Site icon TUNGATARANGA

ಮತದಾನದ ಜಾಗೃತಿಗಾಗಿ ಶಿವಮೊಗ್ಗದಲ್ಲಿಂದು ಸ್ಕೇಟಿಂಗ್ ಹಬ್ಬ, ವೀಡಿಯೋ ಸಹಿತದ ಸುದ್ದಿ ಓದಿ

ಕರ್ನಾಟಕ ಸಂಪಾದಕರ ಸಂಘ, ನ್ಯೂ ಹಾಟ್ ವ್ಹೀಲ್ ಸ್ಕೇಟಿಂಗ್ ಸಂಸ್ಥೆ ಆಯೋಜನೆ

ಶಿವಮೊಗ್ಗ,ಏ.10:

ವೀಡಿಯೋ ನೋಡಿ

*ಮತದಾನದ ಜಾಗೃತಿಗಾಗಿ ಶಿವಮೊಗ್ಗದಲ್ಲಿಂದ ಸ್ಕೇಟಿಂಗ್ ಹಬ್ಬ*
https://youtu.be/UtTBX78FYNI

ಕರ್ನಾಟಕ ಸಂಪಾದಕರ ಸಂಘ, ಮಹಾನಗರ ಪಾಲಿಕೆ, ನ್ಯೂ ಹಾಟ್ ವ್ಹೀಲ್ ಸ್ಕೇಟಿಂಗ್ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಇಂದು ಮತದಾರರ ಜಾಗೃತಿ ಸ್ಕೇಟಿಂಗ್ ಅಭಿಯಾನ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಆವರಣದಿಂದ ಹಮ್ಮಿಕೊಳ್ಳಲಾಗಿತ್ತು.


ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಲೋಖಂಡೆ ಸ್ನೇಹಲ್ ಸುಧಾಕರ್, ಮತದಾನ ಜಾಗೃತಿ ಇಂದು ಬಹುಮುಖ್ಯವಾಗಿದೆ. ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ಆ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮಾತನಾಡಿ, ಸದೃಢ ರಾಜ್ಯ ಕಟ್ಟಲು ಮತದಾನದ ಅವಶ್ಯಕತೆ ಇದೆ. ಮೇ ೧೦ರಂದು ಚುನಾವಣೆ ನಡೆಯಲಿದೆ. ಆ ದಿನ ಯಾವುದೇ ಕಾರಣ ಹೇಳದೆ ಮತಗಟ್ಟೆಗೆ ಬಂದು ಪ್ರತಿಯೊಬ್ಬ ಮತದಾರನೂ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.
ಸ್ವೀಪ್ ಸಮಿತಿಯ ಟಿ.ಆರ್. ಅನುಪಮಾ ಮಾತನಾಡಿ, ಮತದಾನ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಂಡಿದ್ದೇವೆ. ವಿಕಲಚೇತನರಿಂದ ಕ್ಯಾಂಡಲ್ ಅಭಿಯಾನದ ಮೂಲಕ ಹಾಗೂ ಬೈಕ್ ಮತ್ತು ಸೈಕಲ್ ಜಾಥಾದ ಮೂಲಕವೂ ಜಾಗೃತಿ ಹಮ್ಮಿಕೊಳ್ಳಲಾಗುವುದು ಎಂದರು.


ಶ್ರೀನಿಧಿ ಸಂಸ್ಥೆಯ ಟಿ. ಆರ್. ಅಶ್ವತ್ಥ ನಾರಾಯಣ ಶೆಟ್ಟಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್ ಗೋಪಿನಾಥ್, ಜಿ. ವಿಜಯಕುಮಾರ್ ಸೇರಿದಂತೆ ಹಲವರು ಮತದಾನದ ಜಾಗೃತಿ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ನ್ಯೂ ಹಾಟ್ ವ್ಹೀಲ್ ಸ್ಕೇಟಿಂಗ್ ಸಂಸ್ಥೆಯ ಅಧ್ಯಕ್ಷ ಶಿ.ಜು. ಪಾಷಾ, ಸಂಪಾದಕರ ಸಂಘದ ಅಧ್ಯಕ್ಷ ಜಿ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಗಜೇಂದ್ರ ಸ್ವಾಮಿ, ಖಜಾಂಚಿ ರಘುರಾಜ್, ಪದಾಧಿಕಾರಿಗಳಾದ ಜಿ.ಪದ್ಮನಾಭ್, ಹಾಲೇಶ್, ಕೃಷ್ಣಬನಾರಿ, ಸಹ್ಯಾದ್ರಿ ಮಂಜುನಾಥ್, ಕಣ್ಣಪ್ಪ, ನಾಗೇಶ್ ನಾಯ್ಕ, ಆನಂದ್, ಪಿ. ಆಕಾಶ್, ಭರತೇಶ್, ನಾಗರಾಜ ಕಲ್ಲುಕೊಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷ ಗೋಪಾಲ ಯಡಗೆರೆ, ಸ್ಕೇಟಿಂಗ್ ಪ್ರಧಾನ ಕಾರ್ಯದರ್ಶಿ, ರವಿಕುಮಾರ್, ಭಾರತೀಯ ಮಾನವ ಹಕ್ಕುಗಳ ಕಮಿಟಿಯ ಕೆ.ನಾಗರಾಜ್, ಎಸ್.ರಮೇಶ್, ಹಾಡೋನಹಳ್ಳಿ ಜಗದೀಶ್, ಸ್ವೀಪ್ ಸಮಿತಿಯ ನವೀದ್ ಅಹಮದ್ ಪರ್ವೀಜ್, ಪ್ರಮುಖರಾದ ಲೋಕೇಶ್, ರತ್ನಾಕರ್, ಎಂ ರವಿ, ಪ್ರವೀಣ್, ಉಮಾ ಟಿ. ಸೇರಿದಂತೆ ಹಲವರು ಇದ್ದರು.
ಸ್ಕೇಟಿಂಗ್ ಜಾಥಾ ಮಹಾನಗರ ಪಾಲಿಕೆ ಆವರಣದಿಂದ ಆರಂಭವಾಗಿ, ವೀರಭದ್ರೇಶ್ವರ ಟಾಕೀಸ್ ರಸ್ತೆ, ಎಎ ಸರ್ಕಲ್, ಬಸ್‌ಸ್ಟ್ಯಾಂಡ್, ಕುವೆಂಪು ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ, ಮಹಾವೀರ ವೃತ್ತ, ಗೋಪಿ ವೃತ್ತದ ಮೂಲಕ ಮಹಾನಗರ ಪಾಲಿಕೆ ತಲುಪಿತು.


ಜಿಲ್ಲಾಧಿಕಾರಿಗಳಿಂದ ಸ್ಕೇಟಿಂಗ್ ಪಟುಗಳಿಗೆ ಹಾಗೂ ಸಂಪಾದಕರಿಗೆ ಪ್ರಶಂಸೆ
ಮತದಾನ ಪ್ರಜಾಪ್ರಭುತ್ವದ ಹಬ್ಬ: ಜಿಲ್ಲಾಧಿಕಾರಿ
ಮತದಾನ ಎಂಬುದು ಪ್ರಜಾಪ್ರಭುತ್ವದ ಹಬ್ಬವಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಹೇಳಿದರು.
ಅವರು ಇಂದು ಮತದಾನ ಜಾಗೃತಿ ಬಗ್ಗೆ ಆಯೋಜಿಸಿದ್ದ ಸ್ಕೇಟಿಂಗ್ ಜಾಥಾವನ್ನು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸ್ವಾಗತಿಸಿ ಮಾತನಾಡಿದರು.
ಮತದಾನ ಬಹಳ ಮುಖ್ಯ. ಎಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು. ಈಗಾಗಲೇ ಸುಮಾರು ೬೪ ಸಾವಿರ ಹೊಸ ಮತದಾರರ ಚೀಟಿಗಳು ಬಂದಿವೆ. ೫೦ ಸಾವಿರ ಮತಚೀಟಿಗಳನ್ನು ಅಂಚೆ ಮೂಲಕ ಕಳಿಸಲಾಗಿದೆ. ಉಳಿದವನ್ನು ಇಂದು ಮತ್ತು ನಾಳೆ ಕಳಿಸಲಾಗುವುದು. ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರುವವರು ಇಂದು ಮತ್ತು ನಾಳೆ ಅವಕಾಶವಿದ್ದು, ಅದನ್ನು ಉಪಯೋಗಿಸಿಕೊಳ್ಳಿ ಎಂದರು.

Exit mobile version