Site icon TUNGATARANGA

ಲೂಟ್ ಔರ್ ಜೂಟ್ ಕೀ ಸರ್ಕಾರದಿಂದ ಬೇಸತ್ತ ಜನ/ ಕಾಂಗ್ರೆಸ್ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ನಿಶ್ಚಿತ : ಎಐಸಿಸಿ ರಾಷ್ಟ್ರೀಯ ವಕ್ತಾರೆ ಅಲ್ಕಾ ಲಾಂಭಾ ವಿಶ್ವಾಸ

ಭವ್ಯ ಸಂಸ್ಕೃತಿ, ಪರಂಪರೆ ಹೊಂದಿರುವ ಕರ್ನಾಟಕದಲ್ಲಿ ‘ಲೂಟ್ ಔರ್ ಜೂಟ್ ಕೀ ಸರ್ಕಾರದಿಂದ ಜನ ಬೇಸತ್ತು ಹೋಗಿದ್ದಾರೆ. ಹೀಗಾಗಿ ಸರ್ವರ ಏಳಿಗೆಗಾಗಿ ಜನರು ಕಾಂಗ್ರೆಸ್ ಬೆಂಬಲಿಸುತ್ತಿದ್ದು, ಈ ಬಾರಿ ಕಾಂಗ್ರೆಸ್ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಎಐಸಿಸಿ ರಾಷ್ಟ್ರೀಯ ವಕ್ತಾರೆ ಹಾಗೂ ಎನ್‌ಎಸ್‌ಯುಐ ರಾಷ್ಟ್ರೀಯ ಮಾಜಿ ಅಧ್ಯಕ್ಷೆ ಅಲ್ಕಾಲಾಂಭಾ ವಿಶ್ವಾಸ ವ್ಯಕ್ತಪಡಿಸಿದರು


ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಜನರು ಕಾಂಗ್ರೆಸ್ ಪಕ್ಷದ ಬಗ್ಗೆ ಒಲವನ್ನು ತೋರಿಸುತ್ತಿರುವುದರಿಂದ ಈ ಬಾರಿ ೧೫೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ ಎಂದರು.


ದಕ್ಷಿಣ ಭಾರತವನ್ನು ಬಿಜೆಪಿ ಮುಕ್ತಗೊ ಳಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಬಿಜೆಪಿ ಚುನಾವಣೆ ಎದುರಿಸುತ್ತಿದ್ದು, ಇದು ಕರ್ನಾ ಟಕದಲ್ಲಿ ಸಾಧ್ಯವಿಲ್ಲ. ಮತದಾರರು ಬುದ್ಧಿ ವಂತರು. ಕಾಂಗ್ರೆಸ್‌ನಿಂದ ಮಹಿಳೆಯರಿಗೆ ಸುರಕ್ಷತೆ ಇದೆ ಎಂದ ಅವರು, ಈ ಬಾರಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದರು.


ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯಲಿದ್ದು, ಗಾಂಧಿ- ಗೋಡ್ಸೆ ನಡುವೆ, ಸತ್ಯ ಮತ್ತು ಸುಳ್ಳು, ಹಿಂಸೆ ಮತ್ತು ಅಹಿಂಸೆ ನಡುವೆ ಹೋರಾಟ ನಡೆಯು ತ್ತಿದ್ದು, ಬಿಜೆಪಿಯ ಭ್ರಷ್ಟಾಚಾರ ಶೇ.೪೦ರಷ್ಟು ಕಮಿಷನ್‌ನಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ಗೆ ಹೆಚ್ಚಿನ ಒಲವು ಕಾಣುತ್ತಿದೆ ಎಂದರು.


ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ, ೨೦೦ ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಪ್ರತಿ ತಿಂಗಳು ೨೦೦೦ರೂ. ನಿರುದ್ಯೋಗಿ ಪದವೀಧರರಿಗೆ ೩೦೦೦ ಹಾಗೂ ಡಿಪ್ಲೊಮೊ ವಿದ್ಯಾರ್ಥಿಗಳಿಗೆ ೧೫೦೦ ರೂ., ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ನೀಡಿದ್ದು, ಆದರೆ ಇದುವರೆಗೂ ಬಿಜೆಪಿ ಯಾವುದೇ ಗ್ಯಾರಂಟಿ ಪ್ರಕಟಿಸಿಲ್ಲ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಅಭ್ಯರ್ಥಿ ಹೆಚ್.ಸಿ.ಯೋಗೀಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಗಾ ಸುಲ್ತಾನ್, ರಾಷ್ಟ್ರೀಯ ಮುಖಂಡರಾದ ಉಡಾನ್ ರಾಣಾ, ಅನಿತಾ ಮೀನಾ, ಮಾಧ್ಯಮ ರಾಜ್ಯ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್, ಪ್ರಮುಖರಾದ ವಿಜಯಲಕ್ಷ್ಮಿ ಪಾಟೀಲ್, ಚಂದ್ರಶೇಖರ್, ಚಂದನ್ ಮತ್ತಿತರರಿದ್ದರು.

Exit mobile version