Site icon TUNGATARANGA

ಇಂಜಿನಿಯರ್ ನಿರ್ಲಕ್ಷ್ಯತನ: ವಿನೋಬನಗರದ ಮೆಸ್ಕಾಂ ಉದ್ಯೋಗಿ ಹಾಲಸ್ವಾಮಿ ಸಾವು/ ಕಂಗಾಲಾದ ಪವರ್ ಮ್ಯಾನ್ ಗಳ ಆಕ್ರೋಶ

ಶಿವಮೊಗ್ಗ, ಏ.15:

ಮೆಸ್ಕಾಂ ಇಲಾಖೆ ಅಧಿಕಾರಿಗಳ ಅಚಾತುರ್ಯದಿಂದ 26 ವರ್ಷದ ಜ್ಯೂನಿಯರ್ ಪವರ್ ಮ್ಯಾನ್ ಸಾವನ್ನಪ್ಪಿದ್ದಾನೆ. ಸರಿಯಾದ ಅರ್ಥಿಂಗ್ ಮಾಡಿಕೊಳ್ಳದೆ ಇರುವುದರಿಂದ ಪವರ್ ಮ್ಯಾನ್ ತೀವ್ರ ವಿದ್ಯುತ್ ಶಾಕ್ ನಿಂದ ಕಂಬದಿಂದ ಬಿದ್ದು ಸಾವನ್ನಪ್ಪಿದ್ದಾನೆ.


ಹಾಲೇಶ್ 26 ವರ್ಷದ ಯುವ ಪವರ್ ಮ್ಯಾನ್ ಸಾಗರ ರಸ್ತೆಯ ವಿನೋಬ ನಗರದಲ್ಲಿರುವ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕರೆಂಟ್ ಹೋದ ಕಾರಣ ಕಂಬ ಹತ್ತಿ ರಿಪೇರಿ ಮಾಡಲು ಮುಂದಾಗಿದ್ದಾರೆ. ವಿದ್ಯುತ್ ರಿವರ್ಸ್ ಹೊಡೆದಿದ್ದು ಹಾಲೇಶ್ ಕಂಬದಿಂದ ಬಿದ್ದು ಸಾವನ್ನಪ್ಪಿದ್ದಾನೆ.
ಯಾರ ನಿರ್ಲಕ್ಷ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಬದಲಿಗೆ ಅರ್ಥಿಂಗ್ ಮಾಡಿಕೊಳ್ಳುವಾಗ ಹಿಂದೂ ಮುಂದೂ ಎರಡೂ ಬದಿ ಅರ್ಥಿಂಗ್ ಮಾಡಿಕೊಳ್ಳದ ಕಾರಣ ಸುರಕ್ಷತೆಯ ಕೊರತೆಯಿಂದ ಸಾವನ್ನಪ್ಪಿರುವುದು ಸ್ಪಷ್ಟವಾಗಿದೆ. ಆತನ ಮೃತದೇಹವನ್ನ ಮೆಗ್ಗಾನ್ ಶವಗಾರಕ್ಕೆತಂದಿರಿಸಲಾಗಿದೆ.


ಹೆಚ್ ಇಟಿ ಲೈನ್ ಹತ್ತಿ ರಿಪೇರಿ ಮಾಡುವಾಗ ವಿದ್ಯುತ್ ಶಾಕ್ ಹೊಡೆದು 11 ಸಾವಿರ ಮೆಗಾವ್ಯಾಟ್ ವಿದ್ಯುತ್ ಶಾಕ್ ಹರಿದ ಪರಿಣಾಮ ಹಾಲಸ್ವಾಮಿ ಹೊಟ್ಟೆಗೆ ಮುಖದಲ್ಲಿ ಬೊಬ್ಬೆ ಬಂದಿದೆ. ಸಾವನ್ನಪ್ಪಿದ್ದಾರೆ. ಮೆಸ್ಕಾಂನಲ್ಲಿ ಕಳೆದ 6 ವರ್ಷದಿಂದ ಕೆಲಸ ಮಾಡುತ್ತಿದ್ದು ಚನ್ನಗಿರಿ ನಲ್ಲೂರು ಬಳಿಯ ಹಿರೇವಾಡ ನಿವಾಸಿ.
ಮೆಸ್ಕಾಂ ಪವರ್ ಮ್ಯಾನ್ ಸಿಬ್ಬಂದಿಗಳೆಲ್ಲಾ ಶವಗಾರದಲ್ಲಿ ಜಮಾಯಿಸಿದ್ದಾರೆ. ಮೆಸ್ಕಾಂನ ಹಿರಿಯ ಅಭಿಯಂತರ ಶಶಿಧರ ಮರಣೋತ್ತರ ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿದರು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ವೇಳೆ ಮೃತನ ಕುಟುಂಬ ಪ್ರಕರಣ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಕಣ್ಣ ಮುಂದೆ ನಗುನಗುತ್ತಾ ಇದ್ದ ಹಾಲಸ್ವಾಮಿ ಕ್ಷಣಮಾತ್ರದಲ್ಲಿ ಶವವಾಗಿದ್ದಾನೆ. ಆಕ್ರೋಶ, ದುಃಖಗಳು ಸಿಬ್ಬಂದಿಗಳು ಹೊರಹಾಕಿದ್ದಾರೆ.

Exit mobile version