Site icon TUNGATARANGA

ಸಾಗರ/ ಟಿಪ್ಪರ್ ಸಹಿತ ಕೇಸಿಂಗ್ ಪೈಪ್ ಗಳನ್ನು ಕದ್ದ ಆರೋಪಿ ಬಂಧನ


ಸಾಗರ, ಏ.05:

ಮನೆಯ ಪಕ್ಕದಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 2 ಲಕ್ಷ ಮೌಲ್ಯದ ಕೇಸಿಂಗ್ ಪೈಪ್ ಗಳನ್ನು ಕದ್ದಿದ್ದ ಆರೋಪಿಯನ್ನು ಬಂಧಿಸಿರುವ ಸಾಗರ ಪೊಲೀಸರು ಸುಮಾರು ಹತ್ತು ಲಕ್ಷ ಮೌಲ್ಯದ ಟಿಪ್ಪರ್ ಸಹಿತ ವಸ್ತುಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


ವಿವರ: ಕಳೆದ ಫೆ. 17 ರಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಬಾಳು ಗ್ರಾಮದ ವಾಸಿ ಬೋರ್ ವೆಲ್ ಕಂಟ್ರಾಕ್ಟರ್ ಆದ ಲೋಕನಾಥ ರವರು ತಮ್ಮ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಸಂಗ್ರಹಿಸಿಟ್ಟಿದ್ದ ಬೋರ್ ವೆಲ್ ಗೆ ಅಳವಡಿಸುವ ಕೇಸಿಂಗ್ ಪೈಪ್‍ಗಳನ್ನು , ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ, ಗುನ್ನೆ ಸಂಖ್ಯೆ 0075/2023 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪ್ರಕರಣದಲ್ಲಿ ಕಳುವಾದ ವಸ್ತುಗಳು ಮತ್ತು ಆರೋಪಿಗಳ ಪತ್ತೆಗಾಗಿ ಮಿಥುನ್ ಕುಮಾರ್, ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಅನಿಲ್ ಕುಮಾರ್ ಭೂಮಾರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶದಲ್ಲಿ, ರೋಹನ್ ಜಗದೀಶ್, ಐಪಿಎಸ್ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು ಸಾಗರ ಉಪವಿಭಾಗರವರ ಮೇಲ್ವಿಚಾರಣೆಯಲ್ಲಿ, ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಪ್ರವೀಣ್ ಕುಮಾರ್ ರವರ ನೇತೃತ್ವದ, ಪಿಎಸ್ಐ ನಾರಾಯಣ ಮಧುಗಿರಿ, ಕಾರ್ಗಲ್ ಪೊಲೀಸ್ ಠಾಣಾ ಪಿಎಸ್ಐ ತಿರುಮಲೇಶ್, ಪಿಎಸ್ಐ ಪಿ ಹೊಸಮನಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಸಿಹೆಚ್‍.ಸಿ, ಸನಾವುಲ್ಲಾ, ಷೇಖ್ ಪೈರೋಜ್ ಅಹಮದ್, ಸಿಪಿಸಿ ರವಿಕುಮಾರ್ ಮತ್ತು ಹನುಮಂತ ಜಂಬೂರ್ ರವರುಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.


ಸದರಿ ತನಿಖಾ ತಂಡವು ಪ್ರಕರಣದ 1ನೇ ಆರೋಪಿ ಚಿರಂಜೀವಿ @ ಚಿರು @ ಚಿನ್ನ, 35 ವರ್ಷ, ಹಾಲುಗುಡ್ಡೆ ಗ್ರಾಮ ಹೊಸನಗರ ತಾಲ್ಲೂಕ್ ಈತನನ್ನು ದಿನಾಂಕ: 03-04-2023 ರಂದು ವಶಕ್ಕೆ ಪಡೆದು, ಆರೋಪಿತನಿಂದ ಅಂದಾಜು ಮೌಲ್ಯ 2,00,000/- ರೂಗಳ ಬೋರ್ ವೆಲ್ ಕೇಸಿಂಗ್ ಪೈಪ್ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 10,00,000/- ರೂಗಳ ಟಿಪ್ಪರ್ ಲಾರಿಯನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೋಲಿಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆಯ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Exit mobile version