Site icon TUNGATARANGA

ಆದಿಚುಂಚನಗಿರಿ ಶಾಲೆಯಲ್ಲಿ ಶ್ರೀಗಳಿಂದ ಚಿಣ್ಣರ ಬೇಸಿಗೆ ಶಿಬಿರ ಉದ್ಘಾಟನೆ



ಶಿವಮೊಗ್ಗ,
ಶಿವಮೊಗ್ಗ ಆದಿಚುಂಚನಗಿರಿ ಮಠದಲ್ಲಿಂದು ಮಕ್ಕಳ ಹಬ್ಬ. ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಇಂದು ಬೆಳಗ್ಗೆ ಚಿಣ್ಣರ ಬೇಸಿಗೆ ಶಿಬಿರವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಮಕ್ಕಳದೇ ಕಲರವ.


ಈ ಕಾರ್ಯಕ್ರಮದಲ್ಲಿ ಮಕ್ಕಳ ಉಡುಗೆ-ತೊಡುಗೆ ಹಾವಾ-ಭಾವ, ಹೊಸದೊಂದು ಲೋಕವನ್ನು, ಮಕ್ಕಳ ಪ್ರಪಂಚವನ್ನು ತೆರೆದಿಟ್ಟಿತ್ತು. ಜಾನಪದ ನೃತ್ಯ, ನವಿಲು ಕುಣಿತ, ಕರಾವಳಿ ಭಾಗದ ಜಾನಪದ ಕಲೆಯೆಂದೇ ಹೆಸರಾದ ಹುಲಿವೇಶದ ನಡುವೆ ವಾದ್ಯಗಳ ಗತ್ತಿಗೆ ಕುಣಿಯುವ ದೃಶ್ಯಗಳು ಮನಮೋಹಕವಾಗಿದ್ದವು.


ಅತ್ಯಂತ ಪ್ರಾಚೀನವಾದ ಜಾನಪದ ಪರಿಕಲ್ಪನೆಯ ಕೀಲು ಕುದುರೆಯ ಪರಿಚಯ ಜೊತೆಗೆ ಹಳ್ಳಿಯ ಸೊಗಡನ್ನು, ರೈತರನ್ನು ನೆನಪಿಸುವ ಎತ್ತಿನಗಾಡಿಯ ಅನುಭವದ ನಡುವೆ ಜೀಪು, ಜೀಪ್ಸಿ, ಟ್ರ್ಯಾಕ್ಟರ್, ಕುದುರೆ ಗಾಡಿ, ಒಂಟೆ ಸವಾರಿ ಈಗೆ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಹತ್ತು ಹಲವಾರು ವೈವಿದ್ಯಮಯವಾದ ಪ್ರದರ್ಶನಗಳು ನೋಡುಗರ ಕಣ್ಮನ ಸೆಳೆದದ್ದು ಖಚಿತ.


ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಈ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಫುಟ್‌ಬಾಲ್ ಫ್ರಿ ಸ್ಟೈಲ್ ಮಾಂತ್ರಿಕ, ಗಿನ್ನಿಸ್ ರೆಕಾರ್ಡ್ ಸಾಧಕ ಸತೀಶ್ ಅವರು ಡಾರ್ಜ್‌ವಾಲ್ ಉದ್ಘಾಟಿಸಿದರು.


ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯು ಈ ವರ್ಷ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ವಿಶೇಷ ಬೇಸಿಗೆ ಶಿಬಿರ ಆಯೋಜಿಸಲಾಗಿದ್ದು, ಅಲ್ಲಿ ಚಿತ್ರಕಲೆ, ಸಂಗೀತ-ನೃತ್ಯ ವೇದಿಕ್ ಮ್ಯಾಥೆಮೇಟಿಕ್ಸ್, ಯೋಗ,ಧ್ಯಾನ, ಕ್ಯಾಲಿ ಗ್ರಫಿ ಬರವಣಿಗೆಗಳು,ಒಂಟೆ, ಎತ್ತಿನಗಾಡಿ, ಈಜು, ದೇಶೀಯ ಕ್ರೀಡೆಗಳನ್ನು ಒಳಗೊಂಡ ಮಕ್ಕಳ ಕಲಿಕೆಯನ್ನು ವೀಕ್ಷಿಸಿದ ಶ್ರೀಗಳು, ಕಾರ್ಯಕ್ರಮ ರೂಪಿಸಿದ ಶ್ರೀಆದಿ ಚುಂಚನಗಿರಿ ಶಿಕ್ಷಕ ವೃಂದವನ್ನು ಶ್ಲಾಘಿಸಿದರು.


 ಈ ಸಂದರ್ಭದಲ್ಲಿ  ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಇನ್ನೂ ಮುಂತಾದವರು ಉಪಸ್ಥಿತರಿದ್ದರು 

Exit mobile version