ಪಕ್ಷ ಅವನಿಗೇನು ಕಡಿಮೆ ಮಾಡಿದೆ. ಎಲ್ಲ ಕೊಟ್ಟ ಮೇಲೂ ರಾಜೀನಾಮೆ ಕೊಡುತ್ತೇನೆ ಅನ್ನೋದು ಈಸಿ. ಅವನಿಗೆ ಕರೆದು ಮಾತನಾ ಡುವೆ, ಸರಿಪಡಿಸುವೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗರಂ ಆಗಿ ಹೇಳಿದರು.
ಟಿಕೆಟ್ ವಂಚಿತ, ಅಸಮಾಧಾನಿತರನ್ನು ಕರೆಯಿಸಿಕೊಂಡು ಮಾತುಕತೆಯಾಡಿ ಮನವೊ ಲಿಕೆ ಕಾರ್ಯದಲ್ಲಿ ಬಿಎಸ್ ವೈ ತೊಡಗಿಕೊಂ ಡಿದ್ದು, ಸುದ್ದಿಗಾರರಿಗೆ ಇಂದು ಪ್ರತಿಕ್ರಿಯಿ ಸಿದರು.
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಟಿಕೆಟ್ ಸಿಗದ ಕಾರಣ ಬೇಸರಗೊಂಡು ರಾಜೀನಾಮೆ ನಿರ್ಧರಿಸಿರುವ ಬಗ್ಗೆ ಸಿಡಿಮಿಡಿ ಗೊಂಡ ಅಸಮಾಧಾನಿತರ ಜತೆಗೆ ಚರ್ಚಿಸಿ ಮನವೊಲಿಸಲಾಗುತ್ತದೆ. ಪಕ್ಷದಿಂದ ಎಲ್ಲ ಪಡೆದ ಕುಮಾರಸ್ವಾಮಿಗೂ ಕರೆದು ಮಾತನಾಡುವೆ.
ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೂ ಬರಲು ಹೇಳಿರುವೆ. ಮೂರ್ನಾಲ್ಕು ಜನರ ಜತೆಗೆ ಮಾತನಾಡಿರುವೆ. ಶೀಘ್ರವೇ ಸಹಜ ಸ್ಥಿತಿಗೆ ಬರಲಿದೆ. ಎಲ್ಲರೂ ಪಕ್ಷದ ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಬಿಎಸ್ ವೈ ವಿಶ್ವಾಸ ವ್ಯಕ್ತಪಡಿಸಿದರು.