Site icon TUNGATARANGA

ಮರೆಯದೇ ಮತದಾನ ಮಾಡಿ- ಶಿವಮೊಗ್ಗ ನಗರ ಪಾಲಿಕೆಯ ಸ್ವೀಪ್ ಸಮಿತಿಯಿಂದ ಜಾಗೃತಿಗಾಗಿ ಕ್ಯಾಂಡಲ್ ಮಾರ್ಚ್

ಶಿವಮೊಗ್ಗ, ಮಾ.06:

ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮತ್ತು ಮಹಾನಗರ ಪಾಲಿಕೆಯ ಸ್ವೀಪ್ ಸಮಿತಿಯಿಂದ ನಿನ್ನೆ ಸಂಜೆ ಜಿಲ್ಲಾಧಿಕಾರಿ ಕಚೇರಿಯಿಂದ ಶಿವಪ್ಪನಾಯಕನ ವೃತ್ತದವರೆಗೆ
ಕ್ಯಾಂಡಲ್ ಮಾರ್ಚ್ ನಡೆಯಿತು.


ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ ಗ್ರಾಮಾಂತರ ಭಾಗಕ್ಕಿಂತ ನಗರ ಭಾಗದಲ್ಲಿ ಮತದಾನ ಪ್ರಕ್ರಿಯೆ ಕಡಿಮೆ ಆಗಿದೆ. ಆದ್ದರಿಂದ ನಗರ ಭಾಗದ ಮತದಾರರು ಜಾಗೃತರಾಗಬೇಕು. ಜೊತೆಗೆ ಸಾರ್ವಜನಿಕರು ಮರೆಯದೆ
ಮೇ 10ರಂದು ಹತ್ತಿರದ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಸಿಇಒ ಸ್ನೆಹಲ್ ಲೋಖಂಡೆ ಸುಧಾಕರ್ ಕೋರಿದರು.
ಮತದಾನ ಮಾಡುವುದು ಪ್ರಜಾಪ್ರಭುತ್ವದ ಹಬ್ಬ. ಜನರು ಮತದಾನ ಮಾಡಿ, ತಮ್ಮ ಹಕ್ಕನ್ನು ಚಲಾಯಿಸುವುದು ಮುಂದಿನ ಒಂದು ತಿಂಗಳ ಅವಧಿಯಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಕಡಿಮೆ ಆದ ಮತಕಟ್ಟೆಗಳಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.


ಆ ಪ್ರದೇಶದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ವತಿಯಿಂದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ, ವಾಲಿಬಾಲ್ ಪಂದ್ಯಾವಳಿ, ಫುಟ್ಬಾಲ್ ಟೂರ್ನಿ, ಅಣುಕು ಮತದಾನ ಬೂತ್ ಗಳನ್ನು ರಚಿಸಿ, ಮತದಾರರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಿಬ್ಬಂದಿ ವರ್ಗ, ಮಹಾನಗರ ಪಾಲಿಕೆ ಸಿಬ್ಬಂದಿ ವರ್ಗ, ಜೆಸಿಐ ಸದಸ್ಯರು ಭಾಗವಹಿಸಿದ್ದರು.

BJP, candidates, List, High Command,

Exit mobile version