ಜಗದೀಶ್ ಶೆಟ್ಟರೇ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದೀರಿ. ಕಾಲ ಇನ್ನೂ ಮಿಂಚಿಲ್ಲ. ಇನೊಮ್ಮೆ ಯೋಚಿಸಿ. ಮರಳಿ ಪಕ್ಷಕ್ಕೆ ಬನ್ನಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಜಗದೀಶ್ ಶೆಟ್ಟರಿಗೆ ಬಹಿರಂಗ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಬರೆದ ಬಹಿರಂಗ ಪತ್ರ ಬಿಡುಗಡೆ ಮಾಡಿ ಮಾತನಾಡಿ, ಜಗದೀಶ್ ಶೆಟ್ಟರ್ ಅವರೇ ಪಕ್ಷ ನಿಮಗೆ ಎಲ್ಲವನ್ನೂ ನೀಡಿದೆ. ೬ ಬಾರಿ ಶಾಸಕರಾಗಿದ್ದೀರಿ. ರಾಜ್ಯಾಧ್ಯಕ್ಷ ರಾಗಿದ್ದೀರಿ. ಪಕ್ಷ ನಿಮಗೆ ಮುಖ್ಯಮಂತ್ರಿ ಪಟ್ಟ ವನ್ನೂ ನೀಡಿದೆ. ಕೇವಲ ಒಂದು ಟಿಕೆಟ್ ಗಾಗಿ ತಲಾ ತಲಾಂತರದಿಂದ ಬಂದ ಬಿಜೆಪಿಯ ಸಿದ್ದಾಂತಗಳನ್ನು ಮಾರಿಕೊಳ್ಳುತ್ತಿ ದ್ದೀರಾ. ಅದು ಬಿಜೆಪಿಗೆ ವಿರುದ್ಧವಾಗಿರುವ ಕಾಂಗ್ರೆಸ್‌ಗೆ ಇದು ಸರಿ ಯಲ್ಲ. ಮತ್ತೊಮ್ಮೆ ಯೋಚಿಸಿ ಎಂದರು.
ಸುಮಾರು ೪ ದಶಕಗಳಿಗೂ ಹೆಚ್ಚಿನ ಕಾಲ ತಾವು ನಂಬಿ ತಮ್ಮ ರಾಜಕೀಯ ಜೀವನ ವನ್ನು ರೂಪಿಸಿಕೊಂಡಿದ್ದ ತತ್ವ ಸಿದ್ಧಾಂತ, ರಾಜಕೀಯ ನಿಲುವನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷದ ಕಡೆ ತಾವು ಮುಖ ಮಾಡಿರುವ ಈ ಬದಲಾದ ಪರಿಸ್ಥಿತಿ ಯಲ್ಲಿ ನನಗೆ ನಿಮ್ಮ ಪೂಜ್ಯ ತಂದೆಯವರಾದ ದಿ.ಶಿವಪ್ಪ ಶೆಟ್ಟರು ಬಹಳವಾಗಿ ನೆನಪಾಗು ತ್ತಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಟ್ಟ ಪ್ರಭಾವದಲ್ಲಿ ತಮ್ಮ ರಾಜಕೀಯ ಜೀವನ ರೂಪಿಸಿ ಕೊಂಡ ದಿ.ಶಿವಪ್ಪ ಶೆಟ್ಟರು, ಭಾರತೀಯ ಜನತಾ ಪಕ್ಷದ ಮೂಲಕ ನಗರ ಸಭೆಯ ಸದಸ್ಯರಾಗಿ, ಮಹಾಪೌರರಾಗಿ, ಶಾಸಕರಾಗಿ ಎಲ್ಲದಕ್ಕಿಂತ ಮಿಗಿಲಾಗಿ ಪಕ್ಷದ ನಿಷ್ಟಾವಂತ ಕಾರ್ಯ ಕರ್ತರಾಗಿ ಜನಸೇವೆ ಯಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು, ಇದನ್ನು ಮರೆತುಬಿಟ್ಟಿರಾ ಎಂದರು.
ಮುಂದೆ ಒಂದು ದಿನ ತಾವು ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದ ಸಂದರ್ಭ ದಲ್ಲಿ ಸದನದಲ್ಲಿ ಗೋ ಹತ್ಯೆ ಪರ -ವಿರೋಧದ ಚರ್ಚೆ ನಡೆದರೆ ತಾವು ಗೋಹತ್ಯೆಯನ್ನು ಸಮರ್ಥಿಸಲು ಸಾಧ್ಯವೇ? ಉಗ್ರ ಪಿಎಫ್‌ಐ ಸಂಘಟನೆ ಕುರಿತಾದ ಪರ-ವಿರೋಧದ ಚರ್ಚೆಯಲ್ಲಿ ಪಿಎಫ್‌ಐ ನಿಬಂಧ ತೆರವು ಮಾಡಲು ತಾವು ಸಮ್ಮತಿಸಲು ಸಾಧ್ಯವೇ? ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲು ವಿರೋಧ ವ್ಯಕ್ತ ಪಡಿಸಿದ ಕಾಂಗ್ರೆಸ್ ಪಕ್ಷದ ವಿರುದ್ಧ ತಮ್ಮ ಉಗ್ರ ಹೋರಾಟ ನನಗಿನ್ನೂ ಮನಸ್ಸಿನಲ್ಲಿ ಹಸಿರಾಗಿದೆ. ಈಗ ತಾವು ಅದೇ ಪಕ್ಷವನ್ನು ಯಾವ ರೀತಿ ಒಪ್ಪಿಕೊಳ್ಳಲು ಸಾಧ್ಯ? ಎಂದು ಪ್ರಶ್ನಿಸಿದರು.
ಲಕ್ಷ್ಮಣ ಸವದಿ ಅವರೂ ಬಿಜೆಪಿ ಬಿಟ್ಟಿರುವರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರದ ಆಸೆಗೆ ಬಂದವರು ಹಲವರಿದ್ದಾರೆ. ಅವರು ಪಕ್ಷ ಕಟ್ಟಲು ಬಂದವರಲ್ಲ. ಟಿಕೆಟ್ ಸಿಗದೆ ಹೋದರೆ ನನ್ನನ್ನು ಚೆನ್ನಾಗಿ ನಡೆಸಿಕೊಂಡಿಲ್ಲ ಎಂದ ಮತ್ತೆ ಬೇರೆ ಬೇರೆ ಪಕ್ಷಗಳಿಗೆ ಹೋಗುತ್ತಾರೆ. ಆದರೆ ಜಗದೀಶ್ ಶೆಟ್ಟರ್ ಹಾಗಿರಲಿಲ್ಲ. ಟಿಕೆಟ್‌ಗಾಗಿಯೇ ಕಾಂಗ್ರೆಸ್ ಸೇರುತ್ತಾರೆ ಎಂದು ತಿಳಿದಿದ್ದರೆ ಅವರನ್ನು ಬಿಜೆಪಿ ಇಷ್ಟು ಎತ್ತರಕ್ಕೆ ಬೆಳೆಸುತ್ತಿರಲಿಲ್ಲ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಡಾ. ಧನಂಜಯ ಸರ್ಜಿ, ಎಸ್. ಜ್ಞಾನೇಶ್ವರ್, ಸುನೀತಾ ಅಣ್ಣಪ್ಪ, ಮೋಹನ್ ರೆಡ್ಡಿ, ವಿಶ್ವಾಸ್, ವಿನ್ಸೆಂಟ್ ಅಣ್ಣಪ್ಪ, ನಾಗರಾಜ್ ಜಗದೀಶ್ ಮತ್ತಿತರರು ಇದ್ದರು.