ಶಿವಮೊಗ್ಗ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಶೇಕಡ ೧೦೦ರಷ್ಟು ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದ ೪೨೦ ಮಕ್ಕಳು ಸಹ ಉತ್ತೀರ್ಣರಾಗಿದ್ದು, ಅದರಲ್ಲಿ ೨೫೪ ಮಕ್ಕಳು ಡಿಸ್ಟಿಂಕ್ಷನ್ ಪಡೆದಿದ್ದಾರೆ.೧೬೦ ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಆರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ,
ಶೇಕಡ ನೂರಕ್ಕೆ ನೂರು ಅಂಕ ಪಡೆದ ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರದ ೩, ರಾಸಾಯನಶಾಸ್ತ್ರದ ನಾಲ್ಕು, ಗಣಿತದ ೮, ಜೀವಶಾಸ್ತ್ರದ ೩, ಕಂಪ್ಯೂಟರ್ ವಿಜ್ಞಾನದ ೧೪ ಹಾಗೂ ಕನ್ನಡ ಎರಡು, ಸಂಸ್ಕೃತದಲ್ಲಿ ೧೨ ವಿದ್ಯಾರ್ಥಿಗಳು ಈ ಫಲಿತಾಂಶ ಪಡೆದಿದ್ದಾರೆ.
ಈ ವಿಜ್ಞಾನ ಕಾಲೇಜಿನ ಟಾಪರ್ ಆಗಿರುವ ಎಂ ಎಸ್ ಸ್ಪೂರ್ತಿ ಅವರು ೫೯೦ ಅಂಕ ಗಳಿಸಿ ಶಿವಮೊಗ್ಗ ಜಿಲ್ಲೆಯ ಪ್ರಥಮ ಸ್ಥಾನವನ್ನು ಪಡೆದಿದ್ದು, ರಾಜ್ಯದಲ್ಲಿ ಏಳನೇ ರಾಂಕ್ ಗಳಿಸಿದ್ದಾರೆ.
ಅಂತೆಯೇ ೫೮೮ ಅಂಕ ಪಡೆದಿರುವ ಶಶಾಂಕ್ ಜೋಯ್ಸ್ ರಾಜ್ಯದಲ್ಲಿ ೯ನೇ ಸ್ಥಾನ ಪಡೆದಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದಾರೆ. ಅಂತೆಯೇ ಧ್ರುವ ಅವರು ೫೮೫, ಪೂರ್ವಿಕಾಯ ವರು ೫೮೫, ಕೃತಿಕಾ ಅವರು ೫೮೪, ನಮೃತ ಅವರು ೫೮೪, ಮೋನಿಷಾ ಅವರು ೫೮೧, ನಮ್ರತಾ ವಿಟಿ ಅವರು ೫೮೧, ವಿಜೇತ ಬಿ ವಿ ಅವರು ೫೮೧, ಪ್ರಾರ್ಥನಾ ಎಂ ಅವರು ೫೮೦, ವಿಸ್ಮಯ ಸೇತುರ್ ಅವರು ೫೮೦ ಅಂಕಗಳಿಸಿದ್ದಾರೆ.
ಅತಿ ಹೆಚ್ಚು ಅಂಕ ಪಡೆದ ಹಾಗೂ ಕಾಲೇಜಿಗೆ ಶೇಕಡ ನೂರರ ಫಲಿತಾಂಶ ತಂದುಕೊಟ್ಟ ಮಕ್ಕಳಿಗೆ ಹಾಗೂ ಅಧ್ಯಾಪಕ ವೃಂದಕ್ಕೆ, ಪ್ರಾಂಶುಪಾಲರಿಗೆ ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅಭಿನಂದಿಸಿದ್ದಾರೆ.