ಶಿವಮೊಗ್ಗ, : ಬರ್ತ್ಡೆ ಪಾರ್ಟಿಗೆಂದು ತೆರಳುತ್ತಿದ್ದವರ ಮೇಲೆ ಸುಖಾ ಸುಮ್ಮನೇ ಹಲ್ಲೆ ನಗರದ ಬಸವನಗಂಗೂರಿನ ಚಾನಲ್ನ ಸೇತುವೆ ಬಳಿ ಸ್ನೇಹಿತನ ಹುಟ್ಟುಹಬ್ಬವನ್ನು ಆಚರಿಸಲು ತೆರಳುತ್ತಿದ್ದ ಇಬ್ಬರು ಯುವಕರಿಬ್ಬರನ್ನು ಓಮ್ನಿ ಡಿಕ್ಕಿ
ಹೊಡೆದ ನೆಪದಲ್ಲಿ ಅಡ್ಡಗಟ್ಟಿ ಏಕಾ ಏಕೀ ಚಾಕು ಹಾಗೂ ಲೀವರ್ಗಳಿಂದ ಹಲ್ಲೆ ನಡೆಸಿದ್ದಲ್ಲದೆ , ಬರೋಬ್ಬರಿ ಸರಿಸುಮಾರು80 ಸಾವಿರ ರೂ ಮೌಲ್ಯದ ಚಿನ್ನದ ಸರವನ್ನು ಸಹ ಕಿತ್ತುಕೊಂಡು ಇಬ್ಬರಿಗೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ.
ನಗರದ ಶರಾವತಿ ನಗರದ ಮೂವರು ಯುವಕರು ಹಲ್ಲೆಗೆ ಒಳಗಾದವರು ಎನ್ನಲಾಗಿದೆ. ಅವರ ಸ್ನೇಹಿತನ ಜನ್ಮದಿನವಿತ್ತು. ಅವರ ಜನ್ಮದಿನವನ್ನು ಆಚರಿಸಲು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಓಮ್ನಿ ಡಿಕ್ಕಿ ಹೊಡೆದ ನೆಪದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪ್ರಶ್ನಿಸಲು ಹೋಗಿದ್ದಕ್ಕೆ ಲಾರಿ ಹಾಗೂ ಬೈಕ್ ಗಳಿಂದ ಬಂದ ಅರೋಪಿ ಗಳು ಚಾಕ್ ಲೀವರ್ ಗಳಿಂದ ಹಲ್ಲೆ ನಡೆಸಿ ಪೋಲಿಸರಿಗೆ ದೂರು
ನೀಡಿದರೆ ನಿಮ್ಮ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಹಿಂದೆ ಅತ್ಯಾಚಾರ ಹಾಗೂ ಕೆಲವು ಕೇಸ್ ಗಳಲ್ಲಿ ಅರೋಪಿಯಾಗಿ ರುವ ಓರ್ವ ಸೇರಿದಂತೆ ೧೫ ಮಂದಿ ವಿರುದ್ದ ವಿನೋಬ ನಗರ ಠಾಣೆಯಲ್ಲಿ ದೂರು ದಾಖಲಾ ಗಿದೆ ಎಂದು ತುಂಗಾ ತರಂಗ ಮೂಲಗಳು ತಿಳಿಸಿವೆ.