ವೀಡಿಯೋ ನೋಡಲು ಲಿಂಕ್ ಬಳಸಿ
ಶಿವಮೊಗ್ಗ ಡಿಸಿ ಆಪೀಸ್ ಬಳಿಯೇ ಎಣ್ಣೆ ಹೊಡೆಯೋ ಸ್ಪಾಟ್…, ಆರ್ ಟಿ ಓ ಕಚೇರಿಯವರೇ ಯಾರ ಕೆಲಸ ಇದು? ವಿತ್ ವೀಡಿಯೋ ಸಹಿತದ ಆರೋಪ ನೋಡಿ- vidio- ಕೆಪಿ ಶ್ರೀಪಾಲ್
ಶಿವಮೊಗ್ಗ, ಏ.04:
ಶಿವಮೊಗ್ಗದಲ್ಲಿ ಎಣ್ಣೆ ಹೊಡೆಯೋಕೆ ಬಾರ್ ಗೆ ಹೋದ್ರೆ ಸಿಕ್ಕಾಪಟ್ಟೆ ಖರ್ಚಾಗುತ್ತೆ. ಇನ್ನು ಮಿಲ್ಟ್ರಿ ಹೋದ್ರೆ ಅಲ್ಲೂ ದುಬಾರಿಯಾಗುತ್ತೆ. ಯಾವುದಾದರೂ ಗಿಡ ಮರ ಸಂದಿಯಲ್ಲಿ ಎಣ್ಷೆ ಹೊಡೆದ್ರೆ ಎಲ್ಲಾ ರೊಕ್ಕ ಉಳಿಯುತ್ತೆ ಅನ್ನುವವರಿಗೋಸ್ಕರ ಶಿವಮೊಗ್ಗ ಜನನಿಬಿಡ ಅದೂ ಡಿಸಿ ಅಫೀಸ್ ಪಕ್ಕದಲ್ಲೆ ಜಾಗ ಸೃಷ್ಟಿಯಾಗಿದೆ ಎಂದರೆ ನೋಡದವರು, ನೋಡಿದರೂ ಆಕ್ಷೇಪ ಮಾಡದೇ ಸುಮ್ಮನಿರುವವರು ಅಚ್ವರಿಪಡಬೇಕಾಗಿಲ್ಲ.
ಈ ಮೇಲಿನ ದೃಶ್ಯಗಳು ಮತ್ತು ವಿಡಿಯೋ ಯಾವುದೋ ಬಾರ್ ಅಂಡ್ ರೆಸ್ಟೋರೆಂಟ್ ಅಥವಾ ವೈನ್ ಶಾಪ್ ಅಕ್ಕ ಪಕ್ಕದ ಪೋಟೊವಲ್ಲ, ಮಿಲ್ಟ್ರಿ ಹೋಟೆಲ್ ಬಳಿಯೂ ಇಲ್ಲ.
ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆಯ ನಗರವಾದ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ RTO ಮತ್ತು DFO ಕಚೇರಿ ಮದ್ಯದ ಜಾಗ, ಸರ್ಕಾರಿ ಕಚೇರಿಯಲ್ಲಿ ಪಾರ್ಟಿ ಮಾಡಿ ಇಲ್ಲಿ ಬಾಟಲಿ, ಮೂಳೆ, ಪ್ಲಾಸ್ಟಿಕ್ ಲೋಟ ತಟ್ಟೆ ಹಾಕುತ್ತಾರೋ ಅಥವಾ ಈ ಖಾಲಿ ಜಾಗದಲ್ಲಿ ಪಾರ್ಟಿ ಮಾಡಿದ್ದೊ ಗೊತ್ತಾಗುವುದಿಲ್ಲ ಎಂದು ಚಿತ್ರ ಸಮೇತ ವಕೀಲರು ಹಾಗೂ ಪ್ರಗತಿಪರ ಹೋರಾಟಗಾರರಾದ ಶ್ರೀಪಾಲ್ ಇಡೀ ವ್ಯವಸ್ಥೆಯನ್ನು ಅಣಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಪ್ಲಾಸ್ಟಿಕ್ ನಿಷೇಧ ಎಂದು ಬೊಬ್ಬೆ ಹೊಡೆಯುವ ಸರ್ಕಾರ ತಮ್ಮ ಕಚೇರಿಗಳ ಮಗ್ಗುಲಲ್ಲೆ ಈ ರೀತಿ ಪ್ಲಾಸ್ಟಿಕ್ ಲೋಟ್, ತಟ್ಟೆ ಕವರ್ ಬಿದಿದ್ದು ಅದಕೆ ಬೆಂಕಿ ಹಚ್ವಿ ಸುಟ್ಟರೂ ಕೇಳುವವರಿಲ್ಲ, 5-10 ಅಡಿ ದೂರದಲ್ಲಿ RTO. ಮತ್ತು DFO ಕಚೇರಿ, 50 ಮೀಟರ್ ದೂರದಲ್ಲಿ ಜಯನಗರ ಠಾಣೆ, ಡಿ.ಸಿ.ಆಪೀಸ್, ಕೋರ್ಟ್ ಎಲ್ಲವು ಇವೆ,
ತಮ್ಮ ಕಚೇರಿಗಳ ಬಳಿಯೇ ಸ್ವಚ್ಚತೆ ಇಲ್ಲದಿರುವಾಗ. ಇಂತಹ ಅಧಿಕಾರಿಗಳಿಂದ. ಊರು ಸ್ವಚ್ಚ ಇರಬಹುದೆ, ಪರಿಸರ ಉಳಿಯಬಹುದೆ ? ಸ್ಮಾರ್ಟ್ ಸಿಟಿ ಎಂದರೆ ಇದೇನಾ? ಎಂದು ಅವರು ಪ್ರಶ್ನಿಸಿದ್ದಾರೆ.