ಶಿರಾಳಕೊಪ್ಪ, ಶಿವಮೊಗ್ಗ.ಏ.30:
ಇದು ಇಂದಿನ ಶಿವಮೊಗ್ಗ ಜಿಲ್ಲಾ ಜಗತ್ತಿನ ಎರಡು ಮುಖ್ಯ ಅಪರಾಧ ಘಟನೆಗಳು. ತುಂಗಾತರಂಗ ಮೂಲಗಳಿಂದ ಬರುವ ಎಲ್ಲಾ ಸುದ್ದಿ ಮಾಡೋದು ಜಾಯಮಾನವಲ್ಲ. ಆದರೆ ನಿಖರವಾಗಿ ನೋಡಿದಾಗ, ಕೇಳಿದಾಗ ಕಂಡ ಸತ್ಯ ಬರೆಯುವುದಷ್ಡೆ ನಮ್ ವಾಡಿಕೆ.
ಶಿರಾಳಕೊಪ್ಪ ಅತ್ಯಾಚಾರ, ಶಿವಮೊಗ್ಗ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ಎಂಬ ಎರಡೂ ಘಟನೆಗಳ ಮಾಹಿತಿ ಪರಿಪಕ್ವವಾಗಿಲ್ಲ. ಅದರಲ್ಲೂ ಶಿವಮೊಗ್ಗ ಖಾಸಗಿ ಮೆಡಿಕಲ್ ಕಾಲೇಜ್ ಆತ್ಮಹತ್ಯೆ ಪ್ರಕರಣದಲ್ಲಿ ದುಡ್ಡೆ ದೊಡ್ಡಪ್ಪ ಆಗುತ್ತಾ? ಪಾಪ ಆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟ ಪತ್ರ ಎಂತದು…, ಹುಡುಕಾಟ ನಮ್ದು. ಅದನ್ನು ವ್ಯಂಗ್ಯ ಮಾಡೋ ಕೆಲ ಪತ್ರಿಕಾ ತಿಕ್ಕಲು ಮನಸುಗಳಿಗೆ ದಿಕ್ಕಾರ. ಸುದ್ದಿ ಮುಂದಿದೆ ಎನ್ನೋ ಜಾಯಮಾನ ತುಂಗಾತರಂಗದ್ದಲ್ಲ. ನಿರಂತರ ಹುಡುಕಾಟ ಅಷ್ಟೆ.
ಪಟ್ಟಣದ ಪದವಿ ಕಾಲೇಜಿನ ಯುವತಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆಗೆ
ಸಂಬಂಧಿಸಿದಂತೆ ಇಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಬಂಧಿತ ಆರೋಪಿಗಳು
ಯುವತಿಯು ಕಂಪ್ಯೂಟರ್ ತರಬೇತಿಗೆ ಹೋಗುತ್ತಿದ್ದಾಗ ಓರ್ವ ಯುವಕನ ಪರಿಚಯವಾಗಿದ್ದು, ಈ ಸಂದರ್ಭದಲ್ಲಿ ಪೋನ್ ನಂಬರ್ ಪಡೆದು ಮಾತನಾಡುತ್ತಿದ ಯುವಕ ತನ್ನನ್ನು ಪ್ರಿತಿಸಲು ಒತ್ತಾಯಿಸುತ್ತಿದ್ದ. ಆದರೆ, ತನಗೆ ಪ್ರೀತಿ, ಪ್ರೇಮದಲ್ಲಿ ವಿಶ್ವಾಸವಿಲ್ಲ ನಿನ್ನ ಧರ್ಮ, ನನ್ನ ಧರ್ಮ ಬೇರೆ ಎಂದು ಯುವತಿ ತಿರಸ್ಕರಿಸಿದ್ದಾಳೆ. ಆದರೆ, ಯುವಕ ಶನಿವಾರ ಪದವಿ ಕಾಲೇಜಿನ ಗೇಟ್ ಬಳಿ ಇದ್ದೇನೆ ಬಾ ಎಂದು ಕರೆದು, ತನ್ನನ್ನು ಬಲತ್ಕಾರದಿಂದ ಜೀಪಿನಲ್ಲಿ ಕರೆದುಕೊಂಡು ಹೋಗಿ, ಅತ್ಯಾಚಾರ ಯತ್ನ ಮಾಡಿದ್ದಾನೆ ಎಂದು ಯುವತಿ ಯು ದೂರಿನಲ್ಲಿ ತಿಳಿಸಿದ್ದಾಳೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಎರಡೂ ಘಟನೆಗಳ ಸಮಗ್ರ ಮಾಹಿತಿಗೆ ಹುಡುಕಾಟ.