Site icon TUNGATARANGA

ಸಾಗರ / ಬೋರ್‌ವೆಲ್ ಕೇಸಿಂಗ್ ಪೈಪ್ ಕಳ್ಳತನ / ಒಬ್ಬ ಎಸ್ಕೇಪ್ ಇನ್ನೊಬ್ಬ ಅರೆಸ್ಟ್

: ತಾಲ್ಲೂಕಿನ ಮುಂಬಾಳು ಗ್ರಾಮದ ಬೋರ್‌ವೆಲ್ ಕಂಟ್ರಾಕ್ಟರ್ ಲೋಕನಾಥ್ ಅವರ ಮನೆಯಲ್ಲಿ ಸಂಗ್ರಹಿಸಿರಿಸಿದ್ದ ಬೋರ್‌ವೆಲ್ ಕೇಸಿಂಗ್ ಪೈಪ್ ಕಳ್ಳತನಕ್ಕೆ ಸಂಬಂಧಪಟ್ಟ ಓರ್ವ ಆರೋಪಿಯನ್ನು ಮಾಲು ಸಹಿತ ಗ್ರಾಮಾಂತರ ಠಾಣೆ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.
ಮುಂಬಾಳು ಗ್ರಾಮದ ಲೋಕನಾಥ್ ಅವರು ತಮ್ಮ ಖಾಲಿ ಜಾಗದಲ್ಲಿ ಸಂಗ್ರಹಿಸಿಟ್ಟಿದ್ದ ಬೋರ್‌ವೆಲ್ ಕೇಸಿಂಗ್ ಪೈಪ್‌ಗಳು

ಕಳ್ಳತನವಾಗಿರುವುದಕ್ಕೆ ಸಂಬಂಧಪಟ್ಟಂತೆ ಗ್ರಾಮಾಂತರ ಠಾಣೆಗೆ ಫೆ. ೧೭ರಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆ ಪೊಲೀಸರು ಏ. ೩ರಂದು ಮೊದಲ ಆರೋಪಿ ಹೊಸನಗರ ತಾಲ್ಲೂಕಿನ ಚಿರಂಜೀವಿ ಯಾನೆ ಚಿರು ಯಾನೆ ಚಿನ್ನ ಎಂಬಾತನನ್ನು ಸಾಗರ ಸಮೀಪದ ಬಳಸಗೋಡು ಸಮೀಪ ವಶಕ್ಕೆ ಪಡೆಯಲಾಗಿದೆ.


ಚಿರಂಜೀವಿ ಅವರಿಂದ ಸುಮಾರು ೨ ಲಕ್ಷ ರೂ. ಬೆಲೆಬಾಳುವ ಬೋರ್‌ವೆಲ್ ಕೇಸಿಂಗ್ ಪೈಪ್ ಮತ್ತು ಅದನ್ನು ಸಾಗಿಸುತ್ತಿದ್ದ ಸುಮಾರು ೧೦ ಲಕ್ಷ ರೂ. ಬೆಲೆಯ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎರಡನೇ ಆರೋಪಿ ಸಾಗರ ತಾಲ್ಲೂಕು ಗೇರ್‌ಬೀಸ್ ಗ್ರಾಮದ ಪ್ರವೀಣ್ ಯಾನೆ ಪಾಂಡು ತಲೆ ತಪ್ಪಿಸಿಕೊಂಡಿದ್ದಾರೆ.


ಈಲ್ಲಾ ರಕ್ಷಣಾಧಿಕಾರಿ ಮಿಥನ್ ಕುಮಾರ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಅನಿಲ್ ಕುಮಾರ್ ಭೂಮಾರೆಡ್ಡಿ ಅವರ ಮಾರ್ಗದರ್ಶನದಲ್ಲಿ, ಸಾಗರ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಪ್ರವೀಣ್ ಕುಮಾರ್,

ಸಬ್ ಇನ್ಸ್‌ಪೆಕ್ಟರ್‌ಗಳಾದ ನಾರಾಯಣ ಮಧುಗಿರಿ, ತಿರುಮಲೇಶ್, ಹೊಸಮನಿ, ಸಿಬ್ಬಂದಿಗಳಾದ ಸನಾವುಲ್ಲಾ, ಶೇಕ್ ಫೈರೋಜ್ ಅಹ್ಮದ್, ರವಿಕುಮಾರ್, ಹನುಮಂತ ಜಂಬೂರ್ ಪಾಲ್ಗೊಂಡಿದ್ದರು.

Exit mobile version