Site icon TUNGATARANGA

ಶಿವಮೊಗ್ಗ ಬಿಜೆಪಿಗೇ ಕ್ಯಾಂಡಿಡೇಟೇ ಇಲ್ಲ…, ಪಾಪ ಬೀದಿಯೆಲ್ಲೆಡೆ ಜನರಿಗೆ (ಮಹಿಳೆಯರಿಗೆ) ಪೋನ್ ಮಾಡಿ ಕರಿತಿರೋದ್ಯಾಕೆ? ನಗರಾಧ್ಯಕ್ಷ ಜಗದೀಶ್ ಕಣ್ಮರೆಯಾದೀರಾ? ಹೈಕಮಾಂಡ್ ನಾಟಕಕ್ಕೆ ಕಾರಣಕರ್ತರಾರು?


ಶಿವಮೊಗ್ಗ,ಏ.19:


ನಾಳೆ ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ಕೊನೆ ದಿನ. ಇದು ಎಲ್ಲರಿಗೂ ಗೊತ್ತಿದೆ. ಶಿವಮೊಗ್ಗ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಈ ಮೊದಲೇ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಚುನಾವಣಾ ಕಣದಲ್ಲಿ ಅಂಕಣಕ್ಕೆ ಇಳಿದಿದೆ. ಆದರೆ ಇನ್ನೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿ ಮಾತ್ರ ಮೌನವೃತದಲ್ಲೇ ನಮ್ಮ ಕಾರ್ಯಕರ್ತರು, ನಮ್ಮ ಪಕ್ಷ ಎಂದು ಹೇಳುತ್ತಲೇ ಪ್ರತಿ ಮನೆ ಮನೆಗೆ ನಾಳೆ ನಾಮಪತ್ರ ಸಲ್ಲಿಕೆ ಇದೆ ನೀವು ಬನ್ನಿ ಜೊತೆಗಿದ್ದವರನ್ನು ಕರೆತನ್ನಿ ಎಂದು ದೂರವಾಣಿ ಮೂಲಕ ಕರೆ ಮಾಡುವ ಕೆಲಸವನ್ನು ನೋಡಿದರೆ ಅಯ್ಯೋ ಪಾಪ ಅನ್ಸಿಸುತ್ತದೆ.

ಇದನ್ನೂ ಓದಿ

ಶಿವಮೊಗ್ಗ ಬಿಜೆಪಿಗೆ ಇಂತಹ ಸ್ಥಿತಿ ಬರಬಾರದಿತ್ತು… ಅಭ್ಯರ್ಥಿ ಹೆಸರೇ ಇಲ್ಲ ನಾಮಪತ್ರ ಸಲ್ಲಿಸ್ತಾರಂತೆ, ಈಶ್ವರಪ್ಪರೇ ಕ್ಯಾಂಡಿಡೇಟಾ? https://tungataranga.com/?p=19581 ಸಂಪೂರ್ಣ ಸುದ್ದಿ ಓದಲು ಲಿಂಕ್ ಬಳಸಿ


ಒಂದು ರಾಷ್ಟ್ರೀಯ ಪಕ್ಷ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಅಥವಾ ನೇಮಕ ಮಾಡಿ ಘೋಷಣೆ ಮಾಡುವುದು ಕಷ್ಟವೇ ನಲ್ಲ. ಶಿವಮೊಗ್ಗದಲ್ಲಿ ಈಶ್ವರಪ್ಪ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಸ್ತುತ ರಾಜಕೀಯ ಮುತ್ಸದ್ದಿತನ ಮೆರೆದು ತಮ್ಮ ಪಕ್ಷ ಹಾಗೂ ಸಿದ್ಧಾಂತದ ನಿಲುವಿಗೆ ಕಟಿ ಬದ್ಧರಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದಾಗಲೂ ಬಿಜೆಪಿಯಿಂದ ಅಭ್ಯರ್ಥಿಯ ಆಯ್ಕೆಯನ್ನು ಮಾಡಲಾಗದಿರುವುದು ಕೇಂದ್ರ ಹೈಕಮಾಂಡ್ ದೌರ್ಬಲ್ಯವೇ ಹೌದು.

Breaking News/ ಬಿಜೆಪಿ ಹೈಕಮಾಂಡ್ ಸೂಚನೆ : ಶಿವಮೊಗ್ಗದಿಂದ ಕೆ.ಎಸ್. ಈಶ್ವರಪ್ಪ ಸ್ಪರ್ಧೆ ? ರಾಜಕೀಯ ಮುತ್ಸದ್ದಿತನಕ್ಕೆ ಸಿಕ್ಕ ಗೌರವ https://tungataranga.com/?p=19576 ಸಂಪೂರ್ಣ ಸುದ್ದಿ ಓದಲು ಲಿಂಕ್ ಬಳಸಿ


ಏಕೆಂದರೆ ಇಷ್ಟರೊಳಗೆ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರೆ ಆ ಪಕ್ಷ ಹಾಗೂ ಆ ಪಕ್ಷದ ಪ್ರೀತಿಯ ಕಾರ್ಯಕರ್ತರು ಒಪ್ಪಿಕೊಳ್ಳುತ್ತಿದ್ದರು.
ಬಿಜೆಪಿಯ ಶಿವಮೊಗ್ಗ ನಗರ ಅಧ್ಯಕ್ಷ ಜಗದೀಶ್ ಅವರು ಏಕಾಏಕಿ ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ನೀಡುವ ಮೂಲಕ ನಾಳೆ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಸಮಾರಂಭ ಹಾಗೂ ಮೆರವಣಿಗೆ ನಡೆಯಲಿದೆ.

ತಾವುಗಳು ಬನ್ನಿ ಎಂದು ಪತ್ರಿಕ ಹೇಳಿಕೆ ನೀಡಿದ್ದಾರೆ. ಇದರಲ್ಲಿ ನಿಕಟ ಪೂರ್ವ ಮುಖ್ಯಮಂತ್ರಿ ಹಾಗೂ ನಿಕಟ ಪೂರ್ವ ಮುಖ್ಯಮಂತ್ರಿ ಬಿಜೆಪಿಯ ಪ್ರಮುಖರೆಲ್ಲರೂ ಬರುತ್ತಾರೆ ಎಂದಿದ್ದಾರೆ. ಆದರೆ ಅಭ್ಯರ್ಥಿ ಯಾರು ಎಂಬುದು ಅವರಿಗೆ ಗೊತ್ತಿಲ್ಲ. ಅಂದರೆ ಬಿಜೆಪಿಯ ಹೊಡೆತ ಎಂಥವುದು. ಏಕೆ ಅಭ್ಯರ್ಥಿಯ ಹೆಸರನ್ನು ಹೇಳಲು ಮುಜುಗರ, ನಾಚಿಕೆ ಬೇಕು.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ವಿಷಯಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಜನ ಪ್ರಯತ್ನಿಸಿದ್ದಾರೆ ಈಶ್ವರಪ್ಪ ಅವರಿಗೆ ಕೇಂದ್ರ ಹೈಕಮಾಂಡ್ ಮನವೊಲಿಸಬಹುದಿತ್ತು. ಆದರೆ ಅದಾವುದನ್ನು ಮಾಡದೆ ಕೇವಲ ನಾಳೆ ನಾಮಪತ್ರ ಸಲ್ಲಿಕೆ ಎಂದು ಇಲ್ಲಿರುವ ಕಾರ್ಯಕರ್ತರನ್ನು ನಗರಾಧ್ಯಕ್ಷರನ್ನು ಜಿಲ್ಲಾ ಪದಾಧಿಕಾರಿಗಳನ್ನು ಬಿಜೆಪಿ ಹೈಕಮಾಂಡ್ ದುರ್ಬಳಕೆ ಮಾಡಿಕೊಂಡಿದೆ ಎಂಬ ಅನುಮಾನ ಕಾಡುತ್ತಿದೆ.


ಇಷ್ಟರ ನಡುವೆ ಬಿಜೆಪಿ ಶಿವಮೊಗ್ಗ ನಗರ ಘಟಕ ಶಿವಮೊಗ್ಗದ ಮನೆ ಮನೆಗಳಲ್ಲಿ ಮಹಿಳೆಯರಿಗೆ ಫೋನ್ ಮಾಡಿ ನೀವು ನಾಳೆ ನಮ್ಮ ಸಮಾರಂಭಕ್ಕೆ ಬನ್ನಿ ನಾಮಪತ್ರ ಸಲ್ಲಿಕೆ ಇದೆ ನಮ್ಮ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂದು ಸಮಯವನ್ನು ಹೇಳುತ್ತಾ ಜಾಗವನ್ನು ಹೇಳುತ್ತಾ ಕರೆ ಮಾಡುತ್ತಿರುವುದಾದರೂ ಯಾಕೆ? ಅಲ್ಲಿ ಕರೆ ಮಾಡಿದ ಬಹಳಷ್ಟು ಮಂದಿ ಮಹಿಳೆಯರು ಯಾರು ಕ್ಯಾಂಡಿಡೇಟ್ ಎಂದು ಕೇಳಿದ್ದಾರೆ. ಪಾಪ ನಗರ ಅಧ್ಯಕ್ಷರಿಗೆ ಗೊತ್ತಿಲ್ಲ ಜಿಲ್ಲಾಧ್ಯಕ್ಷರು ತಮಗಿದು ಸಂಬಂಧವಿಲ್ಲ ಎಂಬಂತಿದ್ದರೆ, ಅದು ಗೊತ್ತಿಲ್ಲದವರು ಫೋನ್ ಕರೆ ಮಾಡಿದವರು ಹೇಗೆ ತಾನೇ ಕ್ಯಾಂಡಿಡೇಟ್ ಹೆಸರನ್ನು ಹೇಳಲು ಸಾಧ್ಯ ಬಿಜೆಪಿ ಈ ಮಟ್ಟಿಗೆ ಅಭ್ಯರ್ಥಿಯ ಹೆಸರನ್ನು ಮುಚ್ಚಿಡುವ ಬಚ್ಚಿಡುವ ಭಯಪಡುವ ಅಗತ್ಯವಿದ್ದಿಲ್ಲ. ಏಕೆಂದರೆ ಆಯನೂರು ಮಂಜುನಾಥ್ ನೇರವಾಗಿ ಸೆಡ್ಡು ಹೊಡೆದು ಜೆಡಿಎಸ್ ನಾಮಪತ್ರ ಸ್ವೀಕರಿಸಿರುವಾಗಲೂ ನಿಮ್ಮಲ್ಲಿ ಒಬ್ಬ ಕ್ಯಾಂಡಿಡೇಟ್ ಅನ್ನು ಆಯ್ಕೆ ಮಾಡಲು ಹೈಕಮಾಂಡ್ಗೆ ಸಾಧ್ಯವಾಗಲ್ಲವಾ?
ಸುಖಾ ಸುಮ್ಮನೆ ಚೆಂದಾಗಿರುವ ಚೆಂದಾಗಿ ಬೆಳೆದ ಬಿಜೆಪಿ ಇಷ್ಟೋಂದು ಸಂಕೋಚ ಮುಜುಗರ ಅನುಭವಿಸುವುದು ಬೇಸರವೆನಿಸುತ್ತದೆ. ಇಲ್ಲಿ ಯಾವ ರಾಮನೂ ಇಲ್ಲ ಯಾವ ಅಲ್ಲಾನೂ ಇಲ್ಲ ಅಲ್ಲವೇ?

Exit mobile version