Site icon TUNGATARANGA

ಶಿವಮೊಗ್ಗ ಜೈಲಿಗೆ ಪೊಲೀಸ್ ಇಲಾಖೆ ದಿಡೀರ್ ಬೇಟಿ, ಚುನಾವಣೆ ಹಿನ್ನೆಲೆಯಲ್ಲಿ ವಿಚಾರಣೆ ಯಾಕೆ ಗೊತ್ತಾ?


ಶಿವಮೊಗ್ಗ, ಮಾ. 24:

ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗ ಕೇಂದ್ರ‌ಕಾರಾಗೃಹದಲ್ಲಿ ಬೇಟಿ ಮಾಡಿ ಪರಿಶೀಲಿಸಿದರು.

ಮುಂಜಾಗ್ರತಾ ಕ್ರಮವಾಗಿ ಇಂದು ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಅನಿಲ್ ಕುಮಾರ್ ಭೂಮ ರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಬಾಲರಾಜ್, ಡಿವೈಎಸ್.ಪಿ, ಶಿವಮೊಗ್ಗ –ಎ ಉಪವಿಭಾಗ, ಮಂಜುನಾಥ್, ಪೊಲೀಸ್ ನಿರೀಕ್ಷಕರು, ತುಂಗಾನಗರ ಪೊಲೀಸ್ ಠಾಣೆ, ಅಂಜನ್ ಕುಮಾರ್, ಪೊಲೀಸ್ ನಿರೀಕ್ಷಕರು, ದೊಡ್ಡಪೇಟೆ ಪೊಲೀಸ್ ಠಾಣೆ, ಗಜೇಂದ್ರಪ್ಪ, ಪೊಲೀಸ್ ನಿರೀಕ್ಷಕರು, ಜಯನಗರ ಪೊಲೀಸ್ ಠಾಣೆ, ಜಯಶ್ರೀ ಮಾನೆ, ಸಿಪಿಐ ಶಿವಮೊಗ್ಗ ಸಂಚಾರ ವೃತ್ತ ಮತ್ತು ಸಂಜೀವ್‌ ಮಹಾಜನ್, ಪೊಲೀಸ್ ನಿರೀಕ್ಷಕರು ವಿನೋಬನಗರ ಪೊಲೀಸ್ ಠಾಣೆ, ಹಾಗೂ 05 ಜನ ಪಿಎಸ್ಐ ಮತ್ತು 50 ಜನ ಪೊಲೀಸ್ ಸಿಬ್ಬಂದಿಗಳ ತಂಡವು ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

Exit mobile version