ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮಾಡಿರುವ ಶಿಫಾರಸ್ಸನ್ನು ವಾಪಾಸು ತೆಗೆದುಕೊಳ್ಳದಿದ್ದರೆ ಬಿಜೆಪಿ ಸರ್ಕಾರದ ವಿರುದ್ಧ ‘ಬಿಜೆಪಿ ಹಠಾವೋ, ತಾಂಡಾ ಬಚಾವೋ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿ.ಆರ್. ಗಿರೀಶ್ ಹೇಳಿದರು.
ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಇಷ್ಟುದಿನ ಮೌನವಾಗಿದ್ದ ಬಿಜೆಪಿ ಸರ್ಕಾರ ಈಗ ಚುನಾವಣೆಯ ಸಂದರ್ಭದಲ್ಲಿ ಅದನ್ನು ಜಾರಿಗೊಳಿಸು ವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದೆ.
ಇದು ಅತ್ಯಂತ ಖಂಡನೀಯ. ಕೂಡಲೇ ಈ ಶಿಫಾರಸನ್ನು ಏ.೧೦ರೊಳಗೆ ಹಿಂತೆಗೆದುಕೊಳ್ಳಬೇಕು ಅಥವಾ ಹಿಂತೆಗೆದುಕೊಳ್ಳುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕು. ಇಲ್ಲದಿದ್ದರೆ ಬಿಜೆಪಿ ಸರ್ಕಾರದ ವಿರುದ್ಧ ಬಂಜಾರ ಹಾಗೂ ಕೊರಮ, ಕೊರಚ ಹಾಗೂ ಬೋವಿ ಸಮುದಾಯ ಆಂದೋಲನ ಹಮ್ಮಿಕೊಳ್ಳುತ್ತದೆ ಎಂದರು. ಶಿಕಾರಿಪುರದಲ್ಲಿ ಮಾ.೨೭ರಂದು ಬಂಜಾರ ಸಮು ದಾಯವು ಈ ವಿಷಯ ಇಟ್ಟುಕೊಂಡು ಪ್ರತಿಭಟನೆ ನಡಸುತ್ತಿತ್ತು. ಆದರೆ ಪೊಲೀಸರು ಪ್ರತಿಭಟನೆಯ ಹತ್ತಿಕ್ಕಲು ಪ್ರಯತ್ನಿಸಿದರು. ಈ ಗಲಾಟೆಯಲ್ಲಿ ಕೆಲವರು ಬಿ.ಎಸ್. ಯಡಿಯೂರಪ್ಪನವರ ನಿವಾಸದ ಮೇಲೆ ಕಲ್ಲು ತೂರಿದ್ದಾರೆ ಕಲ್ಲು ತೂರಿದವರು ಹೋರಾಟಗಾ ರರಲ್ಲ. ಬಿಜೆಪಿಯವರೇ . ಹೋರಾಟಗಾರರಿಗೆ ಕೆಟ್ಟ ಹೆಸರು ತರಲು ಈ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.
ಘಟನೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಲಾಗಿದೆ. ಮತ್ತು ಹಲವರ ವಿರುದ್ಧ ಕೇಸು ದಾಖ ಲಿಸಿಕೊಳ್ಳಲಾಗಿದೆ. ಇದು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ಮುಖ್ಯವಾಗಿ ಕಾಂಗ್ರೆಸ್ ಕಾರ್ಯರ್ತ ರನ್ನೇ ಗುರಿಯಾಗಿಟ್ಟುಕೊಂಡು ಬಂಧಿಸಲಾಗಿದೆ. ನಮ್ಮದು ಪಕ್ಷಾತೀತ ಹೋರಾಟವಾಗಿತ್ತು. ಈ ಹೋರಾಟದಲ್ಲಿ ಬಿಜೆಪಿ, ಜೆಡಿಎಸ್ ಕಾಂಗ್ರೆಸ್ ಎಲ್ಲಾ ಪಕ್ಷದವರೂ ಇದ್ದರು. ಆದರೆ ಬಂಧಿಸಿದ್ದು ಕಾಂಗ್ರೆಸ್ ಪಕ್ಷದವರನ್ನು ಮಾತ್ರ, ಅದೂ ಅಮಾಯಕರನ್ನು ಅವರು ಹೋರಾಟದಲ್ಲಿ ಭಾಗವಹಿಸಿದ್ದರೇ ವಿನಃ ಕಲ್ಲು ತೂರಾಟದಲ್ಲಿ ಭಾಗವಹಿಸಿರಲಿಲ್ಲ. ಅಷ್ಟಕ್ಕೂ ಜಿಲ್ಲಾ ರಕ್ಷಣಾಧಿಕಾರಿಗಳ ಬಳಿ ದ್ರೋಣ್‌ನಿಂದ ಚಿತ್ರೀಕರಿಸಿದ ವೀಡಿಯೋ ಕೂಡ ಇದೆ ಅದನ್ನು ನೋಡಿಕೊಂಡು ಬಂಧಿಸಬೇಕಿತ್ತು. ಆದರೆ ಅದನ್ನು ನೋಡದೆ ರಾಜ ಕೀಯ ದುರುದೇಶದಿಂದ ಈ ಬಂಧನವಾಗಿದೆ ಎಂದರು.
ಬಿ.ಎಸ್. ಯಡಿಯೂರಪ್ಪನವರಾಗಲಿ, ಮುಖ್ಯ ಮಂತ್ರಿಯವರಾಗಲಿ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೀವ್ ಅವರಾಗಲಿ, ಸಚಿವ ಪ್ರಭು ಚೌಹಾಣ್ ಆಗಲಿ, ಸಂಸದ ಬಿ.ವೈ. ರಾಘವೇಂದ್ರರಾ ಗಲಿ, ಶಾಸಕ ಅಶೋಕ್ ನಾಯ್ಕರಾಗಲಿ ಯಾರೂ ಬಂಜಾರ ಸಮಾಜದ ಬಗ್ಗೆ ಕಾಳಜಿ ತೋರಿಲ್ಲ.
ಅದರಲ್ಲೂ ರಾಜೀವ್ ಅವರು ಬಿಜೆಪಿ ಸೇರುವ ಮುನ್ನ ಸದಾಶಿವ ಆಯೋಗದ ವರದಿಯನ್ನು ಖಂಡಿಸಿದ್ದರು. ಆದರೆ ಈಗ ಬಿಜೆಪಿ ಸೇರಿದ ಮೇಲೆ ಆಯೋಗದ ಪರ ಇದ್ದಾರೆ. ಎಲ್ಲಾ ರಾಜಕಾರಣಿಗಳೂ ಅವಕಾಶ ವಾದಿಗಳಾಗಿದ್ದಾರೆ ಎಂದು ದೂರಿದರು. ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಶಿಫಾರಸನ್ನು ವಾಪಾಸು ತೆಗೆದುಕೊ ಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೃಷ್ಣಾ ನಾಯ್ಕ, ಉಷಾ ನಾಯ್ಕ, ಚಿತ್ರಪ್ಪ ಬೋವಿ, ಉಮಾಮಹೇಶ್ವರ ನಾಯ್ಕ, ಜಯಾನಾಯ್ಕ, ಕಲ್ಲೇಶ್ ನಾಯ್ಕ, ಅಭಿ, ರವಿ ಮುಂತಾದವರಿದ್ದರು.