ಸುಪ್ರೀಂಕೋರ್ಟ್ ಆದೇಶವನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ಮಾಜಿ ಸಿಎಂ ಸಿದ್ದರಾಮಯ್ಯನವರ ದಡ್ಡರಾಗಬಿಟ್ಟಿರಾ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಪ್ರವಾಸದಲ್ಲಿರುವ ಈಶ್ಚರಪ್ಪನವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ,ಕಾಂಗ್ರೆಸ್ ಪಕ್ಷ ಸಂಪೂರ್ಣ ಜಾತಿವಾದಿ ಆಗಿದೆ. ಜಾತಿವಾದಿ ಕಾಂಗ್ರೆಸ್ ಪಕ್ಷ ತಿರಸ್ಕಾರ ಮಾಡಿ,ಆದರೆ ಬಿಜೆಪಿ ಪಕ್ಷ ಗೋ ಹತ್ಯೆ ನಿಷೇಧ ಜಾರಿ ತಂದಿವೆ. ಕ್ರಾಂತಿ ಕಾರಿ ಬದಲಾವಣೆ ತರುವುದಕ್ಕೆ ಬಜೆಪಿ ಪಕ್ಷ ಹೋರಟಿದೆ. ಭಾರತೀಯ ಸಂಸ್ಕೃತಿಯ ನಾವು ನಿರ್ಮಾಣ ಮಾಡುತ್ತೇವೆ ಎಂದರು.
ಕೆ.ಪಿ.ಸಿ.ಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಸಿಎಂ ಸೀಟಿಗಾಗಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ,ಕಾಂಗ್ರೆಸ್ ಜಾತಿವಾದಿ ಪಕ್ಷವಾಗಿದೆ. ಕಾಂಗ್ರೆಸ್ ನಮ್ಮನ್ನು ಅಧಿಕಾರಕ್ಕೆ ತನ್ನಿ ಅಂತಾರೆ. ಆದ್ರೆ ಇವರು ಅಧಿಕಾರಕ್ಕೆ ಬಂದ್ರೆ ಈ ಪಿ.ಎಫ್.ಐ
ನಿಷೇಧ,ಗೋಹತ್ಯೆ ನಿಷೇಧ ಮೊದಲಾದ ಕಾಯ್ದೆಗಳನ್ನು ಅವರು ವಾಪಸ್ ಜಾರಿ ಮಾಡ್ತಾರೆ ಎಂದರು.