Site icon TUNGATARANGA

ಈಶ್ವರಪ್ಪ ಹತ್ಯೆಗೆ ಸಂಚು, ಯಾರು ಯಾಕೇ ಎಲ್ಲಿ ಗೊತ್ತಾ….?

ಬೆಂಗಳೂರು,ಏ.14:

ರಾಜ್ಯದ ಪ್ರಬಲ ಹಿಂದುತ್ವ ರಾಜಕಾರಣಿ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರನ್ನು ಹತ್ಯೆ ಮಾಡಲು ದೊಡ್ಡ ಸಂಚೊಂದು ರೂಪುಗೊಂಡಿತ್ತು ಎಂಬ ಆಘಾತಕಾರಿ ಸುದ್ಧಿ ಬಹಿರಂಗಗೊಂಡಿದೆ.
ಕ್ರಿಮಿನಲ್ ಹಿನ್ನೆಲೆಯುಳ್ಳ ಹಿಂಡಲಗ ಜೈಲಿನಲ್ಲಿರುವ ಪಿಎಫ್‌ಐ ತಂಡ ಜಯೇಶ್ ಪೂಜಾರಿ ಆಲಿಯಾಸ್ ಶಾಹಿದ್ ಶೇಖ್ ಸೇರಿದಂತೆ ಈತನ ಸಹಚರರು ಈ ಸಂಚು ರೂಪಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
ನಾಗಪುರ ಪೊಲೀಸರಿಂದ ಬಂಧನವಾಗಿ ಹಿಂಟಲ್ ಜೈಲಿನಲ್ಲಿರುವ ಈತನಿಂದ ಈಶ್ವರಪ್ಪ ಹತ್ಯೆಗೆ ಸಂಚು ರೂಪುಗೊಂಡಿತ್ತು ಎಂದು ವರದಿಯಾಗಿದೆ.


ಈ ಬಗ್ಗೆ ನಾಗಪುರ ಪೊಲೀಸರು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ವರದಿ ಸಲ್ಲಿಸಿದ್ದು, ಈ ವಿಚಾರ ಕುರಿತಂತೆ ತನಿಖೆ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಬಂಧಿತ ಶಾಹಿದ್ ಶೇಖ್ ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವರು ಹತ್ಯೆಗೆ ಸಂಚು ರೂಪಿಸಿದ್ದ. ಪಿಎಫ್‌ಐ ಸಂಘಟನೆಯನ್ನು ಬ್ಯಾನ್ ಮಾಡಿದ ನಂತರ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಪ್ರಭಾವಿ ನಾಯಕರನ್ನು ಟಾರ್ಗೆಟ್ ಮಾಡಿ ಇಂತಹ ಸಂಚು ರೂಪುಗೊಂಡಿತ್ತು ಎಂದು ವರದಿಯಾಗಿದೆ.
ಈ ಬಗ್ಗೆ ಈಶ್ವರಪ್ಪ ಹೇಳಿದ್ದೇನು?


ಇನ್ನು ತಮ್ಮ ಹತ್ಯೆ ಸಂಚು ರೂಪುಗೊಂಡಿತ್ತು ಎಂಬ ವರದಿ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೆ.ಎಸ್. ಈಶ್ವರಪ್ಪ, ಇಂತಹ ಬೆದರಿಕೆಗಳಿಗೆ ತಾನೆಂದೂ ಬಗ್ಗುವುದಿಲ್ಲ. ಯಾವುದೇ ಸಂಚು ಬೆದರಿಕೆಗಳಿಗೆ ಹೆದರಿ ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.


ಈ ವಿಚಾರದ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು.

Exit mobile version