Site icon TUNGATARANGA

ಹಾವೇರಿ ನಗರಕ್ಕೆ ಭದ್ರಾ ಡ್ಯಾಂನಿಂದ ಕುಡಿಯುವ ನೀರು ಬಿಡುಗಡೆ


ಶಿವಮೊಗ್ಗ, ಹಾವೇರಿ ಜಿಲ್ಲೆ ರಾಣೆಬೆನ್ನೂರು, ಬ್ಯಾಡಗಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಅಲ್ಲದೇ ನದಿಯ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ ತುಂಗಾ-ಭದ್ರಾ ನದಿಗೆ ೧.೦೦ ಟಿ.ಎಂ.ಸಿ. ನೀರನ್ನು ಹರಿಸಲು ಆದೇಶಿಲಾಗಿದೆ.


ಪ್ರಾದೇಶಿಕ ಆಯುಕ್ತರ ಅದೇಶದನ್ವಯ ಏ.೨೭ ರ ಸಂಜೆ ೬.೦೦ ರಿಂದ ಮೇ ೦೯ ರ ಬೆಳಗ್ಗೆ ೬.೦೦ ರವರೆಗೆ ಪ್ರತಿ ದಿನ ೧೦೦೦ ಕ್ಯೂಸೆಕ್ಸ್‌ನಂತೆ ಒಟ್ಟು ೧೧೫೭೪ ಕ್ಯೂಸೆಕ್ಸ್ ಪ್ರಮಾಣದ ನೀರನ್ನು ಭದ್ರಾ ನದಿಗೆ ಹರಿಸಲಾಗುವುದು. ಈ ಅವಧಿಯಲ್ಲಿ ನದಿ ಪಾತ್ರದಲ್ಲಿ ಪ್ರಗತಿಯಲ್ಲಿರುವ

ಕಾಮಗಾರಿಗಳನ್ನು, ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಸಂಬಂಧಿಸಿದ ಕೆಲಸ ಇತ್ಯಾದಿಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಮತ್ತು

ರೈತರು ನದಿ ದಂಡೆಯಲ್ಲಿ ಪಂಪ್‌ಸೆಟ್ ಅಳವಡಿಸುವುದು ಮತ್ತು ಅನಧಿಕೃತವಾಗಿ ನೀರೆತ್ತುವುದನ್ನು ನಿಷೇಧಿಸಲಾಗಿದೆ ಕರ್ನಾಟಕ ನೀರಾವರಿ ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version