ಶಿವಮೊಗ್ಗ,
ನಂದಿನಿ ಸಂಸ್ಥೆಯನ್ನು ಅಮುಲ್ ಸಂಸ್ಥೆಯೊಂದಿಗೆ ವಿಲೀನ ಮಾಡಬಾರದು ಎಂದು ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕದ ಹೆಮ್ಮೆಯ ಸಂಸ್ಥೆ ನಂದಿನಿ. ಇದು ಸದೃಢವಾಗಿದೆ. ಪ್ರತಿ ವರ್ಷ ಸಾವಿರಾರು ಕೋಟಿ ವ್ಯವಹಾರ ನಡೆಸುತ್ತಿದೆ. ಒಂದು ಕೋಟಿಗೂ ಹೆಚ್ಚು ಗ್ರಾಹಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಲಾಭದಲ್ಲಿಯೂ ಇದೆ. ಹೀಗಿರುವಾಗ ನಂದಿನಿ ಸಂಸ್ಥೆ ಯನ್ನು ಅಮುಲ್ ಸಂಸ್ಥೆ ಜೊತೆ ವಿಲೀನಗೊಳಿ ಸುವುದು ಸರಿಯಲ್ಲ. ಮುಂದೊಂದು ದಿನ ಅಮುಲ್ ಕರ್ನಾಟಕದಲ್ಲಿ ತನ್ನ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡುವುದರಿಂದ ನಂದಿನಿ ಸಂಸ್ಥೆ ನಷ್ಟದಲ್ಲಿದೆ ಎಂಬ ಕಾರಣ ಕೊಟ್ಟು ಮುಚ್ಚುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಮನವಿದಾರರು ಆರೋಪಿಸಿದರು.
ರಾಜ್ಯದ ರೈತರು ತಮ್ಮ ವ್ಯವಸಾಯೋತ್ಪನ್ನಗಳ ಬೆಲೆ ಕುಸಿತಗೊಂಡಾಗ ಸಂಕಷ್ಟದಲ್ಲಿದ್ದರು. ಅತ್ಮಹತ್ಯೆಯ ದಾರಿಯನ್ನೂ ತುಳಿದಿದ್ದರು. ಆಗ ರೈತರು ಹಾಲು ಉತ್ಫಾದನೆ ಮೂಲಕ ಬದುಕ್ನು ಸಾಗಿಸಿಕೊಳ್ಳುತ್ತಿದ್ದರು. ಕೆಎಂಎಫ್ ರೈತರಿಂದ ಕಡಿಮೆ ಬೆಲೆಗೆ ಹಾಲು ಖರೀದಿಸಿ ಕಡಿಮೆ ಬೆಲೆಗೆ ಗ್ರಾಹಕರಿಗೆ ನೀಡುತ್ತಿದ್ದರು. ಈಗ ಅಮುಲ್ ಜೊತೆಯಾದರೆ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗುತ್ತದೆ ಎಂದು ದೂರಿದರು.
ರಾಜ್ಯದಲ್ಲಿ ಬ್ಯಾಂಕುಗಳ ವಿಲೀನವಾಯಿತು, ಎಂಪಿಎಂ ವಿಐಎಸ್‌ಎಲ್ ಮುಚ್ಚಲಾಯಿತು. ಈಗ ನಂದಿನಿ ಸಂಸ್ಥೆಯ ಸರದಿ. ಯಾವುದೇ ಕಾರಣಕ್ಕೂ ಅಮುಲ್‌ನೊಂದಿಗೆ ಇದನ್ನು ವಿಲೀಗೊಳಿಸಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಪದಾಧಿಕಾರಿಗಳಾದ ಪಿ. ಶೇಖರಪ್ಪ, ಇ.ಬಿ. ಜಗದೀಶ್, ಶಿವಮೂರ್ತಿ, ಹಿಟ್ಟೂರು ರಾಜು ಜ್ಞಾನೇಶ್ ಸಿ. ಚಂದ್ರಪ್ಪ, ಕಸಟ್ಟಿ ರುದ್ರೇಶ್, ಕೆ. ರಾಘವೇಂದ್ರ. ಪಿ.ಡಿ.ಮಂಜಪ್ಪ ಮುಂತಾದವರಿದ್ದರು.