ನ ಕಳೆದುಕೊಂಡಿದೆ ಎಂದರು.
ಈಶ್ವರಪ್ಪನವರಿಂದಲೇ ಶಿವಮೊಗ್ಗ ಹೊತ್ತಿ ಉರಿದಿತ್ತು. ಮಂಗಳೂರಿನ ಕಾವೂರಿನಲ್ಲಿ ಈಶ್ವರಪ್ಪ ಮಾತನಾಡುತ್ತಿದ್ದ ವೇಳೆ ಆಜಾನ್ ಕೂಗಲಾಯಿತು. ಆಜಾನ್ ಕೂಗಿದರೆ ಈಶ್ವರಪ್ಪ ದೇವರಿಗೆ ಕಿವಿ ಕೇಳೊಲ್ವಾ ಎಂಬ ಹೇಳಿಕೆ ಕೊಟ್ರು.ಅದು ಶಿವಮೊಗ್ಗದ ಮುಸ್ಲೀಂರನ್ನ ಕೆರಳಿಸಿತು.ಎಸ್ಪಿ ಡಿಸಿ ಚಾಣಾಕ್ಯರಿದ್ದ ಕಾರಣ ಗಲಾಟೆ ತಣ್ಣಗಾಯಿತು.
ಹಾಗಾಗಿಯೇ ನಾನು ಫ್ಲೆಕ್ಸ್ ಹಾಕಿಸಿದಾಗ ಹರಕುಬಾಯಿಗೆ ಹೊಲಿಗೆ ಬೀಳಲಿ ಎಂಬ ಫ್ಲೆಕ್ಸ್ ಹಾಕಿಸಿದ್ದೆ ಎಂದ ಆಯನೂರು ಮಂಜುನಾಥ್ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಲ್ ಸಂತೋಷ್ ವಿರುದ್ಧವೂ ವಾಗ್ದಾಳಿ ಮುಂದುವರೆಸಿದರು. 40 ವರ್ಷದ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ ಇರಲಿಲ್ಲ. ಅಂತಹವನನ್ನ ಚರಂಡಿ ನೀರಿಗೆ ಹೋಲಿಸಿದ್ದಾರೆ.
40% ಭ್ರಷ್ಠಾಚಾರ ನಡೆಸಿದವರು, ಬ್ಯಾರಿ ಮಾಲ್ ಗೆ 99 ವರ್ಷ ಲೀಜ್ ನೀಡಲು ಮುಂದಾದವರು ಇವರಿಗೆ ಶುದ್ಧ ಹಸ್ತರಾಗಿ ಕಾಣ್ತಾರಾ ಎಂದು ಪ್ರಶ್ನಿಸಿದರು.
ಇಷ್ಟಕ್ಕೆ ಸುಮ್ಮನಾಗದ ಆಯನೂರು ಮಂಜುನಾಥ್ ಹುಬ್ಬಳ್ಳಿಯಲ್ಲಿ ಪತ್ರಕರ್ತರು ಹರ್ಷನ ಸಹೋದರಿಗೆ ಶಿವಮೊಗ್ಗದಲ್ಲಿ ಬಿಜೆಪಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕಿತ್ತು ಎಂಬ ಪ್ರಶ್ನಿಸಿದಾಗ ಅವರ ಅಮ್ಮನಿಗೂ ಟಿಕೇಟ್ ಕೊಡ್ತೀವಿ ಎಂದು ಹಗುರವಾಗಿ ಮಾತನಾಡಿದರು. ಆದರೆ ಹರ್ಷ ಸತ್ತಾಗ ರಾಜಕೀಯ ಲಾಭ ಪಡೆದವರು ಯಾರು? ಹರ್ಷನ ಹೆಸರಿನಲ್ಲಿ ಟ್ರಸ್ಟ್ ರಚಿಸಿದಾಗ ಹಣದ ಹೊಳೆಯೇ ಹರಿಯಿತಲ್ಲ ಟ್ರಸ್ಟ್ ಗೆ ಅಧ್ಯಕ್ಷರಾದವರು ಯಾರು ಎಂದು ಪ್ರಶ್ನಿಸಿದರು.
ರಾಜ್ಯದ ರಾಯಚೂರು, ಗುಲ್ಬರ್ಗಗಳಿಗೆ ಬಂಡವಾಳ ಹರಿದು ಬಂದು ಕಾರ್ಖಾನೆಗಳಿಗೆ ಅನುಕೂಲವಾಗಿತ್ತು. 10 ಲಕ್ಷ ಕೋಟಿ ಬಂಡವಾಳ ಹರಿದುಬಂದ ಪರಿಣಾಮ ರಾಜ್ಯದಲ್ಲೆಡೆ ಮಡವಾಳದಾರರು ಬಂಡವಾಳ ಹೂಡಿಲು ಮುಂದಾದರು. ಆದರೆ ಶಿವಮೊಗ್ಗದಲ್ಲಿ ಹೈವೆ ರೈಲ್ವೆ ಏರ್ ವೇ ಇದ್ದರೂ ಸಹ ಒಂದು ರೂ. ಬಂಡವಾಳ ಬರಲಿಲ್ಲ. ಹಾಗಾಗಿ ಕುಮಾರ ಸ್ವಾಮಿಯವರು ಸಿಎಂ ಆದರೆ ಶಿವಮೊಗ್ಗಕ್ಕೆ ಅನುಕೂಲ ಮಾಡಕೊಡಬೇಕು. ಉತ್ತಮ ಕಾರ್ಖಾನೆಗಳು ಬರುವಂತೆ ಮಾಡಬೇಕೆಂದರು.