ಶಿವಮೊಗ್ಗ, ಮೇ.4:
ಈ ಬಾರಿಯ ಚುನಾವಣೆಯಲ್ಲಿ ನನ್ನನ್ನ ಅಂದರೆ ನಮ್ ಜೆಡಿಎಸ್ ಬಿಟ್ಟು ಯಾರೂ ಅಧಿಕಾರ ನಡೆಸಲು ಸಾಧ್ಯವಿಲ್ಲವೆಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದರು.
ಶಿವಮೊಗ್ಗದ ಎನ್ ಇಎಸ್ ಮೈದಾನದಲ್ಲಿ ನಡೆದ ಜೆಡಿಎಸ್ ನ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಎರಡು ರಾಷ್ಡ್ರೀಯ ಪಕ್ಷಗಳಿಗೆ ಕಿವಿ ಮಾತು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬರೊಲ್ಲ. ವಿದ್ಯುನ್ಮಾನಗಳಲ್ಲಿ ಬರುವ ಸಮೀಕ್ಷೆ ನಂಬಬೇಡಿ, ಜೆಡಿಎಸ್ ಗೆ 25-35 ರವರೆಗೆ ಸ್ಥಾನ ನೀಡಲಾಗುತ್ತಿದೆ. ಇದನ್ನ ನಂಬಬೇಡಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಇರುವ ಜೆಡಿಎಸ್ ಹವಾ ಹೇಗಿದೆ ಎಂದು ಯಾರಿಗೂ ಊಹಿಸಲಾಗುತ್ತಿಲ್ಲ ಎಂದರು.
ಟಿವಿಯಲ್ಲಿ ಬರುವ ಸಮೀಕ್ಷೆಗಳನ್ನ ನಾನು ನಂಬೊಲ್ಲ. ಆದರೆ ಈ ಬಾರಿ ಜೆಡಿಎಸ್ ನ್ನ ಬಿಟ್ಟು ಎರಡೂ ಪಕ್ಷಗಳಿಗೆ ಸರ್ಕಾರ ನಡೆಸಲು ಸಾಧ್ಯವಿಲ್ಲವೆಂದರು.
ಮುಸ್ಲೀಂ ಮೀಸಲಾತಿ ರದ್ದತಿ
ಒಕ್ಕಲಿಗರ, ಲಿಂಗಾಯಿತರ ಮತಬ್ಯಾಂಕ್ ಗಾಗಿ ಮುಸ್ಲೀಂ ಮೀಸಲಾತಿಯನ್ನ ತೆಗೆಯುವ ದುಸ್ಸಾಹಸಕ್ಕೆ ಬಿಜೆಪಿ ಮುಂದಾಗಿದೆ. ಮೀಸಲಾತಿ ತೆಗೆಯಲಾಯಿತು ಎಂದು ಮುಸ್ಲೀಂ ಬೀದಿಗಿಳಿಯುತ್ತಿದ್ದಂತೆ ಒಕ್ಕಲಿಗ ಮತ್ತು ಲಿಂಗಾಯಿತ ಮತ ಗಟ್ಟಿ ಮಾಡಿಕೊಳ್ಳುವುದು ಇವರ ಉದ್ದೇಶವಾಗಿತ್ತು. ಆದರೆ ಸುಪ್ರೀಂಕೋರ್ಟ್ ನಲ್ಲಿ ನಾವು ಇದನ್ನ ಜಾರಿಗೆ ತರಲೇ ಇಲ್ಲ ಎಂದು ಅಫಿಡೆವಿಟ್ ಹಾಕಿ ಜನರ ಕಣ್ಣಿಗೆ ಮಣ್ಣು ಎರಚಿವೆ ಎಂದು ಗುಡುಗಿದರು.
ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 100 ಕೋಟಿ
ನಾನು ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಹಣ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ನಾನು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನಲ್ಲಿ ಸಮುದಾಯಕ್ಕೆ ಜಾಗ ನೀಡಿದ್ದೆ. ಎರಡನೇ ಬಾರಿ ಸಿಎಂ ಆಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ನಿಗಮ ಆರಂಭಿಸಿದೆ. ಆದರೆ ಬಿಜೆಪಿ ನಿಗಮಕ್ಕೆ ಹಣವೇ ಬಿಡುಗಡೆ ಮಾಡಲಿಲ್ಲ. ನಾನು ನಾಳೆ ಸ್ವಂತಬಲದಿಂದ ಸಿಎಂ ಆದರೆ 100 ಕೋಟಿ ಹಣ ತೆಗೆದಿಡುವುದಾಗಿ ಘೋಷಿಸಿದರು.
ಇಬ್ಬರು ಜಿಲ್ಲೆಯಿಂದ ಮಂತ್ರಿಗಳು
ಜೆಡಿಎಸ್ ಅಧಿಕಾರಕ್ಕೆ ಬಂದರೆ ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳಾಗಲಿದ್ದಾರೆ ಎಂದು ಮಾಜಿಮುಖ್ಯಮಂತ್ರಿಗಳು ಆಯನೂರು ಮಂಜುನಾಥ್ ಮತ್ತು ಶಾರದಾ ಪೂರ್ಯನಾಯ್ಕ್ ಮುಖವನ್ನ ನೋಡಿದರು. ಆದರೆ ಮಂತ್ರಿಗಳಾಗುವ ನಾಯಕರ ಹೆಸರನ್ನ ಬಹಿರಂಗ ಪಡಿಸಲಿಲ್ಲ.
ಬಿಜೆಪಿ ಜೆಸಿಬಿಯಿಂದ ಹಣವನ್ನ ಬಗೆಯಲು ಆರಂಭಿಸಿತು.
ನನಗೆ ಮುಂದಿನ ಐದು ವರ್ಷ ಅಧಿಕಾರ ನೀಡಿದರೆ ಪಂಚರತ್ನ ಯೋಜನೆ ತರಲಿದ್ದೇನೆ. ನನಗೆ ಸಣ್ಣ ಜಮೀನಿದೆ ಆದರೆ ಮನೆಯ ಮುಂದೆ ಬರುವ ಸಂತ್ರಸ್ತರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದೆ. ಹಾಗಾಗಿ ನನಗೆ ಶಕ್ತಿ ನೀಡಬೇಕು. ಹಿಂದೆ ಕಾಂಗ್ರೆಸ್ ಕೈಯಲ್ಲಿ ಗೋರಿತ್ತು. ಆದರೆ ಬಿಜೆಪಿ ಈಗ ಜೆಸಿಬಿಯನ್ನ ತಂದು ಹಣವನ್ನ ದೋಚಲು ಆರಂಭಿಸಿದ್ದಾರೆ ಎಂದು ಗುಡುಗಿದರು.
ಶಿವಮೊಗ್ಗದ ಅಭಿವೃದ್ಧಿಯಲ್ಲಿ ನನ್ನದೂ ಪಾಲಿದೆ
ಶಿವಮೊಗ್ಗದ ಅಭಿವೃದ್ಧಿಯಲ್ಲಿ ನನ್ನದೂ ಪಾಲಿದೆ. 2004-05 ರ ವೇಳೆ ಬಿಎಸ್ ವೈ ತನ್ನ ಶಿಷ್ಯನೊಂದಿಗೆ ಕಳುಹಿಸಿ ಮಂತ್ರಿ ಸ್ಥಾನಕ್ಕೆ ಪ್ರಸ್ತಾವನೆ ನೀಡಿದರು. ಆಗ ನಾನು ಕಣಯ ಜೋಡಿಸದಿದ್ದರೆ ಬಿಜೆಪಿ ಜನ್ಮದಲ್ಲಿ ಅಧಿಕಾರಕ್ಕೆ ಬರ್ತಾ ಇರಲಿಲ್ಲ. ಅಂದು ಕೈಜೋಡಿಸಿ ಮೊದಲ ಬಾರಿಗೆ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣ ಆರಂಭಿಸಲಾಯಿತು ಎಂದರು.