ಕಾಂಗ್ರೆಸ್‌ನಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಒಗ್ಗಟ್ಟಾಗಿ ಎಲ್ಲರೂ ಸೇರಿ ಕೆಲಸ ಮಾಡುವುದಾಗಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಪ್ರಮಾಣ ಮಾಡಿದ್ದ ಮಾಜಿ ಶಾಸಕ ಕೆ ಬಿ ಪ್ರಸನ್ನಕುಮಾರ, ಮಾತನ್ನು ಮೀರಿ ದ್ದಾರೆ.
ತಮ್ಮ ಅವಕಾಶವಾದಿತನವನ್ನು ತೋರಿಸಿದ್ದಾರೆ. ಕಾಂಗ್ರೆಸ್‌ನಿಂದ ತಮ್ಮ ಜೊತೆಗೆ ಬಹಳ ಜನ ಜೆಡಿಎಸ್ ಸೇರುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಇವರ‍್ಯಾರೂ ನೈಜ ಕಾಂಗ್ರೆಸಿಗರಲ್ಲ.
ಮಾಜಿ ಶಾಸಕರೂ ಕಾಂಗ್ರ್ರೆಸಿಗರಲ್ಲ. ಇಂತಹವರಿಂದ ಪಕ್ಷಕ್ಕೇನೂ ನಷ್ಟವಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್ ಸಿ ಯೋಗೇಶ್ ಹೇಳಿದ್ದಾರೆ.
ಪತ್ರಿಕಾ ಸಂವಾದದಲ್ಲಿ ಅವರು ಮಾತನಾ ಡುತ್ತಾ, ಜೆಡಿಎಸ್ ಉಮೇದುವಾರ ಆಯನೂರು ಮಂಜುನಾಥ ಎರಡು ವರ್ಷ ಕಾಂಗ್ರೆಸ್ಸಿನಲ್ಲಿದ್ದರು. ನಂತರ ೧೮ ವರ್ಷ ಬಿಜೆಪಿಯಲ್ಲಿದ್ದರು. ಆಗ ಶಾಂತಿ, ಸೌಹಾರ್ದತೆ, ಸುವ್ಯವಸ್ಥೆ ಬಗ್ಗೆ ಏಕೆ ಮಾತನಾಡಲಿಲ್ಲ. ಬಿಜೆಪಿ ಬಿಡಬೇಕು ಎಂದು
ಅಂದುಕೊಡ ದಿನದಿಂದ ಇವೆಲ್ಲ ನೆನೆಪಾದವೇ ಎಂದು ಕುಟುಕಿದ ಯೋಗೇಶ್, ಕೇವಲ ಚುನಾವಣೆಗೋಸ್ಕರ ಆಯನೂರು ಜನರನ್ನು ನಂಬಿ ಸುವ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಸ್ಪರ್ಧೆ ಏನಿ ದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಮಾತ್ರ್ರ. ಬಿಜೆಪಿಯವರು ಸಹ ಈಗ ಹಿಂದುತ್ವದ ಮಾತೇ ಆಡುತ್ತಿಲ್ಲ. ಅಭಿವೃದ್ಧಿ ಎನ್ನುತ್ತಾರೆ. ಇವರು ಮಾಡಿದ ಭ್ರಷ್ಟಾಚಾರದ ವಿವರವನ್ನು ಕಾಂಗ್ರೆಸ್ ಜನರ ಮುಂದಿಡುತ್ತಿದೆ ಎಂದರು.
ಹೋರಾಟಗಾರರ ಕುಟುಂಬದಿಂದ ಬಂದ ತಾನು ನಗರ ಪಾಲಿಕೆಯಲ್ಲಿ ೩ನೆಯ ಬಾರಿ ಸದಸ್ಯನಾಗಿದ್ದು, ಜನಪರ ಸಮಸ್ಯೆಗಳ ಬಗ್ಗೆ ಸಾಕಷ್ಟು ಹೋರಾಟ ನಡೆಸಿದ್ದೇನೆ. ಬಿಪಿಎಲ್ ಕಾರ್ಡು ಕೊಡಿಸುವುದು, ಕೊಳಚೆ ನಿರ್ಮೂಲನೆ ಮಂಡಳಿಯ ಮನೆ ಒದಗಿಸುವುದು ಮೊದಲಾದ ಸಾಕಷ್ಟು ಕೆಲಸಗಳನ್ನು ಬಡಜನರಿಗೆ ಮಾಡಿಕೊಟ್ಟಿದ್ದೇನೆ. ಈಗ ಶಾಂತಿ ನೆಲೆಸುವಂತೆ ಮಾಡುವುದರ ಜೊತೆಗೆ ಕರ್ಫ್ಯೂ ಮತ್ತು ನಿಷೇಧಾಜ್ಞೆಮುಕ್ತ ನಗರವನ್ನಾಗಿ ನೋಡಿಕೊಳ್ಳಲಾಗುವುದು. ಇದಕ್ಕಾಗಿ ಎಲ್ಲ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್ ಮಂಜುನಾಥ್ ಕಾರ‍್ಯದರ್ಶಿ ನಾಗರಾಜ ನೇರಿಗೆ, ಶಿವಮೊಗ್ಗ ಜಿಲ್ಲಾ ಕಾರ‍್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೊಪಾಲ ಯಡಗೆರೆ ಉಪಸ್ಥಿತರಿದ್ದರು.