ಶಿವಮೊಗ್ಗ, ಏ.01:
ಚುನಾವಣೆ ಹಿನ್ನಲೆಯಲ್ಲಿ ಶಿವಮೊಗ್ಗದ ಹೊರವಲಯದ ಭಾಗದಲ್ಲಿ ತುಂಗಾ ನಗರ ಪೊಲೀಸರು ಭರ್ಜರಿ ಭೇಟೆ ಆಡಿದ್ದಾರೆ. ಭಾರೀ ಹಣವನ್ನ ಸಾಗಿಸುತ್ತಿದ್ದ ವಾಹನವನ್ನ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯ 36 ಚೆಕ್ ಪೋಸ್ಟ್ ರಚಿಸಿಕೊಂಡಿರುವ ಚುನಾವಣೆ ಆಯೋಗ ನಗರದ ಹೊರ ಭಾಗದಲ್ಲಿರುವ ಹರಕೆರೆ ಚೆಕ್ ಪೋಸ್ಟ್ ನಲ್ಲಿ ಸಾಗಿಸುತ್ತಿದ್ದ ಬೊಲೆರೋ ವಾಹನದಲ್ಲಿ 1 ಕೋಟಿ 39 ಲಕ್ಷ ರೂ. ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಬ್ಯಾಂಕ್ ನ ಎಟಿಎಂಗಳಿಗೆ ಹಣ ಹಾಕುವ ವಾಹನದಲ್ಲಿ ಈ ಹಣ ಪತ್ತೆಯಾಗಿದೆ. ಕೆಎ 01 ಎಕೆ 7710 ವಾಹನದಲ್ಲಿ ಈ ಹಣ ಸಾಗಿಸುತ್ತಿದ್ದ ವೇಳೆ ಹಣ ಪತ್ತೆಯಾಗಿದೆ. ಪತ್ತೆಯಾದ ಹಣಕ್ಕೆ ಯಾವುದೇ ದಾಖಲಾತಿ ಪತ್ತೆಯಾಗದ ಹಿನ್ನಲೆಯಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.