Site icon TUNGATARANGA

ಹೊಸನಗರ / ವಾಹನ ಸಹಿತ ಭಾರಿ ಪ್ರಮಾಣದ ಅಕ್ರಮ ಮದ್ಯ ವಶಕ್ಕೆ ಆರೋಪಿ ಪರಾರಿ

ಹೊಸನಗರ : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು ತಾಲೂಕಿನ ನಿವಣೆ ಬಳಿ ಅಬಕಾರಿ ಅಧಿಕಾರಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ವಶಕ್ಕೆ ತೆಗೆದುಕೊಂಡಿದ್ದು ಆರೋಪಿ ಪರಾರಿಯಾಗಿದ್ದಾನೆ‌.

aaaaaaa

ವಿಧಾನಸಭಾ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ ರವಿಶಂಕರ್ ಅಬಕಾರಿ ಆಯುಕ್ತರು ಬೆಂಗಳೂರುರವರ ನಿರ್ದೇಶನದಲ್ಲಿ ಅಬಕಾರಿ ಜಂಟಿ ಆಯುಕ್ತ ಮಂಗಳೂರು ವಿಭಾಗದ ನಾಗರಾಜಪ್ಪ ಟಿ, ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ ಆರ್ ಮತ್ತು ಜಿಲ್ಲಾ ದಂಡಾಧಿಕಾರಿಗಳು ಅಬಕಾರಿ ಉಪ ಆಯುಕ್ತರಾದ ಕ್ಯಾಪ್ಟನ್ ಅಜಿತ್‌ಕುಮಾರ್ ಅಬಕಾರಿ ಉಪ ಅಧೀಕ್ಷಕರಾದ

ಶಿವಪ್ರಸಾದ್ ಹಾಗೂ ತಹಶೀಲ್ದಾರ್‌ಅಮೃತ್ ಆತ್ರೇಶ್‌ರವರ ಮಾರ್ಗದರ್ಶನದಲ್ಲಿ ಖಚಿತ ವರ್ತಮಾನದ ಮೇರೆಗೆ ಏಪ್ರಿಲ್ 4ನೇ ಮಂಗಳವಾರ ಬೆಳಿಗ್ಗೆ ಕೆಎ-30 ಎಂ 0563 ನೊಂದಣಿ ಸಂಖ್ಯೆ ಹೊಂದಿದ ಮಾರುತಿ ಸುಜುಕಿ ಓಮ್ನಿಯಲ್ಲಿ ಅಕ್ರಮವಾಗಿ

ಸಾಗಿಸುತ್ತಿದ್ದ 81,020 ರೂಪಾಯಿ ಬೆಲೆ ಬಾಳುವ ಭಾರತೀಯ ತಯಾರಿಕಾ ಮದ್ಯ 198.72 ಲೀ. ದೊರೆತಿದ್ದು ಪ್ಲೆಯಿಂಗ್ ಸ್ಟ್ಯಾಂಡ್-07ಸಿ ಹುಂಚ ಹೋಬಳಿ ತಂಡದ ಮುಖ್ಯಸ್ಥರು ಮತ್ತು ಸದಸ್ಯರ ಸಹಕಾರದೊಂದಿಗೆ ವಾಹನ ಮತ್ತು ವಾಹನದ ಮಾಲೀಕರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಅಮಿತ್‌ಕುಮಾರ್ ಎಸ್.ಎಂ ಅಬಕಾರಿ ನಿರೀಕ್ಷಕರು ತೀರ್ಥಹಳ್ಳಿ ಉಪವಿಭಾಗರವರು ಮೊಕದ್ದಮೆಯನ್ನು ದಾಖಲಿಸಿದ್ದಾರೆ

.

ವಶಪಡಿಸಿಕೊಂಡಿರುವ ಮದ್ಯ ಮತ್ತು ವಾಹನ ಒಟ್ಟು ಮೌಲ್ಯ 3,31,020 ರೂ‌. ಆಗಿದ್ದು ದಾಳಿಯಲ್ಲಿ ಅಬಕಾರಿ ಕಾನ್ಸ್‌ಟೇಬಲ್ ಮಲ್ಲಿಕ್ ಕೆ.ಜಿ, ರಾಕೇಶ್ ಎಂ.ಕೆ, ಶಕೀಲ್ ಅಹಮದ್, ವಾಹನ ಚಾಲಕ ಅಮಿತ್ ಬಿ.ಕೆ ಮತ್ತು ಪ್ರಸನ್ನರವರು ಪಾಲ್ಗೊಂಡಿದ್ದರು.

Exit mobile version