Site icon TUNGATARANGA

ಏ.7 ರಂದು 100 ಥಿಯೇಟರ್‌ಗಳಲ್ಲಿ ನಮ್ ನಾಣಿ ಮದ್ವೆ ಪ್ರಸಂಗ ಬಿಡುಗಡೆ: ಹೇಮಂತ್ ಹೆಗಡೆ

ಶಿವಮೊಗ್ಗ: ಉತ್ತರ ಕನ್ನಡ ಭಾಷೆ ಹಾಗೂ ಅಲ್ಲಿನ ಸಂಸ್ಕೃತಿಯನ್ನೊಳಗೊಂಡು ನಿರ್ಮಾಣವಾಗಿರುವ ನಮ್ ನಾಣಿ ಮದ್ವೆ ಪ್ರಸಂಗ ಏ.೭ರಂದು ರಾಜ್ಯಾದ್ಯಂತ ಸುಮಾರು ೧೦೦ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಾಯಕ ನಟ ಹಾಗೂ ನಿರ್ದೇಶಕ ಹೇಮಂತ್ ಹೆಗಡೆ ತಿಳಿಸಿದರು.


ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದು ಕೃಷಿಯಲ್ಲಿ ತೊಡಗಿರುವ ಹುಡುಗರ ಮದುವೆಗೆ ಹುಡುಗಿಯರೇ ಸಿಗುತ್ತಿಲ್ಲ ಎಂಬ ಕೂಗು ಎದ್ದಿದೆ. ಇದು ಉತ್ತರಕನ್ನಡ ಜಿಲ್ಲೆಯ ಸಮಸ್ಯೆ ಎಂದು ಸಿನಿಮಾ ಮಾಡಲು ನಿರ್ಧರಿಸಿ ಕ್ಷೇತ್ರಕಾರ್ಯಕ್ಕೆ ಹೊರಟಾಗ ಗೊತ್ತಾಗಿದ್ದು, ಇದು ಉತ್ತರ ಕನ್ನಡದ ಸಮಸ್ಯೆ ಮಾತ್ರವಲ್ಲ ಇಡೀ ರಾಜ್ಯದಲ್ಲಿದೆ ಎಂಬುದು ಗೊತ್ತಾಗಿದೆ ಎಂದರು.


ಆದರೂ ಉತ್ತರ ಕನ್ನಡದ ನವಿರಾದ ಭಾಷೆಯಲ್ಲಿಯೇ ಸಂಭಾಷಣೆ ಅಳವಡಿಸಿಕೊಂಡು ಚಿತ್ರ ನಿರ್ಮಾಣ ಮಾಡಲಾಗಿದೆ. ಇದು ಪೂರ್ತಿಯಾಗಿ ಶಿರಸಿ, ಸಿದ್ಧಾಪುರ, ಹೊನ್ನಾವರ ಭಾಗದಲ್ಲಿಯೇ ಚಿತ್ರೀಕರಿಸಲಾಗಿದೆ. ಗಂಭೀರವಾದ ಹಾಸ್ಯ ಇದರಲ್ಲಿದೆ ಎಂದರು.


ಪದ್ಮಜಾ ರಾವ್, ಗೀತಾಂಜಲಿ ಮಂಗಲ್ ಸೇರಿದಂತೆ ಅನೇಕ ಕಲಾವಿದರು ಇzರೆ. ಚಿತ್ರೀಕರಣ ಪೂರ್ಣಗೊಂಡು ಹಾಡುಗಳನ್ನು ಯುಟೂಬ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ತಂಗಿ ನಿನಗೆ ಹಾಡಿಕೆ ೨ ಲಕ್ಷ ವ್ಯೂವ್ಸ್ ಬಂದಿವೆ. ಯೂರೋಪಿನಲ್ಲಿ ಚಿತ್ರ ಪ್ರದರ್ಶನಕ್ಕೆ ಕೂಡ ಬೇಡಿಕೆ ಬಂದಿದೆ ಎಂದರು.


ಮಂಜುನಾಥ ಹೆಗಡೆ ಮಾತನಾಡಿ, ಒಂದು ಚೂರು ಅಶ್ಲೀಲ ಇಲ್ಲದೆ ಹಾಸ್ಯಭರಿತವಾದ ಮಲೆನಾಡಿನ ಸೊಗಡಿನ ಚಿತ್ರ ಇದಾಗಿದೆ. ಸಾಮರ್ಥ್ಯಕ್ಕೂ ಮೀರಿ ಸಿನಿಮಾ ಮಾಡಬಹದು. ಅದರ ಯಶಸ್ಸು ಪ್ರೇಕ್ಷಕರಿಗೆ ಬಿಟ್ಟಿದ್ದು. ಹಳ್ಳಿಯ ಪ್ರತೀ ಮನೆಯಲ್ಲಿನ ಈ ಸಮಸ್ಯೆಯನ್ನು ಇಲ್ಲಿ ತೋರಿಸಲಾಗಿದೆ ಎಂದ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ನಾಯಕ ನಟಿ ಶ್ರೇಯಾ ವಸಂತ್ ಇದ್ದರು

Exit mobile version