ವಿಧಾನಸಭಾ ಚುನಾವಣೆ ಘೋಷಣೆಯಾಗಿರು ವುದರಿಂದ ಶಿವಮೊಗ್ಗ ವಿದಾನಸಭಾ ಕ್ಷೇತ್ರಕ್ಕೆ ಸಂಬಂದ ಪಟ್ಟಂತೆ ಅಧಿಕೃತವಾಗಿ ಜಾತ್ಯಾತೀತ ಜನತಾದಳ ಪಕ್ಷದ ಪ್ರಚಾರವನ್ನು ಜಿಲ್ಲಾಅಧ್ಯಕ್ಷರಾದ ಶ್ರೀಯುತ ಎಂ ಶ್ರೀಕಾಂತ್ ರವರ ನೇತೃತ್ವದಲ್ಲಿ
ಇಂದು ವಿನೋಬನಗ ರದ ೬೦ ಅಡಿ ರಸ್ತೆಯಲ್ಲಿರುವ ೧೮ನೇ ವಾರ್ಡಿನ ತರಕಾರಿ ಮಾರುಕಟ್ಟೆಯ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೇ ಸಲ್ಲಿಸುವುದರ ಮೂಲಕ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಪಂಚರತ್ನ ಯೋಜನೆಯ ವಿಚಾರಗಳನ್ನು ಮನೆಮನೆಗೆ ತಿಳೀಸುವ ಹಾಗೂ ನಮ್ಮ ಚುನಾವಣಾ ಪ್ರಣಳಿಕೆಯನ್ನು ಬಿಡುಗಡೆ ಮಾಡಲಾಯಿತು. ಈ
ಕಾರ್ಯಕ್ರಮಕ್ಕೆ ನಗರ ಅಧ್ಯಕ್ಷರಾದ ಗೋವಿಂದಪ್ಪನವರು, ಜಿಲ್ಲಾ ಮುಖಂಡುಗಳಾದ ರಾಮಕೃಷ್ಣ, ನಾಗರಾಜ ಕಂಕಾರಿ, ಪಾಲಾಕ್ಷಿ, ನರಸಿಂಹ ಗಂಧದಮನೆ, ಭಾಸ್ಕರ್, ಶ್ಯಾಮು ಡಿ, ಸಿದ್ದಪ್ಪ, ವಿನಯ್ ಬಿ.ಎಸ್, ವಾಜಿದ್ ಯೂಸಪ್ ಬಯ್ಯ, ಮಹಿಳಾ ಅಧ್ಯಕ್ಷೆ ಗೀತಾ ಸತೀಶ್, ದಿವ್ಯ ಪ್ರವೀಣ್, ಪುಷ್ಪ, ಮಂಜುನಾಥ್, ಪ್ರಶಾಂತ್ ರಾಯ್, ರಾಜಣ್ಣ ಇತರರಿದ್ದರು.