ಬೆಂಗಳೂರು,ಅ.07:
ಅಂತೂ ಇಂತೂ ಮಾಸ್ಕ್ ಇಲ್ಲದಿದ್ದರೇನಂತು ಅನ್ನಬೇಡಿ. ಮೂರ್ನಾಕು ದಿನದ ಹಿಂದೆ ಹಾಕಿದ್ದ ದಂಡದ ಪ್ರಮಾಣ ಕುಗ್ಗಿದೆ ಅಷ್ಟೆ…!?
ಮಾಸ್ಕ್ ಹಾಕದವರಿಗೆ ದಂಡವನ್ನು ಕಡಿತಗೊಳಿಸಿ ಇಂದು ಸರಕಾರ ಮಹತ್ವದ ಆದೇಶವನ್ನು ನೀಡಿದೆ.
ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ, ದಂಡದ ಪ್ರಮಾಣ ಇಳಿಕೆ ಮಾಡಿ ಆದೇಶವನ್ನು ನೀಡಿದ್ದಾರೆ. ನಗರದಲ್ಲಿ 1,000 ರೂ. ದಂಡದ ಬದಲು 250 ರೂ.ಗೆ, ಗ್ರಾಮೀಣ ಪ್ರದೇಶದಲ್ಲಿ 500 ರೂ. ಬದಲು 100 ರೂಪಾಯಿ ದಂಡದ ಪ್ರಮಾಣ ನಿಗದಿ ಮಾಡಿ ಬುಧವಾರ ಮಧ್ಯಾಹ್ನ ಆದೇಶಿಸಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿ ಮಾಸ್ಕ್ ಹಾಕದೆ ಹೊರ ಬರುತ್ತಿದ್ದವರಿಗೆ ದುಬಾರಿ ದಂಡವನ್ನು ಇತ್ತೀಚೆಗೆ ಸರಕಾರ ವಿಧಿಸಿ ಆದೇಶವನ್ನು ನೀಡಿತ್ತು. ಇದು ಸಾರ್ಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.