ಶಿವಮೊಗ್ಗ, ಏ.03:
ಕರ್ನಾಟಕ ಪತ್ರಿಕಾ ಸಂಪಾದಕರ ಸಂಘ (ರಿ)ವು ಪದಾಧಿಕಾರಿಗಳನ್ನು ಪುನರ್ ನವೀಕರಿಸಿದ್ದು, ಸಂಘದ ನೂತನ ಅಧ್ಯಕ್ಷರಾಗಿ ಶಿವಮೊಗ್ಗ ಸಿಂಹ ಸಂಪಾದಕ ಜಿ. ಚಂದ್ರಶೇಖರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತುಂಗಾತರಂಗ ದಿನಪತ್ರಿಕೆಯ ಸಂಪಾದಕ ಎಸ್ ಕೆ ಗಜೇಂದ್ರ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಶಿವಮೊಗ್ಗ ಸೂರ್ಯ ಕಂಪರ್ಟ್ಸ್ ಎಡಿಟರ್ಸ್ ಕ್ಲಬ್ ನಲ್ಲಿ ನಡೆದ ಸಂಪಾದಕರ ಸಂಘದ ಸಭೆಯಲ್ಲಿ ನೂತನ ಸಮಿತಿ ಆಯ್ಕೆಯಾಗಿದ್ದು, ಸಂಘದ ಖಜಾಂಚಿಯಾಗಿ ರಘುರಾಜ್ ಹೆಚ್. ಕೆ. ಅವರನ್ನು ಆಯ್ಕೆ ಮಾಡಲಾಗಿದೆ.
ಗೌರವಾಧ್ಯಕ್ಷರಾಗಿ ವಾಯ್ಸ್ ಆಫ್ ಶಿವಮೊಗ್ಗದ ಬಂಡಿಗಡಿ ನಂಜುಂಡಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಸಂಘದ ಉಪಾಧ್ಯಕ್ಷರುಗಳಾಗಿ ಈ ಪತ್ರಿಕೆಯ ನಾಗೇಶ್ ನಾಯ್ಕ್, ಉಷಾಮಹಿ ಪತ್ರಿಕೆಯ ಕಣ್ಣಪ್ಪ ಅವರನ್ನು ನೇಮಿಸಲಾಗಿದ್ದ, ಸಹ ಕಾರ್ಯದರ್ಶಿಯಾಗಿ ಕ್ಷಿತಿಜ ಪತ್ರಿಕೆಯ ಕೃಷ್ಣಬನಾರಿ, ಸಂಘಟನಾ ಕಾರ್ಯದರ್ಶಿಗಳಾಗಿ ಸಹ್ಯಾದ್ರಿ ಪತ್ರಿಕೆಯ ಎನ್ ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ.
ನಿರ್ದೇಶಕರಾಗಿ ಛಲ
ದಂಕಲ್ಲ ದಿನಪತ್ರಿಕೆಯ ಜಿ. ಪದ್ಮನಾಬ್, ಕಂಠೀರವ ಪತ್ರಿಕೆಯ ಎನ್ಎಂ ಶಶಿಕುಮಾರ್, ಅಜೇಯ ಪತ್ರಿಕೆಯ ಶ್ರೀನಿವಾಸನ್, ನಾವಿಕ ಪತ್ರಿಕೆಯ ರಂಜಿತ್, ಎಸ.ಆರ್., ಮಲೆನಾಡು ಎಕ್ಸ್ ಪ್ರೆಸ್ ನ ಶಿ.ಜು. ಪಾಶಾ, ರಾಜರುಷಿಯಾ ಎ. ಭರತೇಶ್, ಸೂರ್ಯ ಗಗನದ ಗಾ.ರಾ.ಶ್ರೀನಿವಾಸ್, ನುಡಿ ಗಿಡಪತ್ರಿಕೆಯ ಹೆಚ್ಎನ್ ಮಂಜುನಾಥ್ , ಬೆಳಗಿನ ಛಲಗಾರದ ಜಿ.ನಿಶಾಂತ್, ಭದ್ರಾವಾಹಿನಿಯ ಸುಭಾಷ್ ರಾವ್ ಸಿಂದ್ಯಾ, ಜೈ ಕರುನಾಡು ಪತ್ರಿಕೆಯ ನಾಗರಾಜ್ ಕಲ್ಲುಕೊಪ್ಪ, ಹೊಸ ವಿಚಾರ ಪತ್ರಿಕೆಯ ಹಾಲೇಶ್ ಆರ್., ಆಜ್ ಕಾ ಇನ್ ಕ್ಯೂಲ್ಯಾಬ್ ಪತ್ರಿಕೆಯ ಲಿಯಾಖತ್, ಸತ್ಯ ಸಂಗತಿ ಪತ್ರಿಕೆಯ ಎಸ್. ಎಲ್. ವಿನೋದ್, ಭುವನವಾರ್ತೆಯ ಕೆ ಎ ಪ್ರಶಾಂತ್, ಶಿವಮೊಗ್ಗ ಸಂಚಲನದ ಆನಂದ್ ಅವರನ್ನು ನೇಮಕ ಮಾಡಲಾಗಿದೆ.
ಪತ್ರಿಕಾ ಸಂಪಾದಕರ ಹಿತಾಕಾಂಕ್ಷೆಗಾಗಿ ರೂಪಿತವಾಗಿರುವ ಈ ಸಂಸ್ಥೆ ರಾಜ್ಯ ವ್ಯಾಪಿ ಸಂಘಟನೆ ಮೂಲಕ ಸ್ಥಳೀಯ ಪತ್ರಿಕೆಗಳ ಹಿತ ಕಾಪಾಡಲು ಸಂಘಟನಾತ್ಮಕವಾದ ಧ್ವನಿ ಎತ್ತಲು ಹಾಗೂ ಸಂಪಾದಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಲು, ಸಮಾಜಮುಖಿ ಚಟುವಟಿಗಳಲ್ಲಿ ತೊಡಗಿಸಿಕೊಳ್ಳಲು ಈ ಸಂಘ ಕಟ್ಟಿಬದ್ಧವಾದ ಕಾರ್ಯ ಮುಂದುವರೆಸಲು ನಿರ್ಧರಿಸಿತು.