Site icon TUNGATARANGA

ಈಶ್ವರಪ್ಪರಿಗೆ ಬಿಜೆಪಿ ಟಿಕೇಟ್ ನೀಡಲು ತಮಿಳು ಸಮಾಜದ ನಾಯಕ ಎಸ್. ಮಂಜುನಾಥ್ (ಬಕೇಟ್) ಒತ್ತಾಯ

ಶಿವಮೊಗ್ಗ,ಏ.13:
ತಮಿಳು ಸಮಾಜದ ಅಭಿವೃದ್ದಿಗೆ ಶಿವಮೊಗ್ಗದಲ್ಲಿ ಅಪಾರ ಕೊಡುಗೆ ನೀಡಿದ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ತಮ್ಮ ಬಿಜೆಪಿ ಪಕ್ಷ ಈ ಬಾರೀ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು. ಅವರು ಚುನಾವಣಾ ರಾಜೀನಾಮೆ ಘೋಷಿಸಿದ್ದರೂ ಸಹ ಪಕ್ಷದ ವರ್ಚಸ್ಸನ್ನು ಅವರು ಬೆಳೆಸಿರುವ ನಾಲ್ಕು ದಶಕದ ಶ್ರಮವನ್ನು ಪರಿಗಣಿಸಿ ಅವರಿಗೆ ಶಾಸಕ ಸ್ಥಾನದ ಟಿಕೆಟ್ ನೀಡಿ ಅವರನ್ನು ಚುನಾವಣೆಗೆ ಸ್ಪರ್ಧಿಸುವಂತೆ ಮಾಡಬೇಕು ಎಂದು ತಮಿಳು ಸಮಾಜದ ಪ್ರಮುಖ ಹಾಗೂ ಬಿಜೆಪಿ ಪ್ರಮುಖರಾದ ಎಸ್ ಮಂಜುನಾಥ್ (ಬಕೇಟ್) ಒತ್ತಾಯಿಸಿದ್ದಾರೆ.


ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ಪ್ರಮುಖರಿಗೆ ಆಗ್ರಹಿಸಿರುವ ಮಂಜುನಾಥ್ ಅವರು ಈಶ್ವರಪ್ಪ ಅವರು ನಾಲ್ಕು ದಶಕಗಳಿಂದ ಶಿವಮೊಗ್ಗ ಜಿಲ್ಲೆಯ ಅದರಲ್ಲೂ ಶಿವಮೊಗ್ಗ ನಗರದ ಅಭಿವೃದ್ಧಿಗೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಶಾಸಕರಾಗಿ, ಸಚಿವರಾಗಿ, ಉಪಮುಖ್ಯಮಂತ್ರಿಗಳಾಗಿ ಕರ್ತವ್ಯ ನಿರ್ವಹಿಸಿರುವುದನ್ನು ಗಮನಿಸಿ ಅವರಿಗೆ ಈ ಸ್ಥಾನವನ್ನು ತಾವುಗಳು ನೀಡುವ ಮೂಲಕ ಶಿವಮೊಗ್ಗದ ಅಭಿವೃದ್ದ ಹರಿಕಾರರ ಕರ್ತವ್ಯಕ್ಕೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.


ಈಶ್ವರಪ್ಪ ಅವರು ಈ ಸ್ಥಾನವನ್ನು ಅಥವಾ ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದಾದರೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಈ ಟಿಕೆಟ್ ಅನ್ನು ಅವರ ಪತ್ರ ಪುತ್ರ ಕಾಂತೇಶ ಅವರಿಗೆ ನೀಡಬೇಕೆಂದು ಎಸ್ ಮಂಜುನಾಥ್ ವಿನಂತಿಸಿ ಆಗ್ರಹಿಸಿದ್ದಾರೆ.

Exit mobile version