Site icon TUNGATARANGA

ಬೇಸಿಗೆ ಶಿಬಿರದ ಸದುಪಯೋಗ ಪಡೆದುಕೊಳ್ಳಿ / ಸ್ಟೈಲ್ ಡಾನ್ಸ್ ಕ್ರಿವ್ ಸಂಸ್ಥೆಯ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿದ ಕಾಂತೇಶ್

ಶಿವಮೊಗ್ಗ,
ನಗರದ ಸ್ಟೈಲ್ ಡಾನ್ಸ್ ಕ್ರಿವ್ ಶಿವಮೊಗ್ಗ ಸಂಸ್ಥೆಯ “ಮಜಾ ವಿತ್ ರಜಾ” ಎಂಬ ಹೆಸರಿನಡಿ ೧೫ನೇ ವರ್ಷದ ರಾಜ್ಯಮಟ್ಟದ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು.


ಸಂಸ್ಥೆಯ ಅಧ್ಯಕ್ಷ ಕೆ.ಈ. ಕಾಂತೇಶ್ ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳಿಗೆ ಒಳ್ಳೆಯ ವಿಷಯಗಳನ್ನು ಕಲಿಸಿಕೊಡಲು ಇಂತಹ ಶಿಬಿರ ಗಳು ಸಹಕಾರಿಯಾಗಲಿವೆ. ಹಿಂದಿನ ದಿನಗಳಲ್ಲಿ ಇಂತಹ ಶಿಬಿರಗಳು ನಡೆಯುತ್ತಿರಲಿಲ್ಲ. ನಮಗೆ ಅವಕಾಶಗಳು ಸಿಗುತ್ತಿರಲಿಲ್ಲ. ಇಂದು ಹಲವಾರು ಅವಕಾಶಗಳು ದೊರೆಯುತ್ತಿದ್ದು, ಮಕ್ಕಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.


ಈ ಶಿಬಿರದಲ್ಲಿ ಅನೇಕ ಮಾದರಿಯ ನೃತ್ಯ, ಸಂಗೀತ,ಕರಾಟೆ,ಯೋಗ, ಚಿತ್ರಕಲೆ, ಸಿನಿಮಾ, ನಾಟಕ,ನಿರೂಪಣೆ, ಆಡಿಷನ್,ಫ್ಯಾಷನ್ ಷೋ, ಜಿಮ್ನಾಸ್ಟಿಕ್ಸ್, ದೇಸಿ ಆಟ, ಪರೀಕ್ಷಾ ಸಿದ್ದತೆ, ತಂದೆ ತಾಯಿ ಗುರು ಹಿರಿಯರ ಸಂಸ್ಕೃತಿ, ಇತ್ಯಾದಿ ಒಂದೇ ಸೂರಿನಡಿ ಹೇಳಿಕೊಡಲಾಗುವುದು ಎಂದರು.


ಸಂಸ್ಥೆಯ ಸಂಸ್ಥಾಪಕರ ಶಶಿಕುಮಾರ್ ಮಾತನಾಡಿ, ಮಕ್ಕಳು ಸಮಾಜದ ಭವಿಷ್ಯ. ಅವರಲ್ಲಿ ಉನ್ನತ ವ್ಯಕ್ತಿತ್ವವನ್ನು ರೂಪುಗೊಳಿ ಸುವುದು ಇಂದಿನ ಅವಶ್ಯಕತೆಯಾಗಿದೆ. ಅದರಲ್ಲೂ ಕೊಳಗೇರಿಗಳ ಮಕ್ಕಳಿಗೆ ಹೆಚ್ಚಿನ ಗಮನ ಕೊಡುವ ಅಗತ್ಯವಿದೆ.

ಇಂದಿನ ಟಿವಿ ಮಾದ್ಯಮ, ಮೊಬೈಲ್‌ಗಳ ಅತಿಯಾದ ಬಳಕೆಯಿಂದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿದ್ದು, ಉನ್ನತ ಭಾವನೆಗಳು, ಮೌಲ್ಯಗಳು ನಶಿಸಿಹೋಗುತ್ತಿವೆ ಎಂದು ಕಳವ್ಯಕ್ತಪಡಿಸದ ಅವರು, ಏಪ್ರಿಲ್ ೧೦ರ ಒಳಗೆ ನಮ್ಮ ಶಿಬಿರಕ್ಕೆ ಸೇರಿದ ಪುಟಾಣಿ ಮಕ್ಕಳಿಗೆ ಶುಲ್ಕದಲ್ಲಿ ೫೦% ರಿಯಾಯಿತಿಯನ್ನು ನೀಡಲಿದ್ದೇವೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಶಶಿಕುಮಾರ್ ಎನ್ ಅವರು ತಿಳಿಸಿದ್ದಾರೆ. ಶಿಬಿರದ ನೊಂದಣಿಗಾಗಿ ಕೂಡಲೇ ಕರೆ ಮಾಡಿ : ೯೮೪೫೩ – ೮೮೦೨೮ಗೆ ಸಂಪರ್ಕಿಸಿ ಎಂದರು.

Exit mobile version