Site icon TUNGATARANGA

ಈಶ್ವರಪ್ಪ ಹೆಸರಿನಲ್ಲಿ ರಾಜಕೀಯ ನಿವೃತ್ತಿ/ ಇದು ನಿಜವೋ ಸುಳ್ಳೋ…?!

ಮಾಜಿ ಉಪಮುಖ್ಯಮಂತ್ರಿ, ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್ ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ ಎಂಬ ಸುದ್ದಿ ಹಾಗೂ ಅವರ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ನಿಜವೋ ಸುಳ್ಳೋ ಹೇಳಲು ಯಾರೂ ಸಿಗ್ತಿಲ್ಲ.


ಪತ್ರದ ಪ್ರಕಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಪತ್ರ ಬರೆದಿರುವ ಅವರು, ನಾನು ಸ್ವ-ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತರಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದಾಗಿ ವಿನಂತಿ ಮಾಡಿದ್ದಾರೆ.


ಕಳೆದ ೪೦ಕ್ಕೂ ಹೆಚ್ಚು ವರ್ಷದ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ ರಾಜ್ಯದ ಉಪ-ಮುಖ್ಯಮಂತ್ರಿಯವರೆಗೆ ಗೌರವ ಸ್ಥಾನ ಮಾನ ನೀಡಿದ ಪಕ್ಷದ ಹಿರಿಯರಿಗೆ ಧನ್ಯವಾದಗಳು ಎಂದೂ ಸಹಪತ್ರದಲ್ಲಿ ತಿಳಿಸಿದ್ದಾರೆ.


ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಈಶ್ವರಪ್ಪ ಧಿಡೀರ್ ಬೆಳವಣಿಗೆಯಲ್ಲಿ ನಿವೃತ್ತಿ ಘೋಷಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಪುತ್ರ ಕೆಇ ಕಾಂತೇಶ್ ಅವರಿಗೆ ಈಶ್ವರಪ್ಪ ಟಿಕೆಟ್ ಕೇಳಿದ್ದಾರೆ ಎನ್ನಲಾಗಿದ್ದು ಇಂದು ರಾತ್ರಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಇದಕ್ಕೆ ಮುನ್ಸೂಚನೆ ಎಂದು ಹಲವರು ವಿವರಿಸ್ತಾ ಇದ್ದಾರೆ.


ಈಶ್ವರಪ್ಪನವರಿಗೆ ಪತ್ರಿಕೆಮಾಧ್ಯಮ ಎಂದರೆ ಪಂಚಪ್ರಾಣ ಯಾವಾಗಲೂ ಸದಾ ಸಕ್ರಿಯವಾಗಿ ಮಾಧ್ಯಮಗಳ ಜೊತೆ ಗುರುತಿಸಿಕೊಳ್ಳುವ ಈಶ್ವರಪ್ಪನಂ ತಹ ದೃಢ ಮನಸ್ಸಿನ ವ್ಯಕ್ತಿ ಯಾವುದೇ ಕಾರಣಕ್ಕೂ ಇಂತಹ ರಾಜೀನಾಮೆ ಪತ್ರವನ್ನು ನಡ್ದಾವರಿಗೆ ಕಳುಹಿಸಿ ಇಲ್ಲಿ ವೈರಲಾಗಲು ಬಿಡುತ್ತಿರುವಂತಹ ರಾಜಕಾರಣಿ ಅಲ್ಲ. ಹಾಗಾಗಿ ಇದೊಂದು ಸುಳ್ಳು ಸುದ್ದಿ ಎಂದು ಬಹುತೇಕ ಜನ ಹೇಳುತ್ತಿದ್ದಾರೆ.


ಈ ಸಂಬಂಧ ಪತ್ರಿಕೆ ಈಶ್ವರಪ್ಪ ಹಾಗೂ ಅವರ ಸುಪುತ್ರ ಕಾಂತೇಶ್ ಅವರಿಗೆ ಕರೆ ಮಾಡಲು ಯತ್ನಿಸಿದರೂ ಸಹ ಅವರು ದೂರವಾಣಿಯನ್ನು ಸ್ವೀಕರಿಸಿಲ್ಲ. ಈಶ್ವರಪ್ಪನಂತಹ ಅವರು ಈ ಬಗೆಯ ಪತ್ರವನ್ನು ಕೊಡಲಿಕ್ಕೆ ಸಾಧ್ಯವಿಲ್ಲ ಎನ್ನಲಾಗುತ್ತದೆ. ಇಂತಹ ಕಿತಾಪತಿ ಮಾಡಿದವರಾರು? ಇದು ನಿಜ ಸುದ್ದಿಯಾಗಿದ್ದರೆ ಈಶ್ವರಪ್ಪನವರೇ ನೇರವಾಗಿ ಹೇಳುತ್ತಿದ್ದರಲ್ಲವೇ?
ನೇರ ನಿಷ್ಟುರವಾದಿ ಈಶ್ವರಪ್ಪ ಅವರು ಪತ್ರವನ್ನು ಹೀಗೆ ಕೊಟ್ಟಿದ್ದಾರೆ ಎಂದರೆ ಅದು ನಂಬಲು ಅಸಾಧ್ಯ ಈಗ ಉತ್ತರಿಸ ಬೇಕಾಗಿರುವುದು ಈಶ್ವರಪ್ಪ ಮಾತ್ರ

Exit mobile version