Site icon TUNGATARANGA

ನಿಮಗಿದು ಬೇಕಿತ್ತೇ…? ಚುನಾವಣೆ ಹೊತ್ತಿನಲ್ಲಿ ತಮಿಳು ನಾಡಗೀತೆ ಹಾಕಿ ಈಶ್ವರಪ್ಪರಿಂದ ಉಗಿಸಿಕೊಂಡ ಬಿಜೆಪಿ ಪ್ರಮುಖರು…!, ತಮಿಳು ಸಮಾಜದವರು ಕೇಳಿದ್ರಾ?


ಶಿವಮೊಗ್ಗ,ಏ.27:
ಚುನಾವಣೆಯ ಈ ಹೊತ್ತಿನಲ್ಲಿ ತಮಿಳು ಸಮಾಜದ ಜನರ ಮನವೊಲಿಸಲು ಬಿಜೆಪಿ ಪ್ರಮುಖರು ಆಡಿದ ಆಟಕ್ಕೆ ಮಾಜಿ ಉಪಮುಖ್ಯಮಂತ್ರಿ ಹಿಗ್ಗಾಮುಗ್ಗಾ ಜಾಡಿಸಿದ ಘಟನೆ ಇಂದಿಲ್ಲಿ ನಡೆದಿದೆ.


ನಗರ ಬಿಜೆಪಿಯವರು ಇಲ್ಲಿನ ಎನ್ ಇ ಎಸ್ ಮೈದಾನದಲ್ಲಿ‌ ಏರ್ಪಡಿಸಿದ್ದ ತಮಿಳು ಬಾಂಧವರ ಸಮಾವೇಶದಲ್ಲಿ ಕನ್ನಡ ನಾಡಗೀತೆ ಬದಲು ತಮಿಳು ನಾಡಗೀತೆ ಹಾಕಿ ಎಡವಟ್ಟು ಮಾಡಿದ ಘಟನೆ ಸಂಭವಿಸಿದೆ.

ಈ ಗೀತೆ ಕೇಳಿದಾಕ್ಷಣ ಆಕ್ರೋಶಗೊಂಡ ಶಾಸಕ ಈಶ್ವರಪ್ಪ ಆಸನದಿಂದ ಎದ್ದು ಬಂದು ಅದನ್ನು ನಿಲ್ಲಿಸುವಂತೆ ಸೂಚಿಸಿದರಲ್ಲದೆ, ಸಂಘಟಕರನ್ನು ಸಿಟ್ಟಿನಿಂದ ಕಣ್ಣಿನಿಂದಲೇ ಬೆದರಿಸಿದರು.
ಕನ್ನಡ ನಾಡಗೀತೆ ಇಲ್ವಾ ಎಂದು ಪ್ರಶ್ನಿಸಿದರು. ಚುನಾವಣೆ ಹೊತ್ತಿನಲ್ಲಿ ಒದು ಬೇಕಿತ್ತಾ? ಎಂದು ಮೆಲ್ಲಗೆ ಹೇಳುತ್ತಾ ನಂತರ ಮೈಕ್ ಹಿಡಿದು ಕನ್ನಡ ನಾಡಗೀತೆ ಹಾಡಲು ಮಹಿಳೆಯರಿಗೆ ಕೇಳಿದರು. ಯಾರಾದರೂ ಹಾಡುವವರಿದ್ದರೆ ಬನ್ನಿ ಎಂದು ಆಹ್ವಾನಿಸಿದರು.


ಕೆಲವು ಮಹಿಳೆಯರು ಮುಂದೆ ಬಂದರಾದರೂ ಕನ್ನಡ ನಾಡಗೀತೆಯನ್ನು ಸಂಘಟನೆಯವರು ಹಾಕಿದರು. ನಂತರ ಕನ್ನಡ ನಾಡಗೀತೆ ಹಾಡಲಾಯಿತು. ಇದೆಲ್ಲಾ ಬೇಕಿತ್ತಾ? ತಮಿಳು ಸಮಾಜದವರು ಆ ಹಾಡು ಕೇಳಿದ್ದರಾ?

Exit mobile version