Site icon TUNGATARANGA

ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್‌ರವರಿಂದ ಕೋಟ್ಯಾಂತರ ಬೆಲೆ ಬಾಳುವ ನಾಟು ಅಕ್ರಮವಾಗಿ ಸಾಗಣೆ ಅಮಾನತಿಗೆ ರೈತ ಸಂಘ ಅಗ್ರಹ

ಪಟ್ಟಣದ ಹಳೆ ತಾಲ್ಲೂಕು ಕಛೇರಿ ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳ ತೆರವುಗೊಳಿಸಿದ್ದ ಕೋಟ್ಯಾಂತರ ಬೆಲೆ ಬಾಳುವ ವಿವಿಧ ಉತ್ತಮ ಜಾತಿಯ ನಾಟಾಗಳನ್ನು ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್‌ರವರು ಅಕ್ರಮವಾಗಿ ಹಳೇ ನಾಟಾ ಕಳ್ಳ ಸಾಗಾಟ ನಡೆಸಿದ್ದರ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರೂ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳದಿರುವುದನ್ನು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಖಂಡಿಸಿದೆ.


ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಕಾರ‍್ಯಾಧ್ಯಕ್ಷ ಎನ್. ಕೆ. ಮಂಜುನಾಥ ಗೌಡ, ಭಾಗಿ ಯಾಗಿರುವ ಅಧಿಕಾರಿ ವಿರುದ್ಧ್ದ ತನಿಖೆ ನಡೆಸ ಬೇಕು. ಮತ್ತು ಅಮಾನತುಗೊಳಿಸಬೇಕು. ಇಂತಹ ಆರೋಪ ಹೊತ್ತಿರುವವರ ವಿರುದ್ಧ ಚುನಾವಣಾ ಆಯೋಗ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.


ಸೊರಬ ಪಟ್ಟಣದ ಹಳೇ ತಾಲೂಕು ಕಛೇರಿ ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳ ತೆರವುಗೊಳಿ ಸಿದ್ದ ಕೋಟ್ಯಾಂತರ ಬೆಲೆ ಬಾಳುವ ಉತ್ತಮ ಜಾತಿಯ ಹಳೇ ನಾಟಾಗಳನ್ನು ಸೊರಬ ಪುರಸಭೆಯ ಮುಂಭಾ ಗದ ಐ.ಡಿ.ಎಸ್.ಎಮ್.ಟಿ ವಾಣಿಜ್ಯ ಸಂಕೀರ್ಣದ ಸೆಲ್ಲಾರ್‌ನಲ್ಲಿ ೨೦೧೯ ರಲ್ಲಿ ಅಂದಿನ ಪುರಸಭೆ ಅಧ್ಯಕ್ಷರು, ಸದಸ್ಯರು ಅಧಿಕಾರಿಗಳ ಉಪಸ್ಥಿತಿಯಲ್ಲಿ ನಿಯಮಾನು ಸಾರ ಸಂಗ್ರಹಿಸಿಡಲಾಗಿತ್ತು. ಆದರೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ನಾಟಾಗಳಾದ ಸಾಗುವಾನಿ, ಬೀಟೆ, ಸೇರಿದಂತೆ ಉತ್ತಮ ಜಾತಿಯ ಪುರಸಭೆ ವಾಣಿಜ್ಯ

ಸಂಕೀರ್ಣ ಸೆಲ್ಲಾರ್‌ನಲ್ಲಿ ಸಂಗ್ರಹಿಸಲಾದ ನಾಟಾಗಳನ್ನು ಶಾಸಕ ಕುಮಾರ್ ಬಂಗಾರಪ್ಪನವರ ಅಣತಿಯಂತೆ ನಿಯಮಬಾಹಿರವಾಗಿ ಫೆಬ್ರವರಿ ೧೬ ರಂದು ನಾಟಾ ಸಾಗಾಟಕ್ಕೆತಯಾರಿ ನಡೆಸಿದ್ದ ಸಂದರ್ಭದಲ್ಲಿ ಸಾರ್ವಜನಿಕರ ಸಮಯ ಪ್ರಜ್ಞೆ ಹಾಗೂ ವಿವಿಧ ಸಂಘಟನೆಗಳು ನೀಡಿದ ಮಾಹಿತಿಯಂತೆ ಸೊರಬ ಅರಣ್ಯಾಧಿಕಾರಿಗಳು ನಾಟಾ ತುಂಬಿದ ವಾಹನವನ್ನು ಹಾಗೂ ವಾಹನ ಚಾಲಕನನ್ನು ವಶಕ್ಕೆ ಪಡೆದಿದ್ದರು ಎಂದರು.


ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಥಮ ವರ್ತಮಾನ ವರದಿ(ಎಫ್.ಐ.ಆರ್) ನಲ್ಲಿ ಇಲಾಖೆ ವಶಕ್ಕೆ ಪಡೆದ ನಾಟಾಗಳು ಸಾಗುವಾನಿ ಯಂದು ನಮೂದಾಗಿದೆ. ಪ್ರಕರಣದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು. ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿದೆ ಎಂದು ವಿವಿಧ ರೀತಿಯಲ್ಲಿ ವಿವಿಧ ಸಂಘಟನೆಗಳು ಹಲವು ರೀತಿಯ ಹೋರಾಟ ನಡೆಸಿ ಸೆಲ್ಲಾರ್‌ನ ಬೀಗವನ್ನು ನೀಡಿ ಅಕ್ರಮ ಸಾಗಾಟಕ್ಕೆ ಕುಮ್ಮಕ್ಕು ನೀಡಿದ್ದವರನ್ನು ಕೂಡಲೇ ಅಮಾನತುಗೊಳಿಸಿ ಈ ಪ್ರಕರಣದಲ್ಲಿ ಭಾಗಿಯಾದವರು ಯಾರೇ ಇರಲಿ,

ಸೂಕ್ತ ತನಿಖೆ ನಡೆಸಿ ವಿವಿಧ ಹಂತದ ಹೋರಾಟ ನಡೆಸಿದರೂ ಮೇಲಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶಫಿಯುಲ್ಲಾ, ಶಿಕಾರಿಪುರದ ಪಿ ವೈ ರವಿ, ಎಚ್. ವಿ ಸತೀಶ್, ಕೆ ಜಿ ಮೇಘರಾಜ್, ಉಮೇಶ್ ಪಾಟೀಲ್, ಈಶ್ವರಪ್ಪ ಕೊಡಕಣಿ ಮೊದಲಾದವರಿದ್ದರು.

Exit mobile version